ಮತ್ತೆ ಬಿಜೆಪಿಯ ವಶವಾದ ವಿಜಯನಗರ ಕ್ಷೇತ್ರ

Recommended Video

      Karnataka By Elections 2019 : 10 AM updates

      ಬೆಂಗಳೂರು, ಡಿಸೆಂಬರ್ 9 : ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿಯ ಆನಂದ್ ಸಿಂಗ್ ಗೆಲುವು ಸಾಧಿಸಿದರು. ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂಬ ಬೇಡಿಕೆ ಮುಂದಿಟ್ಟುಕೊಂಡು ರಾಜೀನಾಮೆ ನೀಡಿದ್ದ ಆನಂದ್ ಸಿಂಗ್‌ಗೆ ಜನರು ಮತ್ತೊಮ್ಮೆ ಬೆಂಬಲ ನೀಡಿದರು.

      ಸೋಮವಾರ ವಿಜಯನಗರ ಕ್ಷೇತ್ರದ ಮತ ಎಣಿಕೆ ನಡೆಯಿತು. 2018ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿ ಚುನಾವಣೆ ಗೆದ್ದಿದ್ದ ಆನಂದ್ ಸಿಂಗ್, ಉಪ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕ್ಷೇತ್ರವನ್ನು ವಾಪಸ್ ಬಿಜೆಪಿಗೆ ತಂದುಕೊಟ್ಟರು.

      ಉಪ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿ. ವೈ. ಘೋರ್ಪಡೆ, ಜೆಡಿಎಸ್‌ನಿಂದ ಎನ್. ಎಂ. ನಬಿ ಅಭ್ಯರ್ಥಿಗಳಾಗಿದ್ದರು. ಆನಂದ್ ಸಿಂಗ್ ಸೋಲಿಸಬೇಕು ಎಂಬ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಆಗಿದ್ದು, ತಂತ್ರಗಳೆಲ್ಲ ವಿಫಲವಾಗಿದೆ.

      Vijayanagar Assembly Constituency By Election Result 2019

      2008, 2013ರ ಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರದಲ್ಲಿ ಆನಂದ್ ಸಿಂಗ್ ಗೆದ್ದಿದ್ದರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಕಣಕ್ಕಿಳಿದು ಕ್ಷೇತ್ರದಲ್ಲಿ ಗೆಲುವು ದಾಖಲಿಸಿದ್ದರು. 2019ರ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದು ಪುನಃ ಗೆಲುವು ದಾಖಲಿಸಿದರು.

      ವಿಜಯನಗರ ಕ್ಷೇತ್ರದಲ್ಲಿ ಅಭ್ಯರ್ಥಿಗಳು ಪಡೆದ ಮತಗಳು

      * ಆನಂದ್ ಸಿಂಗ್ (ಬಿಜೆಪಿ) : 85477

      * ವಿ. ವೈ. ಘೋರ್ಪಡೆ (ಕಾಂಗ್ರೆಸ್‌) : 55,352

      * ಎಂ. ಎನ್. ನಬಿ (ಜೆಡಿಎಸ್) : 3,885

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+