ಹಂಪಿಯ ದೇವಾಲಯ ಕಂಬಗಳನ್ನು ದ್ವಂಸಗೊಳಿಸಿದವರಿಗೆ ನೀಡಿದ ಶಿಕ್ಷೆ ಏನು?

ಹಂಪಿ, ಫೆಬ್ರವರಿ 18: ಹಂಪಿಯ ವಿಷ್ಣು ದೇವಾಲಯದ ಕಂಬಗಳನ್ನು ದ್ವಂಸಗೊಳಿಸಿದ ದುಷ್ಕರ್ಮಿಗಳಿಗೆ ಹೊಸಪೇಟೆ ಜೆಎಂಎಫ್‌ಸಿ ನ್ಯಾಯಾಲಯ ಸರಿಯಾದ ಶಿಕ್ಷೆಯನ್ನೇ ನೀಡಿದೆ.

ಕೇವಲ ದಂಡ ವಿಧಿಸಿ ಅವರನ್ನು ಬಿಟ್ಟುಬಿಟ್ಟರೆ ಅವರು ಮಾಡಿರುವ ಕೃತ್ಯಕ್ಕೆ ತಕ್ಕ ದಂಡನೆಯಾಗುವುದಿಲ್ಲ ಎಂದು ಭಾವಿಸಿದ ನ್ಯಾಯಾಲಯ ನಾಲ್ವರಿಗೆ ತಲಾ 70 ಸಾವಿರ ರೂ ದಂಡವಿಧಿಸುವುದಷ್ಟೇ ಅಲ್ಲದೆ ದ್ವಂಸಗೊಳಿಸಿರುವ ಕಂಬಗಳನ್ನು ಹಳೆಯ ಮಾದರಿಯಲ್ಲೇ ಮರು ನಿರ್ಮಿಸಿಕೊಡಬೇಕು ಎಂದು ಹೇಳಿದೆ. ಅದರ ಜೊತೆಗೆ ದೇಶದಲ್ಲಿ ಇನ್ಯಾವುದೇ ಪಾರಂಪರಿಕ ಕಟ್ಟಡಗಳನ್ನು ದ್ವಂಸ ಮಾಡುವುದಿಲ್ಲ ಎಂದು ಅವರಿಗೆ ಪ್ರಮಾಣ ಮಾಡಿಸಿಕೊಂಡಿದೆ.

ಅವರ 2.8 ಲಕ್ಷವನ್ನು ನೀಡಿ, ಕಂಬಗಳನ್ನು ಪುನರ್ ನಿರ್ಮಾಣ ಮಾಡಿದ ಬಳಿಕ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಮಧ್ಯಪ್ರದೇಶದ ಆಯುಷ್, ಬಿಹಾರದ ರಾಜಾಬಾಬು ಚೌದರಿ, ರಾಜ್ ಆರ್ಯನ್ ಹಾಗೂ ರಾಜೇಶ್ ಕುಮಾರ್ ಚೌದರಿಯವರನ್ನು ವಿಷ್ಣು ದೇವಾಲಯದ ಕಂಬಗಳನ್ನು ಸ್ವಂಸಗೊಳಿಸಿರುವ ವಿಡಿಯೋದ ಆಧಾರದ ಮೇಲೆ ಬಂಧಿಸಲಾಗಿತ್ತು.

ಅವರನ್ನು ಅದೇ ಜಾಗಕ್ಕೆ ಕರೆದುಕೊಂಡು ಹೋಗಿ ಕಂಬಗಳನ್ನು ನಿಲ್ಲಿಸುವಲ್ಲಿ ಸಹಾಯ ಪಡೆಯಲಾಗಿದೆ.

ವಿಡಿಯೋದಲ್ಲಿ ಏನಿತ್ತು?

ವಿಡಿಯೋದಲ್ಲಿ ಏನಿತ್ತು?

