ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ; ಒಂದೇ ದಿನ 840 ಕೋವಿಡ್ ಪ್ರಕರಣ ಪತ್ತೆ ಏಕೆ?

|
Google Oneindia Kannada News

ಬಳ್ಳಾರಿ, ಜುಲೈ 28 : ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರ ಒಂದೇ ದಿನ 840 ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 4930ಕ್ಕೆ ಏರಿಕೆಯಾಗಿದೆ.

Recommended Video

ಕೆಲಸ ಕಿತ್ತುಕೊಂಡ ಕರೋನಾ | Oneindia Kannada

ಒಂದೇ ದಿನ ಜಿಲ್ಲೆಯಲ್ಲಿ ಇಷ್ಟು ಪ್ರಕರಣ ದಾಖಲಾಗಲು ಕಾರಣವೇನು?. ಬಳ್ಳಾರಿ ಜಿಲ್ಲಾಡಳಿತ ಈ ಕುರಿತು ಮಾಹಿತಿ ನೀಡಿದೆ. ಹೊಸಪೇಟೆ ಮತ್ತು ಸಂಡೂರು ತಾಲೂಕುಗಳಲ್ಲಿ ಮನೆ-ಮನೆಯಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹೇಳಿದೆ.

ಬಳ್ಳಾರಿ; ಕೊರೊನಾ ಗೆದ್ದ 93 ವರ್ಷದ ವೃದ್ಧೆಬಳ್ಳಾರಿ; ಕೊರೊನಾ ಗೆದ್ದ 93 ವರ್ಷದ ವೃದ್ಧೆ

ಹೊಸಪೇಟೆ ತಾಲೂಕಿನಲ್ಲಿ ಹೆಚ್ಚು ಪ್ರಕರಣವಿರುವ ವಾರ್ಡ್‌ನಲ್ಲಿ ಉಸಿರಾಟದ ತೊಂದರೆ ಇರುವವರಿಗೆ ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಲಾಗಿದೆ. ಸಂಡೂರು ತಾಲೂಕಿನಲ್ಲಿಯೂ ಹೀಗೆ ಪರೀಕ್ಷೆ ಮಾಡಿರುವುದಕ್ಕೆ ಹೊಸ ಪ್ರಕರಣ ಹೆಚ್ಚು ದಾಖಲಾಗಿದೆ.

ಕೊರೊನಾ ಸೋಂಕಿತರಿಗೆ ಯೋಗಭ್ಯಾಸ ಮಾದರಿಯಾದ ಚಾಂದಪಾಶಾ! ಕೊರೊನಾ ಸೋಂಕಿತರಿಗೆ ಯೋಗಭ್ಯಾಸ ಮಾದರಿಯಾದ ಚಾಂದಪಾಶಾ!

Why 840 New COVID Cases In Ballari On Single Day

ಹೊಸಪೇಟೆಯಲ್ಲಿ 10,016 ಮನೆಗಳು ಮತ್ತು ಸಂಡೂರಿನಲ್ಲಿ 3128 ಮನೆಗಳಲ್ಲಿ ಪರೀಕ್ಷೆ ಮಾಡಲಾಗಿದೆ. ಇದರಿಂದಾಗಿ ಸೋಂಕಿತರನ್ನು ಮೊದಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡಲು ಸಹಾಯಕವಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

 ಕೆಲಸದ ಸಿಬ್ಬಂದಿಗೆ ಸೋಂಕು; ಕ್ವಾರಂಟೈನ್ ಆದ ಬಳ್ಳಾರಿ ಡಿಸಿ ಕೆಲಸದ ಸಿಬ್ಬಂದಿಗೆ ಸೋಂಕು; ಕ್ವಾರಂಟೈನ್ ಆದ ಬಳ್ಳಾರಿ ಡಿಸಿ

ಮಂಗಳವಾರ ಬಳ್ಳಾರಿ ನಗರದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಿರುವ ಕೆಲವು ವಾರ್ಡ್‌ಗಳಲ್ಲಿ ಹೀಗೆ ಮನೆ ಮನೆ ಪರೀಕ್ಷೆ ಮಾಡಲಾಗುತ್ತದೆ. ರ‍್ಯಾಪಿಡ್ ಟೆಸ್ಟ್‌ಗಳ ಸಹಾಯದಿಂದಾಗಿ ಪ್ರಾಥಮಿಕ ಹಂತದಲ್ಲಿಯೇ ಸೋಂಕಿತರನ್ನು ಗುರುತಿಸಲು ಸಹಾಯಕವಾಗಿದೆ.

ಸೋಮವಾರ ಬಳ್ಳಾರಿಯಲ್ಲಿ 840 ಕೊರೊನಾ ವೈರಸ್ ಸೋಂಕಿನ ಹೊಸ‌ ಪ್ರಕರಣಗಳು ದೃಢಪಟ್ಟಿದ್ದವು. ಜಿಲ್ಲೆಯಲ್ಲಿ ಇದುವರೆಗೂ 1670 ಜನರು ಗುಣಮುಖರಾಗಿದ್ದಾರೆ. 82 ಜನರು ಮೃತಪಟ್ಟಿದ್ದಾರೆ.

English summary
Ballari district reported 840 new COVID cases on July 27, 2020. Cases have increased because house to house survey in Hospet and sandur high prevalence villages. This helps to identify cases early and treat them said dist administration.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X