8 ಜನರ ಬದುಕಿಗೆ ಆಶಾಕಿರಣವಾದ ಬೆಂಗಳೂರು ಯುವಕ

Posted By: Staff
Subscribe to Oneindia Kannada

ಬೆಂಗಳೂರು,ಮಾರ್ಚ್,10: ರಸ್ತೆ ಅಪಘಾತಕ್ಕೆ ಒಳಗಾಗಿ ಸಾಯುವ ಕೊನೆ ಗಳಿಗೆಯಲ್ಲಿ ನೇತ್ರಗಳನ್ನು ದಾನ ಮಾಡಿ ಸಾರ್ಥಕತೆ ಮೆರೆದ ಹರೀಶ್ ನೆನಪು ಜನರಲ್ಲಿ ಹಚ್ಚಹಸಿರಾಗಿಯೇ ಇದೆ. ಇದೀಗ ಈ ನೆನಪಿಗೆ ತನ್ನ ಎಂಟು ಅಂಗಾಂಗಳನ್ನು ದಾನ ಮಾಡಿದ ಅಮೆರಿಕಾದಲ್ಲಿರುವ ಬೆಂಗಳೂರಿನ ಯುವಕನು ಸೇರಿದ್ದು, ಮಹಾದಾನಿ ಎನಿಸಿಕೊಂಡಿದ್ದಾನೆ.

ಬೆಂಗಳೂರಿನ ಬೊಮ್ಮಸಂದ್ರದ ವಿದ್ಯಾನಗರದ ನಿವಾಸಿ ರಾಜೀವ್ ನಾಯ್ಡು ಅವರೇ ಎಂಟು ಅಂಗಾಂಗಳನ್ನು ದಾನ ಮಾಡಿದ ಇವರು ವಾಷಿಂಗ್ಟನ್ ಸ್ಕ್ವೆಯರ್ ಸೌತ್ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಎಂ.ಟೆಕ್ ಓದುತ್ತಿದ್ದರು.[ದೇಹ ಎರಡು ತುಂಡಾದರೂ ಕಣ್ಣು ದಾನ ಮಾಡಿ ಬೆಳಕಾದರು]

Bengaluru boy donate his organs, save 8 lives in New York

ರಾಜೀವ್ ನಾಯ್ಡು ಅವರು ಫೆಬ್ರವರಿ ತಿಂಗಳಿನಿಂದ ತೀವ್ರ ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಈ ಖಾಯಿಲೆ ಮತ್ತಷ್ಟು ಬಿಗಡಾಯಿಸಿದ ಪರಿಣಾಮ ಫೆ.21ರಿಂದ ಅಮೆರಿಕಾದ ಬ್ರೂಕ್ ಲಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆದರೆ ಕಳೆದ ಮಾರ್ಚ್ 7ರ ಭಾನುವಾರದಂದು ಅವರ ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಯಾವುದೇ ಚಿಕಿತ್ಸೆಗೆ ಸ್ಪಂದಿಸುತ್ತಿರಲಿಲ್ಲ. ಇದನ್ನು ನಾನಾ ಪರೀಕ್ಷೆಗಳ ಮೂಲಕ ಖಾತರಿ ಪಡಿಸಿಕೊಂಡ ವೈದ್ಯರು ಕುಟುಂಬದವರ ಅನುಮತಿ ಮೇರೆಗೆ ಅವರ ಎಂಟು ಅಂಗಾಂಗಳನ್ನು ದಾನ ಮಾಡಿ, ಎಂಟು ಜನರ ಬದುಕಿಗೆ ಆಶಾಕಿರಣವಾದರು.[ಊರಿಗೆ ಊರೇ ಕಣ್ಣು ದಾನ ಮಾಡಲು ಹರೀಶನೇ ಸ್ಫೂರ್ತಿ]

ಯಾವ ಯಾವ ಅಂಗಾಂಗಳನ್ನು ದಾನ ಮಾಡಲಾಗಿದೆ?

ಅಮೆರಿಕಾದಲ್ಲಿದ್ದ ರಾಜೀವ್ ನಾಯ್ಡು ಅವರ ಕಣ್ಣುಗಳು, ಹೃದಯ, ಕಿಡ್ನಿಗಳು, ಯಕೃತ್, ಅನ್ನನಾಳ, ಮೇದೋಜಿರಕಾಂಗ ಗ್ರಂಥಿಯನ್ನು ದಾನ ಮಾಡಿದ್ದಾರೆ.

Bengaluru boy donate his organs, save 8 lives in New York

ರಾಜೀವ್ ನಾಯ್ಡು ಬಗ್ಗೆ ವಿವರ:

ಇವರು 2014ರಲ್ಲಿ ಪಿಇಎಸ್ ಐಟಿ (People's Education Society Instistution of Technology, Bangalore) ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಇನ್ ಫಾರ್ಮೇಶನ್ ಸೈನ್ಸ್ ನಲ್ಲಿ ಎಂಜಿನಿಯರಿಂಗ್ ಮಾಡಿದ್ದರು. ಇವರು ದಿಲೀಪ್ ಮೆಟೀರಿಯಲ್ ಹ್ಯಾಂಡ್ಲಿಂಗ್ ಇಕ್ವಿಪ್ ಮೆಂಟ್ ನಲ್ಲಿ ಕಾರ್ಯನಿರ್ವಹಿಸಿದ್ದರು, ಬಳಿಕ ಅಮೆರಿಕಾಕ್ಕೆ ತೆರಳಿದ್ದರು.[ಫೇಸ್ ಬುಕ್ ಬಳಸಿ ಜೀವಂತ ಅಂಗಾಂಗ ಸಾಗಿಸಿದ ಬೆಂಗಳೂರು ಪೊಲೀಸರು]

ರಾಜೀವ್ ನಾಯ್ಡು ಅವರ ಅಂತ್ಯ ಸಂಸ್ಕಾರ?

ಇವರ ಅಂತ್ಯ ಸಂಸ್ಕಾರವು ಬೆಂಗಳೂರಿನ ಬೊಮ್ಮಸಂದ್ರದ ವಿದ್ಯಾನಗರದಲ್ಲಿ ಶುಕ್ರವಾರ ಜರುಗಲಿದೆ. ಇವರ ಮೃತದೇಹವನ್ನು ತರಲು ರಾಜೀವ್ ಅವರ ಭಾವ ಜಯಂತ್ ಅಮೆರಿಕಾಕ್ಕೆ ತೆರಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A brain-dead Bengaluru boy Rajeev Naidu (24) has donated his organs, saves 8 lives in New York. His family members has decided to donate his Eyes, Heart, Pancreas, Kidneys, Esophagus, Liver and Bone Marrow.
Please Wait while comments are loading...