ಬ್ರಹ್ಮಣಿ ಧರಿಸಿದ್ದ ಕಣ್ಣು ಕೋರೈಸುವ ವಜ್ರಾಭರಣದ ಬೆಲೆ?

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 17: 'ಒಂದೇ ಕಡೆ ಎಷ್ಟೊಂದು ವಜ್ರಗಳನ್ನು ಎಂದೂ ನೋಡಿಲ್ಲ' ಎಂದು ಹಿರಿಯ ಅಧಿಕಾರಿಯೊಬ್ಬರು ಗಾಲಿ ರೆಡ್ಡಿ ಮಗಳ ಮದುವೆ ವೈಭವ ಕಂಡು ಉದ್ಗರಿಸಿದ್ದಾರೆ. ಬೆಂಗಳೂರಿನ ಐಷಾರಾಮಿ ಮದುವೆಯ ಲೆಕ್ಕಾಚಾರ ಹಾಗಿರಲಿ, ವಧು ಬ್ರಹ್ಮಿಣಿ ತೊಟ್ಟ ಉಡುಗೆ, ಧರಿಸಿದ್ದ ಆಭರಣಗಳು ಎಲ್ಲರ ಕಣ್ಣರಳುವಂತೆ ಮಾಡಿದ್ದು ಸುಳ್ಳಲ್ಲ.

ದುಂದು ವೆಚ್ಚ, ಅದ್ದೂರಿ ಮದುವೆಗೆ ಕಡಿವಾಣ ಎಂಬ ಮಾತುಗಳನ್ನು ನಾಚಿಸುವಂತೆ ಮೈತುಂಬಾ ಒಡವೆಗಳನ್ನು ಹೇರಿಕೊಂಡು ಬ್ರಹ್ಮಣಿ ಅರಮನೆ ಮೈದಾನದಲ್ಲಿ ಕುಬೇರನ ಪುತ್ರಿಯಂತೆ ಕಾಣುತ್ತಿದ್ದಳು. [ಹೊಗಳಿಕೆ ಟೀಕೆ ಅಪಹಾಸ್ಯಕ್ಕೀಡಾದ ರೆಡ್ಡಿ ಮಗಳ ಮದುವೆ!]

At the big fat Reddy wedding, the bride's jewellery alone cost Rs 90 crore

ಮದುವೆ ಕರೆಯೋಲೆ ಖರ್ಚು ಲಕ್ಷಗಳಲ್ಲಿ ಮುಗಿದರೆ, ಮದುವೆ ಸಂಪೂರ್ಣ ಖರ್ಚು ವೆಚ್ಚ ಸುಮಾರು 500 ಕೋಟಿ ರು ಮೀರಿದೆ ಎಂಬ ಅಂದಾಜು ಲೆಕ್ಕ ಸಿಕ್ಕಿದೆ. ಈ ನಡುವೆ ಮದುವೆ ದಿನದಂದು ಕೆಂಪು ಬಣ್ಣದ ಲೆಹಂಗಾ ತೊಟ್ಟು ಸಿಕ್ಕಾಪಟ್ಟೆ ಆಭರಣಗಳನ್ನು ಧರಿಸಿದ್ದ ಬ್ರಹ್ಮಣಿ ಮೈಮೇಲೆ ಇದ್ದ ಒಡವೆಗಳ ಮೌಲ್ಯ ಸುಮಾರು 90 ಕೋಟಿ ರು ಎನ್ನಲಾಗಿದೆ. [ಗಾಲಿ ರೆಡ್ಡಿ ಮಗಳ ಮದ್ವೆಗೆ ಪರಂ ಎಂಟ್ರಿ, ಪೊಲೀಸರು ಗರಂ]

ಮದುವಣಗಿತ್ತಿಯ ಮನೆಯಲ್ಲಿ ಸುಮಾರು 2 ಡಜನ್ ವಜ್ರದ ಬಳೆಗಳು, 6 ವಜ್ರಖಚಿತ ನೆಕ್ಲೇಸುಗಳು, ಉಂಗುರ, ಒಲೆ, ಡಾಬು ಹಾಗೂ ವಿಶೇಷ ವಿನ್ಯಾಸದ ಸರಗಳು ಕಂಡು ಬಂದಿವೆ.

ಈಗಾಗಲೇ ಗಾಲಿ ರೆಡ್ಡಿ ಮದುವೆ ಮನೆ ಖರ್ಚು ವೆಚ್ಚದ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ದೂರು ಸಲ್ಲಿಕೆಯಾಗಿದೆ. ಈ ನಡುವೆ ತನಿಖಾಧಿಕಾರಿಗಳ ಸಮ್ಮುಖದಲ್ಲೇ ಗೃಹ ಸಚಿವ ಜಿ ಪರಮೇಶ್ವರ ಅವರು ಕರ್ನಾಟಕ ಸರ್ಕಾರದ ಪ್ರತಿನಿಧಿಯಾಗಿ ಮದುವೆ ಮನೆಯಲ್ಲಿ ಉಪಸ್ಥಿತರಿದ್ದದ್ದು ಪೊಲೀಸರೇ ಮುಜುಗರ ತಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
On her big day Gali Janardhana Reddy's daugther was covered from head to toe in diamonds. The wedding on the whole was an extravagant affair and the bride's jewellery cost around Rs 90 crore.
Please Wait while comments are loading...