ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 31ನೇ ನುಡಿಹಬ್ಬ: ಮೂವರು ಸಾಧಕರಿಗೆ ನಾಡೋಜ ಗೌರವ ಪದವಿ ಪ್ರದಾನ

ವಿಜಯನಗರ, ಡಿಸೆಂಬರ್‌ 8: ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ಸಂಜೆ 31ನೇ ನುಡಿಹಬ್ಬ ಅದ್ಧೂರಿಯಾಗಿ ನಡೆದಿದೆ.

ನಾಡಿನ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ.ಮಂಜುನಾಥ್, ಷಡಕ್ಷರಿ ಹಾಗೂ ಕೃಷ್ಣಪ್ಪ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನಾಡೋಜ ಗೌರವ ಪ್ರದಾನ ಮಾಡಿದರು.

ಬೆಂಗಳೂರಿನ ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಹಿರಿಯ ಸಾಹಿತಿ ಕೃಷ್ಣಪ್ಪ ಜಿ. ಹಾಗೂ ಲೇಖಕ ಎಸ್. ಷಡಕ್ಷರಿ ಅವರು ನಾಡೋಜ ಗೌರವ ಪದವಿಯನ್ನು ಸ್ವೀಕರಿಸಿದರು.

ಪೂರ್ವಜರು ಬಳುವಳಿಯಾಗಿ ನೀಡಿರುವ ಜ್ಞಾನವನ್ನು ಪುನರ್‌ಜೀವನಗೊಳಿಸಬೇಕು

ಪೂರ್ವಜರು ಬಳುವಳಿಯಾಗಿ ನೀಡಿರುವ ಜ್ಞಾನವನ್ನು ಪುನರ್‌ಜೀವನಗೊಳಿಸಬೇಕು

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಗುರುವಾರ ನಡೆದ 31ನೇ ನುಡಿಹಬ್ಬ-ಘಟಿಕೋತ್ಸವದಲ್ಲಿ ಮಾತನಾಡಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ , ಭಾರತವನ್ನು ಜ್ಞಾನದ ವಿಶ್ವಗುರು ಮಾಡಲು ನಾವೆಲ್ಲರೂ ಶ್ರಮಿಸಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ)ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕಿದೆ. ಎನ್‌ಇಪಿಯಲ್ಲಿ ಮಾತೃಭಾಷೆ ಶಿಕ್ಷಣಕ್ಕೂ ಆದ್ಯತೆ ನೀಡಲಾಗಿದೆ.

ಭಾರತದ ಜ್ಞಾನಪರಂಪರೆಯನ್ನು ಮರುಸ್ಥಾಪಿಸಿ, ಜ್ಞಾನದ ಗತವೈಭವ ಮರು ಸ್ಥಾಪಿಸಬೇಕಿದೆ. ಇದಕ್ಕಾಗಿ ಏಕ ಭಾರತ, ಶ್ರೇಷ್ಠ ಭಾರತ ಧ್ಯೇಯವಾಕ್ಯದೊಂದಿಗೆ ನಾವು ಮುನ್ನಡೆಯಬೇಕಿದೆ. ಹಾಗಾಗಿ ನಮ್ಮ ಪೂರ್ವಜರು ಬಳುವಳಿಯಾಗಿ ನೀಡಿರುವ ಜ್ಞಾನವನ್ನು ಪುನರ್‌ಜೀವನಗೊಳಿಸಿ ಮುನ್ನಡೆಯಬೇಕಿದೆ ಎಂದರು.