ವಿಜಯನಗರ ಸಾಮ್ರಾಜ್ಯದ ಗತಕಾಲದ ವೈಭವವನ್ನು ಹೊಂದಿರುವ ಹಂಪಿಯಲ್ಲಿ ಸ್ಮಾರಕಗಳು ಮುಂದಿನ ಪೀಳಿಗೆಗೆ ಉಳಿಯಬೇಕೆಂಬ ಉದ್ದೇಶದಿಂದ ವಿವಿಧ ಇಲಾಖೆಗಳಿಂದ ಸ್ಮಾರಕಗಳ ಜೀರ್ಣೋದ್ಧಾರ ಕಾರ್ಯವನ್ನು ನಡೆಸುತ್ತಿದೆ. ಆದರೆ, ಹಂಪಿಯ ಒಂಟೆ ಸಾಲು, ಗಜಶಾಲೆ ಹಿಂದಿ ಇರುವಂತಹ ವಿಷ್ಣು ದೇವಸ್ಥಾನದ ಆವರಣದಲ್ಲಿನ ಕಂಬಗಳನ್ನು ಯಾರೋ ಕಿಡಿಗೇಡಿಗಳು ಬೀಳಿಸುತ್ತಿರುವ ದೃಶ್ಯ ವೀಡಿಯೋದಲ್ಲಿ ಕಂಡು ಬಂದಿತ್ತು.

ವಿಡಿಯೋ ವೈರಲ್ ಆಗಿ 7 ದಿನಗಳ ಬಳಿಕ ದುಷ್ಕರ್ಮಿಗಳು ಬಲೆಗೆ

ವಿಡಿಯೋ ವೈರಲ್ ಆಗಿ 7 ದಿನಗಳ ಬಳಿಕ ದುಷ್ಕರ್ಮಿಗಳು ಬಲೆಗೆ

ವಿಡಿಯೋ ವೈರಲ್ ಆಗಿ 7 ದಿನಗಳ ಬಳಿಕ ಅಂದರೆ ಫೆಬ್ರವರಿ 7ರಂದು ಕಿಡಿಗೇಡಿಗಳನ್ನು ಬಂಧಿಸಲಾಗಿತ್ತು. ಮಧ್ಯಪ್ರದೇಶದ ಆಯುಷ್, ಬಿಹಾರದ ರಾಜಾ ಬಾಬು ಚೌದರಿ, ರಾಜ್ ಆರ್ಯನ್, ರಾಜೇಶ್ ಕುಮಾರ್ ಚೌದರಿಯನ್ನು ಬಂಧಿಸಲಾಗಿತ್ತು.

ಹೊಸಪೇಟೆ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಶಿಕ್ಷೆ ಏನು?

ಹೊಸಪೇಟೆ ಮ್ಯಾಜಿಸ್ಟ್ರೇಟ್ ಕೋರ್ಟ್ ನೀಡಿದ ಶಿಕ್ಷೆ ಏನು?

ಹೊಸಪೇಟೆ ಮ್ಯಾಜಿಸ್ಟ್ರೇಟ್ ಕೋರ್ಟ್‌ನ ನ್ಯಾಯಧೀಶರಾದ ಪೂರ್ಣಿಮಾ ಅವರು ಈ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆಯನ್ನೇ ನೀಡಿದ್ದಾರೆ. 70 ಸಾವಿರ ರೂ ದಂಡ, ಜೊತೆಗೆ ದ್ವಂಸ ಮಾಡಿರುವ ಕಂಬಗಳನ್ನು ಪುನರ್ ನಿರ್ಮಾಣ ಮಾಡುವ ಶಿಕ್ಷ ನೀಡಿದ್ದಾರೆ. ಒಂದೊಮ್ಮೆ ಹಣವನ್ನು ನೀಡದಿದ್ದರೆ 2 ವರ್ಷದವರೆಗೆ ಜೈಲು ವಾಸ ಅನುಭವಿಸಬೇಕಾಗುತ್ತದೆ.

ಹಾಡಹಗಲೇ ಕಿಡಿಗೇಡಿಗಳಿಂದ ಕೃತ್ಯ

ಹಾಡಹಗಲೇ ಕಿಡಿಗೇಡಿಗಳಿಂದ ಕೃತ್ಯ

ಇತ್ತೀಚೆಗೆ ಹಾಡಹಗಲೇ ಕಿಡಿಗೇಡಿಗಳು ಕಲ್ಲಿನ ಕಂಬಗಳನ್ನು ಬೀಳಿಸಿರುವಂಥ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದರಿಂದ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಹಂಪಿಯ ಸ್ಮಾರಕಗಳ ಸಂರಕ್ಷಣೆಗಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹಂಪಿ ಅಭಿವೃದ್ಧಿ ಪ್ರಾಧಿಕಾರ, ರಾಜ್ಯ ಪುರಾತತ್ವ ಮತ್ತು ಸಂಗ್ರಹಾಲಯಗಳ ಸಂರಕ್ಷಣಾ ಇಲಾಖೆ ಕೆಲಸ ಮಾಡುತ್ತಿದ್ದರೂ ಇಂಥ ಘಟನೆಗಳು ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+