ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಣೆ: ಕಿರುತೆರೆ ನಟನಿಗೆ ಥಳಿಸಿದ ಪುಂಡರು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 08 : ಇತ್ತೀಚೆಗಷ್ಟೆ ಫುಂಡರ ಗುಂಪೊಂದು ಯೂಟ್ಯೂಬ್ ಸ್ಟಾರ್ ಹುಚ್ಚಾವೆಂಕಟ್ ಮೇಲೆ ಹೆಲ್ಮೆಟ್ ನಿಂದ ಹಲ್ಲೆ ಮಾಡಿ ಸುದ್ದಿಯಾಗಿತ್ತು. ಈಗ ಮತ್ತೊಬ್ಬ ಕಿರುತೆರೆ ನಟನ ಮೇಲೆ ಪುಂಡರು ಹಲ್ಲೆ ಮಾಡಿದ್ದಾರೆ.

'ನಾಗಿಣಿ' ಧಾರಾವಾಹಿಯ ನಟ ದೀಕ್ಷಿತ್ ಶೆಟ್ಟಿ ಮೇಲೆ ಹಲ್ಲೆ!

ಸೆಲ್ಫಿ ತೆಗೆಸಿಕೊಳ್ಳಲು ನಿರಾಕರಿಸಿದ್ದಕ್ಕೆ ಕಿರುತರೆ ನಟನ ಮೇಲೆ ಮೂವರು ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ವಿಜಯನಗರದ ಮಾರುತಿ ಮಂದಿರದ ಬಳಿ ನಡೆದಿದೆ.

3 people beats tv star for refuseng take selfie with them

ಗೆಳೆಯನ ಭೇಟಿಗೆಂದು ಬಂದು, ಪಾರ್ಕ್ ಮಾಡಿದ್ದ ತಮ್ಮ ಕಾರ್ ನ ಬಳಿ ತೆರಳುತ್ತಿದ್ದ 'ನಾಗಿಣಿ' ಧಾರವಾಹಿಯ ನಟ ದೀಕ್ಷಿತ್ ಅವರ ಜೊತೆ ಕೆಲವು ಫುಂಡರು ಸೆಲ್ಫಿ ತೆಗೆಸಿಕೊಳ್ಳಲು ಮುಂದಾಗಿದ್ದಾರೆ, ಅವರು ಅನುಚಿತವಾಗಿ ಕುಡಿದಿದ್ದನ್ನು ಮನಗೊಂಡು ಸೆಲ್ಫಿ ತೆಗೆದುಕೊಳ್ಳಲು ದೀಕ್ಷಿತ್ ನಿರಾಕರಿಸಿದ್ದಾರೆ. ಇದರಿಂದ ಸಿಟ್ಟೆಗೆದ್ದ ಅವರು ದೀಕ್ಷಿತ್ ಮೇಲೆ ಹಲ್ಲೆ ನಡೆಸಿದ್ದಾರೆ. ಅಷ್ಟೆ ಅಲ್ಲದೆ ಅವರ ಕಾರಿನ ಗಾಜನ್ನು ಪುಡಿ ಮಾಡಿದ್ದಾರೆ.

ಸೆಲ್ಫಿ ತೆಗೆಯಲು ಬಂದ ವಿದ್ಯಾರ್ಥಿಗೆ 'ಪವರ್' ಸಚಿವರ ಪೆಟ್ಟು!

ಮೂವರೂ ಪುಂಡರು ಕುಡಿತದ ಅಮಲಿನಲ್ಲಿದ್ದರು ಎಂದು ದೀಕ್ಷಿತ್ ಹೇಳಿದ್ದಾರೆ, ದೀಕ್ಷಿತ್ ಅವರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.

ಘಟನೆ ಕುರಿತು ನಟ ದೀಕ್ಷಿತ್ ವಿಜಯನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೂವರು ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Three drunken men beats Tv star Deekshit who acting in kannada serial 'Nagini' for refusing to take selfie with them. Deekshit lodged complaint against them.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