ಬೆಂಗಳೂರಿನಲ್ಲಿ ವೇಸ್ಟ್ ಆಗ್ತಿದೆ ಶೇ 50ರಷ್ಟು ಕಾವೇರಿ ನೀರು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 14: ಬೆಂಗಳೂರಿಗೆ ಹರಿದುಬರುವ ನೀರಿನ ಪೈಕಿ ಕಾಲು ಭಾಗದಷ್ಟು ಸೋರಿಕೆಯಿಂದ ಹಾಗೂ ಸರಬರಾಜಿನ ಮಧ್ಯೆ ವ್ಯರ್ಥವಾಗುತ್ತದೆ ಎಂಬುದು ನಿಮಗೆ ಗೊತ್ತಾ? ಕಾವೇರಿ ನೀರು ಕಡಿಮೆಯಾದರೆ ಬೆಂಗಳೂರಿಗೂ ಸಮಸ್ಯೆಯೇ. ಅಂದಹಾಗೆ ನೀರು ಸೋರಿಕೆ ಸಮಸ್ಯೆ ಬೆಂಗಳೂರು ನಗರದ ಪಾಲಿಗೆ ದೊಡ್ಡದಾಗಿ ಕಾಡುತ್ತಿದೆ.

ಈ ನಗರದ ಒಳಗಿನ ಸಮಸ್ಯೆ ಬಗ್ಗೆ ಗಮನಹರಿಸುವುದಕ್ಕೆ ಇದು ಸೂಕ್ತ ಸಮಯ. ಬೆಂಗಳೂರು ಜಲಮಂಡಳಿ ಮಾಹಿತಿ ಪ್ರಕಾರ: 85 ಲಕ್ಷ ಜನಸಂಖ್ಯೆಯಿರುವ ಈ ನಗರಕ್ಕೆ ಪ್ರತಿ ದಿನ 1450 ಎಂಎಲ್ ಡಿ (ಮಿಲಿಯನ್ ಲೀಟರ್ಸ್) ನೀರು ಬೇಕು. ಅಧಿಕಾರಿಗಳ ಹೇಳುವ ಹಾಗೆ ಬೆಂಗಳೂರಿಗಿರುವ ಏಕೈಕ ಜಲ ಮೂಲ ಕಾವೇರಿಯೇ. ಕುಡಿಯುವುದಕ್ಕೆ, ಇತರ ದಿನ ಬಳಕೆಗೆ ಬಳಸುವುದೂ ಇದೇ ಕಾವೇರಿ ನೀರನ್ನೇ.[ಆಕ್ರೋಶಕ್ಕೆ ಮಣಿದ ಜಲಮಂಡಳಿ, ಬೋರ್ ವೆಲ್ ಶುಲ್ಕ ಇಳಿಕೆ]

50% of cauvery water have not reached Bengaluru

ಇನ್ನು 500 ಎಂಎಲ್ ಡಿ ಯಷ್ಟು ನೀರನ್ನ ಸಾರ್ವಜನಿಕ ಹಾಗೂ ಖಾಸಗಿ ಬೋರ್ ವೆಲ್ ಗಳಿಂದ ಸರಬರಾಜು ಮಾಡಲಾಗುತ್ತದೆ. ಸರಾಸರಿ ತಲಾ 100 ಲೀಟರ್ ನಷ್ಟು ನೀರನ್ನ ಬೆಂಗಳೂರಿಗರು ಬಳಸ್ತಾರೆ. 2007ರ ವರೆಗೆ ಬೆಂಗಳೂರಿನ ನೀರಿನ ಬಳಕೆ ಪ್ರಮಾಣ 900 ಎಂಎಲ್ ಡಿಯಷ್ಟಿತ್ತು. ಆ ನಂತರ ಬಿಬಿಎಂಪಿ ಅಂತಾಗಿ, ನೂರಾಹತ್ತು ಹಳ್ಳಿಗಳನ್ನು ಪಾಲಿಕೆ ವ್ಯಾಪ್ತಿಗೆ ತಂದ ಮೇಲೆ ಜಲ ಮಂಡಳಿ ನೂರು ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಪೂರೈಸಲು ಒಪ್ಪಿಗೆ ಸೂಚಿಸಿತು.