ಚಂದ್ರಶೇಖರ ಕಂಬಾರ ಆಶಯದಂತೆ ವಿವಿ ಮುನ್ನಡೆ

ಚಂದ್ರಶೇಖರ ಕಂಬಾರ ಆಶಯದಂತೆ ವಿವಿ ಮುನ್ನಡೆ

ಹಂಪಿ ಕನ್ನಡ ವಿಶ್ವವಿದ್ಯಾಲಯ ಜ್ಞಾನವನ್ನು ಬೋಧಿಸುವ ವಿಶ್ವವಿದ್ಯಾಲಯವಾಗದೇ, ಜ್ಞಾನ ಸೃಷ್ಟಿಸುವ ವಿಶ್ವವಿದ್ಯಾಲಯ ಆಗಿರುವುದು ಹೆಮ್ಮೆಯ ಸಂಗತಿಯಾಗಿದೆ. ವಿವಿಯ ಮೊದಲ ಕುಲಪತಿ ಡಾ. ಚಂದ್ರಶೇಖರ ಕಂಬಾರ ಆಶಯದಂತೆ ವಿವಿ ಮುನ್ನಡೆಯತ್ತಿರುವುದು ಅತ್ಯಂತ ಹರ್ಷದಾಯಕ ಸಂಗತಿಯಾಗಿದೆ. ಕನ್ನಡ ಭಾಷೆಯಲ್ಲಿ ದೇಸಿ ಜ್ಞಾನ ಸಂಶೋಧನೆ ಮಾಡಿ, ಅದನ್ನು ಜತನ ಮಾಡುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ವಿವಿಯ ಹಸ್ತಪ್ರತಿಶಾಸ್ತ್ರ ವಿಭಾಗದಲ್ಲಿ 5,000ಕ್ಕೂ ಅಧಿಕ ಹಸ್ತಪ್ರತಿಗಳನ್ನು ಸಂಗ್ರಹಿಸಿ, ಜ್ಞಾನ ಭಂಡಾರವನ್ನು ಸಂಗ್ರಹಿಸಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲೇ ಸಂಶೋಧನೆ ಮಾಡಿ

ಕನ್ನಡ ಭಾಷೆಯಲ್ಲೇ ಸಂಶೋಧನೆ ಮಾಡಿ

ಹಂಪಿ ಕನ್ನಡ ವಿಶ್ವವಿದ್ಯಾಲಯ, ವಿಶ್ವ ಹಾಗೂ ದೇಶದಲ್ಲಿ ನಡೆಯತ್ತಿರುವ ವಿದ್ಯಮಾನಗಳಿಗೆ ಮುಖಾಮುಖಿಯಾಗಿ ವರ್ತಮಾನದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ ನಮ್ಮ ದೇಸಿ ಪರಂಪರೆಯನ್ನು ಅಧ್ಯಯನ ಮಾಡುತ್ತಿರುವುದು ಮಾದರಿಯಾಗಿದೆ. ಕನ್ನಡ ಭಾಷೆಯಲ್ಲೇ ಸಂಶೋಧನೆ ಮಾಡಿ ಜ್ಞಾನ ಸೃಜಿಸುತ್ತಿರುವುದು ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.

ನಿಮಗೆ ದೊರೆತ ಪದವಿಗೆ ಸರಿಯಾಗಿ ನಡೆದುಕೊಳ್ಳಿ

ನಿಮಗೆ ದೊರೆತ ಪದವಿಗೆ ಸರಿಯಾಗಿ ನಡೆದುಕೊಳ್ಳಿ

ಕನ್ನಡ ವಿವಿಯಿಂದ ಪಿಎಚ್‌ಡಿ ಸೇರಿದಂತೆ ವಿವಿಧ ಪದವಿಗಳನ್ನು ಪಡೆದ ಸಂಶೋಧನಾ ವಿದ್ಯಾರ್ಥಿಗಳು ತಮ್ಮನ್ನು ಓದಿಸಿದ ತಂದೆ-ತಾಯಿಗಳನ್ನು ಮರೆಯದೆ, ಅವರಿಗೆ ಗೌರವ ನೀಡಬೇಕು. ಜೊತೆಗೆ ನಿಮಗೆ ದೊರೆತ ಪದವಿಗೆ ಸರಿಯಾಗಿ ನಡೆದುಕೊಂಡು, ಭಾರತವನ್ನು ಶ್ರೇಷ್ಠ ಹಾಹೂ ಶಕ್ತಿಶಾಲಿ ಮತ್ತು ಜ್ಞಾನದ ಗುರುವನ್ನಾಗಿ ಮಾಡಲು ಮುಂದಿನ ಪೀಳಿಗೆಗೆ ಜ್ಞಾನ ಪಸರಿಸಬೇಕು ಎಂದು ಕಿವಿಮಾತು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+