ಗಾಲಿ ಜನಾರ್ದನ ರೆಡ್ಡಿಗೆ 2 BHK ಮನೆ ಬೇಕಿದೆ
ಬೆಂಗಳೂರು, ಜ.20: ಅಕ್ರಮ ಗಣಿಗಾರಿಕೆ ಆರೋಪದ ಮೇಲೆ ಜೈಲುವಾಸಿಯಾಗಿರುವ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಪರಪ್ಪನ ಅಗ್ರಹಾರದಿಂದ ಹೊರಬರಲು ಸಿದ್ದರಾಗಿದ್ದಾರೆ. ಅದರೆ, ರೆಡ್ಡಿ ಈಗ ಬಳ್ಳಾರಿಗೆ ಹೋಗುವಂತಿಲ್ಲ. ಅಲ್ಲಿ ಮನೆಯೂ ಇಲ್ಲ. ಬೆಂಗಳೂರಿನಲ್ಲಿದ್ದ ಮನೆಯೂ ಸರ್ಕಾರದ ವಶದಲ್ಲಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯಗಳು ಎಡಬಿಡದೆ ದಾಳಿ ನಡೆಸಿ ಕಾಲ ಕಾಲಕ್ಕೆ ಗಾಲಿ ರೆಡ್ಡಿ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿರುವುದು ಎಲ್ಲರಿಗೂ ತಿಳಿದಿದೆ. [2 ಬೆಡ್ ರೂಂ ಇರುವ ಮನೆ ಇಲ್ಲಿ ಹುಡುಕಿ]
ಮನಿ ಲಾಂಡ್ರಿಂಗ್ ವಿರೋಧಿ ವಿಶೇಷ ನ್ಯಾಯಾಲಯವು ಕೋಟ್ಯಂತರ ಮೊತ್ತದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದು ಇದರಲ್ಲಿ ಪ್ರಮುಖವಾಗಿತ್ತು. ಬೆಂಗಳೂರಿನ ಸದಾಶಿವ ನಗರದಲ್ಲಿನ ಮನೆ ಹಾಗೂ ಬಳ್ಳಾರಿಯ ಕುಟೀರ ಅಲ್ಲದೆ ಮತ್ತೊಂದು ಮನೆ ಕೂಡಾ ಕೈ ತಪ್ಪಿದೆ. [ಬಳ್ಳಾರಿ:ರೆಡ್ಡಿ ಮನೆಯಲ್ಲಿತ್ತು ಚಿನ್ನದ ಕುರ್ಚಿ]

ಈಗ ಇವತ್ತೋ ನಾಳೆಯೋ ಜೈಲಿನಿಂದ ಹೊರಬರಲಿರುವ ಗಾಲಿ ರೆಡ್ಡಿ ಅವರಿಗೆ ಒಂದು ನೆಲೆ ಬೇಕಿದೆ. ಬಳ್ಳಾರಿ, ಕಡಪ, ಅನಂತಪುರ ಇಡೀ ರಾಯಲ ಸೀಮೆಯಲ್ಲಿ ಗಾಲಿ ರೆಡ್ಡಿ ಅವರ ನೆರಳು ಕೂಡಾ ಕಾಣಿಸಿಕೊಳ್ಳುವಂತಿಲ್ಲ. ಹೈದರಾಬಾದಿನಲ್ಲಿ ನೆಲೆಸಲು ಎರಡು ರಾಜ್ಯ(ಆಂಧ್ರ, ತೆಲಂಗಾಣ)ದ ಮುಖ್ಯಮಂತ್ರಿಗಳು ಬಿಡುತ್ತಾರಾ ಎಂಬುದು ಡೌಟು. [ಬೆಂಗಳೂರು ಮನೆ ಕಳೆದುಕೊಂಡ ಗಾಲಿ ಜನಾರ್ದನ ರೆಡ್ಡಿ]
ಹೀಗಾಗಿ ಆಪ್ತ ಬಂಟ ಶ್ರೀರಾಮುಲು ಮನೆಗೆ ಹೋಗೋಣ ಎಂದರೆ ಸದ್ಯಕ್ಕೆ ಸಂಸದರಾಗಿರುವ ಶ್ರೀರಾಮುಲುಗಾರು ರೆಡ್ಡಿ ಅವರನ್ನು ಮಾತನಾಡಿಸುವ ಮುನ್ನ ಬಿಜೆಪಿ ಮುಖಂಡರ(ಹೈಕಮಾಂಡ್) ಅನುಮತಿ ಕೋರುವುದು ಉತ್ತಮ. ಬೆನ್ನು ನೋವು, ಮಧುಮೇಹದಿಂದ ಬಳಲುತ್ತಿರುವ ರೆಡ್ಡಿ ಅವರಿಗೆ ಆಸ್ಪತ್ರೆ ಹಾಗೂ ಮನೆಗೆ ಓಡಾಡಿಕೊಂಡಿರಲು ಸೂಕ್ತವಾದ ಏರಿಯಾ ಹಾಗೂ ಕನಿಷ್ಠ 2 ಬೆಡ್ ರೂಂ ಇರುವ ಮನೆ ಬೇಕಿದೆ. ಅಲ್ಲಿ ಪತ್ನಿ ಅರುಣಾ ಹಾಗೂ ಮಕ್ಕಳೊಂದಿಗೆ ನೆಲೆಸಬಹುದಾಗಿದೆ. [ರೆಡ್ಡಿಗೆ ಸಿಕ್ತು ಸುಪ್ರೀಂನಿಂದ ಜಾಮೀನು]












Click it and Unblock the Notifications