ವಿಜಯನಗರ ಜಿಲ್ಲೆಯಲ್ಲಿ ಸೈಟುಗಳ ಮಾರಾಟ, ಅರ್ಜಿ ಹಾಕಿ
ಬಳ್ಳಾರಿ, ಮೇ 04: ಕರ್ನಾಟಕದ 31ನೇ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರದಲ್ಲಿ ಸೈಟುಗಳನ್ನು ಮಾರಾಟ ಮಾಡಲಾಗುತ್ತದೆ. ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮಗಳಲ್ಲಿ ಭೂ ಮಾಲೀಕರು ಹಾಗೂ ಪ್ರಾಧಿಕಾರದ ವತಿಯಿಂದ ಜಂಟಿ ಸಹಯೋಗದೊಂದಿಗೆ ಎಲ್ಲಾ ಮೂಲಭೂತ ಸೌಕರ್ಯಗಳೊಂದಿಗೆ ಸುಂದರವಾದ ವಸತಿ ಯೋಜನೆಯನ್ನು ನಿರ್ಮಿಸುತ್ತಿದ್ದು, ನಿವೇಶನ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮಗಳಲ್ಲಿ ಪ್ರಾಧಿಕಾರದ ವತಿಯಿಂದ ರೈತರ ಸಹಭಾಗಿತ್ವದ ಶೇ 50:50 ಅನುಪಾತದಡಿ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒಳಗೊಂಡ ವಸತಿ ಯೋಜನೆಯನ್ನು ರಚಿಸಿ ಸರ್ಕಾರದ ಅನುಮೋದನೆ ಪಡೆದುಕೊಂಡು ಸುಂದರವಾದ ವಸತಿ ಯೋಜನೆ ಅಭಿವೃದ್ಧಿಪಡಿಸಲಾಗುತ್ತದೆ.

ಬಡಾವಣೆ ರಚನೆ ಮಾಡಲು ಆಸಕ್ತಿ ಇರುವ ಭೂ ಮಾಲೀಕರು ಭೂ ಪರಿಹಾರಕ್ಕೆ ಬದಲಾಗಿ, ಪ್ರಾಧಿಕಾರದಿಂದ ರಚನೆ ಮಾಡಿದ ಯೋಜನೆಯಲ್ಲಿನ ನಿವೇಶನಗಳನ್ನು ಶೇ 50:50ರ ಅನುಪಾತದಲ್ಲಿ (ಮೂಲೆ ನಿವೇಶನಗಳನ್ನು ಹೊರತುಪಡಿಸಿ) ರೈತರ ಭಾಗದ ಭಾಗಶಃ ಶೇ 50ರಷ್ಟು ನಿವೇಶನಗಳನ್ನು (ಮೂಲೆ ನಿವೇಶನಗಳನ್ನು ಹೊರತುಪಡಿಸಿ) ಹಸ್ತಾಂತರಿಸಿ ಉಳಿದ ಪ್ರಾಧಿಕಾರದ ಭಾಗಶಃ ಶೇ 50 ರಷ್ಟು ನಿವೇಶನಗಳನ್ನು ಸಾರ್ವಜನಿಕರಿಗೆ ಯೋಗ್ಯ ದರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತದೆ.
ಆಸಕ್ತಿವುಳ್ಳ ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಬರುವ ಗ್ರಾಮಗಳ ಪ್ರದೇಶ ವ್ಯಾಪ್ತಿಯ ಭೂ ಮಾಲೀಕರು/ ರೈತರು ಯಾವುದೇ ಋಣಭಾರವಿಲ್ಲದೆ ಬಿಟ್ಟು ಕೊಡಲು ಹಾಗೂ ರಚನೆ ಮಾಡಲ್ಪಡುವ ವಸತಿ ವಿನ್ಯಾಸದಲ್ಲಿ ವಸತಿಗಾಗಿ ಕಾಯ್ದಿರಿಸಿದ ಪ್ರದೇಶದಲ್ಲಿ ಶೇ 50:50 ರಷ್ಟು ನಿವೇಶನಗಳನ್ನು ಪಡೆಯಲು ಇಚ್ಛೆಯುಳ್ಳವರು ತಮ್ಮ ಜಮೀನಿನ ಇತ್ತೀಚಿನ ಪಹಣಿ, ಸರ್ವೆ ನಕಾಶೆ, ಋಣ ಭಾರ ಪ್ರಮಾಣ ಪತ್ರ ಹಾಗೂ ಇನ್ನಿತರೆ ಅಗತ್ಯ ದಾಖಲೆಗಳನ್ನು ಕಚೇರಿ ಸಮಯದಲ್ಲಿ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಪ್ರಾಧಿಕಾರದ ಕಚೇರಿಯನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 08395-295618.
ವಿಜಯನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ: ಸರ್ಕಾರದ ಆದೇಶ ದಿನಾಂಕ 15ನೇ ಡಿಸೆಂಬರ್, 2008 ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಬಳ್ಳಾರಿ-ಸಂಡೂರು ಸ್ಥಳೀಯ ಯೋಜನಾ ಪ್ರದೇಶದಿಂದ ಮತ್ತು ಹೊಸಪೇಟೆ ಸ್ಥಳೀಯ ಯೋಜನಾ ಪ್ರದೇಶದಿಂದ 8 ಗ್ರಾಮಗಳನ್ನು ಕೈಬಿಡಲಾಗಿದೆ. ವಿಜಯನಗರ ಸ್ಥಳೀಯ ಯೋಜನಾ ಪ್ರದೇಶವನ್ನು 42 ಗ್ರಾಮಗಳನ್ನೊಳಗೊಂಡಂತೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961ರ ಕಲಂ 4-ಎ ರನ್ವಯ ಘೋಷಿಸಲಾಗಿದೆ.
ವಿಜಯನಗರ ಸ್ಥಳೀಯ ಯೋಜನಾ ಪ್ರದೇಶದ ಸರಹದ್ದು ಬಳ್ಳಾರಿ ತಾಲ್ಲೂಕು ಸಿದ್ದಮನಹಳ್ಳಿ ಗ್ರಾಮದ ಪೂರ್ವದಿಂದ ದಕ್ಷಿಣಾಭಿಮುಖವಾಗಿ ವೇಣಿವೀರಾಪುರ ಗ್ರಾಮದ ಗಡಿಯನ್ನು ದಾಟಿ ಹರಗಿದೋಣಿ ಗ್ರಾಮದ ಗಡಿಯನ್ನು ತಲುಪಿ ವಾಯುವ್ಯದ ದಿಕ್ಕಿನಲ್ಲಿ ಚಲಿಸಿ, ನಂತರ ಸಂಡೂರು ತಾಲ್ಲೂಕಿನ ಅಂತಾಪುರ ಗ್ರಾಮದ ಮುಖಾಂತರ ಕೊಡಲು ಗ್ರಾಮ, ತಾರಾನಗರ ತಲುಪಿ ನಂತರ ದಕ್ಷಿಣಾಭಿಮುಖವಾಗಿ ಸಂಡೂರು ತಾಲ್ಲೂಕು ಭುಜಂಗನಗರ ಗ್ರಾಮವನ್ನು ತಲುಪುತ್ತದೆ.
ನಂತರ ಉತ್ತರಾಭಿಮುಖವಾಗಿ ಚಲಿಸಿ ಸಂಡೂರು ತಾಲ್ಲೂಕು ಲಕ್ಷ್ಮೀಪುರ , ಮುಖಾಂತರ ಚಲಿಸಿ, ಧರ್ಮಾಪುರ, ಸಂಡೂರು, ದೌಲತ್‌ಪುರ ಗ್ರಾಮವನ್ನು ತಲುಪಿ ಪೂರ್ವಾಭಿಮುಖವಾಗಿ ನಂತರ ಉತ್ತರಾಭಿಮುಖವಾಗಿ ಮುರಾರಿಪುರ, ಗೌರಿಪುರ ಹಾಗೂ ಗಂಗಾಲಪುರ ಜೋಗ ಮುರಾರಿಪುರ ತೆರಳು ಗ್ರಾಮವನ್ನು ತಲುಪಿ ನಂತರ ಉತ್ತರಾಭಿಮುಖವಾಗಿ ಚಲಿಸಿ ಹೊಸಪೇಟೆ ತಾಲ್ಲೂಕು ಕಾಕುಬಾಳು, ಗುಂಡ್ಲುವದ್ದಿಗೇರಿ, ಬಯಲುವದ್ದಿಗೇರಿ ತಲುಪಿ ಪೂರ್ವಾಭಿಮುಖವಾಗಿ ಚಲಿಸುತ್ತಾ ಧರ್ಮಸಾಗರ, ಗಾದಿಗನೂರು, ಗೋನಾಳ್, ದರೋಜಿ, ಹೊನ್ನಳ್ಳಿ ಗ್ರಾಮಗಳ ಗಡಿಯ ಮುಖಾಂತರ ಚಲಿಸಿ ಬಳ್ಳಾರಿ ತಾಲ್ಲೂಕು ಏಳುಬೆಂಚಿ ಹಾಗೂ ಸಿದ್ದಮ್ಮನಹಳ್ಳಿ ಗಡಿಯನ್ನು ಸೇರುತ್ತದೆ.












Click it and Unblock the Notifications