1450 ಎಂಎಲ್ ಡಿ ಪೈಕಿ ಶೇ 44.67ರಷ್ಟು ಮನೆ ಬಳಕೆಗೆ, ಶೇ 3.84ರಷ್ಟು ಮನೆಗಳ ಹೊರತಾದ ಬಳಕೆಗೆ, ಇನ್ನು ಶೇ 5.20ಯಷ್ಟು ಭಾಗಶಃ ಗೃಹ ಬಳಕೆಗೆ (ಒಂದೇ ಕಟ್ಟಡದಲ್ಲಿ ಮನೆಗಳು ಹಾಗೂ ವ್ಯಾಪಾರದ ಮಳಿಗೆಗಳು ಎರಡೂ ಇರುತ್ತವೆ) ಆಗುತ್ತಿದೆ. ಇನ್ನು ಶೇ 1.56ರಷ್ಟನ್ನು ಬಿಐಎಎಲ್ ಮತ್ತಿತರ ಕಾರ್ಖಾನೆಗಳಿಗೆ ಬಳಸಲಾಗುತ್ತದೆ. ಒಟ್ಟಾರೆ ಕಾವೇರಿ ನೀರಿನ ಶೇ 50.75ರಷ್ಟು ನೀರನ್ನು ಮಾತ್ರ ಬೆಂಗಳೂರಿಗೆ ಹರಿಸಲಾಗುತ್ತದೆ.[ಬೆಂಗಳೂರು : ನೀರಿನ ಸಂಪರ್ಕ ಪಡೆಯಲು ಆನ್ ಲೈನ್ ನಲ್ಲಿ ಅರ್ಜಿ ಹಾಕಿ]

ಈಗ ಬೆಂಗಳೂರಿಗರು ಆಲೋಚನೆ ಮಾಡಬೇಕಾದ ಅಂಕಿ-ಸಂಖ್ಯೆ ತಿಳಿಸಬೇಕಾಗಿದೆ. ಇನ್ನುಳಿದ ಶೇ 49.25ರಷ್ಟು ನೀರಿನಿಂದ ಜಲಮಂಡಳಿಗೆ ಯಾವುದೇ ಆದಾಯ ಬರುತ್ತಿಲ್ಲ. ಹೀಗಂದರೆ ಏನು ಅಂತ ಕೇಳಿದರೆ, 725 ಎಂಎಲ್ ಡಿ ನೀರು ಪೂರ್ತಿ ವ್ಯರ್ಥ ಆಗ್ತಿದೆಯಾ ಅಂತ ಪ್ರಶ್ನೆ ಬರುತ್ತೆ. ಅದಕ್ಕೆ ಜಲಮಂಡಳಿ ಎಂಜಿನಿಯರ್ ಉತ್ತರಿಸಿದ್ದಾರೆ.[ಪ್ರೋರೇಟಾ ಶುಲ್ಕ ಹೆಚ್ಚಿಸಿದ ಬೆಂಗಳೂರು ಜಲಮಂಡಳಿ]

ಆದಾಯ ಬರುವುದಿಲ್ಲ ಎಂದಿರುವ ಪ್ರಮಾಣದಲ್ಲಿ ಶೇ 25ರಷ್ಟು ನೀರು ಸೋರಿಕೆ ಹಾಗೂ ಸರಬರಾಜಿನ ಮಧ್ಯೆ ವ್ಯರ್ಥವಾಗುತ್ತದೆ. ಇನ್ನು ಬಾಕಿ ಶೇ 24ರಷ್ಟು ಹೇಗೆ ವ್ಯರ್ಥವಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಅನಧಿಕೃತ ಸಂಪರ್ಕ, ಸಮಸ್ಯೆ ಇರುವ ನೀರಿನ ಮೀಟರ್ ಗಳು, ರಾಜ್ಯ ಸರ್ಕಾರದ ಯೋಜನೆಗಳಡಿ ಸರಬರಾಜು ಮಾಡುತ್ತಿರುವುದು ಎಲ್ಲವೂ ಲೆಕ್ಕಕ್ಕೆ ತೆಗೆದುಕೊಂಡೇ ಹೇಳುತ್ತಾರೆ ಜಲಮಂಡಳಿ ಎಂಜಿನಿಯರ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The BWSSB makes no revenue for 725 mld of the total 1450 mld in Bengaluru. 24% utilized as they do not have a breakdown of how and where this water goes.
Please Wait while comments are loading...