ಬೆಂಗಳೂರಲ್ಲಿ ತಾಂಜಾನಿಯಾ ಯುವತಿಯ ಬೆತ್ತಲೆಗೊಳಿಸಿ ಹಲ್ಲೆ

Subscribe to Oneindia Kannada

ಬೆಂಗಳೂರು, ಫೆಬ್ರವರಿ, 03: ಬೆಂಗಳೂಲ್ಲಿ ಮಹಿಳಾ ದೌರ್ಜನ್ಯದ ಮತ್ತೊಂದು ಪ್ರಕರಣ ವರದಿಯಾಗಿದೆ. ಆಫ್ರಿಕಾದ ತಾಂಜೇನಿಯಾ ಮೂಲದ 21 ವರ್ಷದ ಯುವತಿಯನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.[ವಿಡಿಯೋ : ತಾಂಜಾನಿಯಾ ಮಹಿಳೆ ಮೇಲೆ ದಾಳಿ]

ಭಾನುವಾರ, ಜನವರಿ 31 ರಂದೇ ಘೋರ ಘಟನೆ ನಡೆದಿದೆ. ಆಚಾರ್ಯ ಕಾಲೇಜಿನ ಬಿಬಿಎ ವಿದ್ಯಾರ್ಥಿನಿ ಉದ್ರಿಕ್ತ ಜನರಿಂದ ಹಲ್ಲೆಗೆ ಒಳಗಾಗಿದ್ದಾಳೆ. ಹೆಸರಘಟ್ಟದಲ್ಲಿ ಯುವತಿ ಮೇಲೆ ಹಲ್ಲೆ ಮಾಡಲಾಗಿದೆ.[ವಿದ್ಯಾರ್ಥಿನಿ ವೇತನ ಬೇಕಾ? ಹಾಗಿದ್ರೆ ಕನ್ಯತ್ವ ಉಳಿಸಿಕೊಳ್ಳಿ!]

Bengaluru Shame: Girl stripped off, paraded naked

ಹಲ್ಲೆ ಮಾಡಿದ್ದು ಯಾಕೆ?
ಭಾನುವಾರ ಆಫ್ರಿಕಾದ ವಿದ್ಯಾರ್ಥಿಯೊಬ್ಬ ಕಾರು ಮಾಡಿದ ಅಪಘಾತದಲ್ಲಿ ಹೆಸರಘಟ್ಟದ 35 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಇದನ್ನು ತಿಳಿದ ತಾಂಜೇನಿಯಾದ ವಿದ್ಯಾರ್ಥಿನಿ ಅರ್ಧ ಗಂಟೆ ನಂತರ ಅಪಘಾತ ಸ್ಥಳಕ್ಕೆ ಧಾವಿಸಿದ್ದಳು. ಈ ವೇಳೆ ಸ್ಥಳದಲ್ಲಿ ಸೇರಿದ್ದ ಜನರ ಗುಂಪು ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿತ್ತು. ಈ ವೇಳೆ ಸ್ಥಳದಲ್ಲಿಯೇ ಪೊಲೀಸರಿದ್ದರೂ ತಡೆಯುವ ಯತ್ನ ಮಾಡಲಿಲ್ಲ. ಯುವತಿ ಆಗಮಿಸಿದ್ದ ಕಾರಿಗೆ ಬೆಂಕಿ ಇಡಲಾಗಿದೆ.[ಮಹಿಳಾ ದೌರ್ಜನ್ಯ ವಿರುದ್ದ ದನಿಯಾದ ವಾಮಾ ಬಲ್ದೋಟ]

ಕಾರಿನಲ್ಲಿದ್ದ ಯುವತಿ ಸೇರಿದಂತೆ ಇಬ್ಬರು ವಿದ್ಯಾರ್ಥಿಗಳನ್ನು ಜನರ ಗುಂಪು ಹೊರಕ್ಕೆ ಎಳೆದು ನಿಂದಿಸಿದೆ. ನಂತರ ಹಲ್ಲೆ ಮಾಡಲು ಮುಂದಾಗಿದೆ. ಯುವತಿ ಬಳಿ ಟಿ ಶರ್ಟ್ ತೆಗೆಯುವಂತೆ ಒತ್ತಾಯ ಮಾಡಲಾಗಿದೆ. ಭಯಭೀತಗೊಂಡ ಯುವತಿ ಬಿಎಂಟಿಸಿ ಏರುವ ಯತ್ನ ಮಾಡಿದರೂ ಆಕೆಯನ್ನು ಹೊರಕ್ಕೆ ನೂಕಲಾಗಿದೆ. ಹರಿದ ಬಟ್ಟೆಯೊಂದಿಗೆ ಆಕೆ ನೆಲಕ್ಕೆ ಬಿದ್ದಿದ್ದಾಳೆ. ಇದಾದ ನಂತರ ತಾಂಜೇನಿಯಾದ ಯುವತಿ ಪೊಲೀಸರ ಬಳಿ ದೂರು ನೀಡಲು ತೆರಳಿದರೂ ಸ್ಪಂದನೆ ಸಿಕ್ಕಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 21-year-old girl, who hailed from Tanzania, Africa, has been stripped off, beaten up and paraded naked by a mob. The shocking incident took place in Bengaluru on Sunday, Jan 31. The girl, who has been identified as a student of BBA at the Acharya College, has become victim following an accident in which a resident of Hesaraghatta (27 km from Bengaluru City) mowed down.
Please Wait while comments are loading...