ರಾಜಕೀಯ ಬೆಳವಣಿಗೆಗೆ ತಲೆ ಹಾಕಬಾರದು; ಸುಬುದೇಂದ್ರ ಶ್ರೀಗಳು
ಬಳ್ಳಾರಿ, ಜುಲೈ 28; "ನಿತ್ಯ ರಾಜ್ಯದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುತ್ತವೆ. ಅದಕ್ಕೆ ನಾವು ತಲೆ ಹಾಕಬಾರದು" ಎಂದು ಮಂತ್ರಾಲಯದ ಸುಬುದೇಂದ್ರ ತೀರ್ಥ ಶ್ರೀಗಳು ಹೇಳಿದರು.
ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಚಾತುರ್ಮಾಸದ ನಿಮಿತ್ತ ಪಂಚಮುಖಿ ಆಂಜನೇಯ ಸ್ವಾಮಿ ಪ್ರತಿಷ್ಠಾನ ಮಹೋತ್ಸವ ನಿಮಿತ್ತ ಆಗಮಿಸಿದ್ದ ಶ್ರೀಗಳು ಮಾಧ್ಯಮಗಳ ಜೊತೆ ಮಾತನಾಡಿದರು.
"ನಾವು ಲೋಕ ಕಲ್ಯಾಣಕ್ಕಾಗಿ ಪೀಠಾಧಿಪತಿಗಳು ಪ್ರಾರ್ಥನೆ ಮಾಡುವವರು, ಧರ್ಮ ಪೀಠಾಧಿಪತಿಗಳಾಗಿರುವುದರಿಂದ ರಾಜಕೀಯ ಮಾತನಾಡಬಾರದು. ನಮ್ಮ ಕಾರ್ಯ ಏನಿದ್ದರೂ ಲೋಕ ಕಲ್ಯಾಣಕ್ಕಾಗಿ ಮಾತ್ರ" ಎಂದರು.

"ಸುಖಃ, ಶಾಂತಿ ನೆಮ್ಮದಿ ಕೊಡಲೆಂದು ಹೋಮ ಪೂಜೆಗಳನ್ನು ಮಾಡುತ್ತೇವೆ. ಕೊರೊನಾದಿಂದ ಈಡಿ ಮನುಕುಲವೇ ತತ್ತರಿಸಿ ಹೋಗಿದೆ. ನಮ್ಮ ಮಠದಿಂದ ಕೋವಿಡ್ ಸಮಯದಲ್ಲಿ ಸಂತ್ರಸ್ಥರಿಗೆ ಅನ್ನ, ಔಷಧಿ ವ್ಯವಸ್ಥೆ ಮಾಡಲಾಗಿದೆ. ಕಡುಬಡುವರಿಗೆ ಆರ್ಥಿಕ ಸಹಾಯ ಮಾಡಿದ್ದೇವೆ. ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಭಗವಂತ ಆಯುರ್ ಆರೋಗ್ಯ ಕಲ್ಪಿಸಲಿ" ಎಂದು ಪ್ರಾರ್ಥಿಸಿದರು.
"ನಮ್ಮ ರಾಜ್ಯಕ್ಕೆ ಸಮರ್ಥ ನಾಯಕತ್ವ ಇರಲಿ. ನಾಯಕತ್ವ ಬದಲಾವಣೆ ವೇಳೆಯಲ್ಲಿ ಇಂಥವರಿರಲಿ ಅಂತ ನಾವು ಹೇಳೊದು ಸರಿಯಲ್ಲ. ಸೂಕ್ತವಾದವರು, ಜನಪರ ಚಿಂತನೆ ಇದ್ದವರು ಬರಲಿ ಎನ್ನುವುದು ನಮ್ಮ ಆಶಯವಾಗಿದೆ" ಎಂದು ತಿಳಿಸಿದರು.
"ಕೇಂದ್ರ ಈ ನಿಟ್ಟಿನಲ್ಲಿ ಚಿಂತನೆ ಮಾಡಿ, ಸೂಕ್ತ ಕ್ರಮ ಕೈಗೊಳ್ಳುಬೇಕು ಎನ್ನುವುದು ನಮ್ಮ ಅಭಿಲಾಷೆ. ಆದರೆ ರಾಜಕೀಯ ರಂಗದಲ್ಲಿ ಮಠಾಧಿಪತಿಗಳು ಮಾತನಾಡೋದು ಅಷ್ಟು ಸೂಕ್ತವಲ್ಲ" ಎಂದು ಶ್ರೀ ಸುಬುದೇಂದ್ರ ತೀರ್ಥ ಶ್ರೀಗಳು ಹೇಳಿದರು.












Click it and Unblock the Notifications