ಲಕ್ಕಿ ಅಲಿ ಕೊಲೆ ಸ್ಕೆಚ್ ವಿಫಲಗೊಳಿಸಿದ ಸೆಕ್ಯುರಿಟಿ
ಬೆಂಗಳೂರು, ಡಿ.3: ಬಾಲಿವುಡ್ ನ ಹೆಸರಾಂತ ಹಿನ್ನೆಲೆ ಗಾಯಕ, ಪಾಪ್ ತಾರೆ ಲಕ್ಕಿ ಅಲಿ ಕೊಲೆಗೆ ಹಾಕಿದ್ದ ಸ್ಕೆಚ್ ವಿಫಲಗೊಂಡಿದೆ. ನಗರದ ಫಾರ್ಮ್ ಹೌಸ್ ನಲ್ಲಿ ಲಕ್ಕಿ ಅಲಿ ಕೊಲೆಗೆ ನಡೆದ ಯತ್ನವನ್ನು ಯಲಹಂಕ ಪೊಲೀಸರು ತಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲು ಫಾರ್ಮ್ ಹೌಸ್ ನ ಸೆಕ್ಯುರಿಟಿ ನೀಡಿದ ಸುಳಿವು ಕಾರಣ ಎಂದು ಪೊಲೀಸರು ಹೇಳಿದ್ದಾರೆ.
ಯಲಹಂಕದ ಹೊರ ವಲಯದಲ್ಲಿರುವ ಲಕ್ಕಿ ಅಲಿ ಅವರ ತೋಟದ ಮನೆ ಹಕ್ಕು ಸ್ವಾಮ್ಯತೆ ಕುರಿತಂತೆ ವಿವಾದ ಎದ್ದಿತ್ತು. ಲಕ್ಕಿ ಅಲಿ ಅವರು ಸಂಬಂಧಿಕರ ಜೊತೆ ಈ ಬಗ್ಗೆ ಸಂಧಾನ ಮಾತುಕತೆ ವಿಫಲವಾಗಿತ್ತು. ಲಕ್ಕಿ ಅಲಿಗೆ ಬೆದರಿಕೆ ಕರೆಗಳು ಬರತೊಡಗಿತ್ತು. ಕೂಡಲೇ ಯಲಹಂಕ ಠಾಣೆಗೆ ತೆರಳಿ ಲಕ್ಕಿ ಅಲಿ ದೂರು ನೀಡಿದ್ದರು. ಪೊಲೀಸ್ ರಕ್ಷಣೆ ಬೇಡಿದ್ದರು.

ಅದರೆ, ಅಷ್ಟರಲ್ಲೇ ಲಕ್ಕಿ ಅಲಿ ವಿರೋಧಿಗಳ ಗುಂಪು ಅವರ ಕೊಲೆ ಸಂಚು ರೂಪಿಸಿತ್ತು. ತೋಟದ ಮನೆಯಿಂದ ಲಕ್ಕಿ ಅಲಿ ಹೊರ ಬರುತ್ತಿದ್ದಂತೆ ಶೂಟ್ ಮಾಡಲು ಕಾದಿದ್ದರು. ಶೂಟರ್ ಗಳ ಗುಂಪು ತೋಟದ ಮನೆ ಸುತ್ತಾ ಮುತ್ತಾ ಸುಳಿದಾಡುತ್ತಿರುವುದನ್ನು ಗಮನಿಸಿದ ಫಾರ್ಮ್ ಹೌಸ್ ಸೆಕ್ಯುರಿಟಿ ಗಾರ್ಡ್ ಈ ಬಗ್ಗೆ ಪೊಲೀಸರಿಗೆ ಸೂಚನೆ ನೀಡಿದ್ದಾನೆ. ಅವರ ಚಲನವಲನದ ಮೇಲೆ ನಿಗಾವಹಿಸಿದ್ದಾನೆ. ಕಾಲ ಕಾಲಕ್ಕೆ ಪೊಲೀಸರಿಗೆ ಮಾಹಿತಿ ನೀಡುತ್ತಾ ಎಲ್ಲರ ಬಳಿ ಆಯುಧಗಳಿವೆ ಎಂದು ಸಂದೇಶ ಕಳಿಸಿದ್ದಾನೆ.
ಲಕ್ಕಿ ಅಲಿ ಕೊಲೆ ಮಾಡಲು ಬಂದಿದ್ದ ರೌಡಿ ಮಹೇಶ ಹಾಗೂ ಆತನ ಏಳು ಸಹಚರರ ತಂಡವನ್ನು ಯಲಹಂಕ ನ್ಯೂ ಟೌನ್ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಬಂಧಿತರ ಪೈಕಿ ಒಬ್ಬ ಬಾಯ್ಬಿಟ್ಟು ಆಸಿಫ್ ಅಲಿ ಎಂಬುವರು ನಮಗೆ ಸುಪಾರಿ ನೀಡಿದ್ದರು ಎಂದಿದ್ದಾನೆ. ಪೊಲೀಸರು ತಮ್ಮ ತನಿಖೆ ಮುಂದುವರೆಸಿದ್ದಾರೆ.
56 ವರ್ಷ ವಯಸ್ಸಿನ ಲಕ್ಕಿ ಅಲಿ ಅವರು ಬಾಲಿವುಡ್ ನ ನಟ ಮೆಹಮೂದ್ ಅವರ ಮಗ. ತಂದೆ ಅವರ ನೆನಪಿನ ಮನೆಯಲ್ಲಿ ಹಲವು ದಶಕಗಳಿಂದ ನೆಲೆಸಿದ್ದಾರೆ. ಅದರೆ, ಇತ್ತೀಚೆಗೆ ಆಸ್ತಿ ಕಬಳಿಸಲು ಸಂಬಂಧಿಕರು ಯತ್ನಿಸುತ್ತಿದ್ದಾರೆ ಎಂದು ಪೊಲೀಸರ ಮೊರೆ ಹೊಕ್ಕಿದ್ದಾರೆ.
-
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ












Click it and Unblock the Notifications