ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಡಿಯೋ: ಹಂಪಿಯ ವಿರೂಪಾಕ್ಷ ದೇಗುಲದ ಬಳಿ ಸಿಲಿಂಡರ್ ಸ್ಫೋಟ

|
Google Oneindia Kannada News

ಹಂಪಿ, ಅಕ್ಟೋಬರ್ 28: ಕರ್ನಾಟಕದ ಪ್ರಮುಖ ಪ್ರೇಕ್ಷಣೀಯ ಸ್ಥಳ ಹಂಪಿಯ ವಿರೂಪಾಕ್ಷ ದೇಗುಲದ ಬಳಿ ಸಿಲಿಂಡರ್ ಸ್ಫೋಟಗೊಂಡ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಳೆದ ರಾತ್ರಿ ವಿರೂಪಾಕ್ಷ ದೇಗುಲದ ಬಳಿ ಇರುವ ಅಂಗಡಿಯೊಂದರಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಘಟನೆ ವಿಡಿಯೋ ವೈರಲ್ ಆದ ಬಳಿಕ ಭಕ್ತರು ಆತಂಕಗೊಂಡಿದ್ದಾರೆ. ಆದರೆ ಸಿಲಿಂಡರ್ ಸ್ಪೋಟದಿಂದ ಯಾವುದೇ ಹಾನಿ ಸಂಭವಿಸಿಲ್ಲ. ಬೆಂಕಿ ನಿಯಂತ್ರಣಕ್ಕೆ ಬಂದಿದೆ ಎಂದು ಹೇಳಲಾಗಿದೆ.

ಹಂಪಿಯು ಯುನೆಸ್ಕೋ ವಿಶ್ವ ಪರಂಪರೆಯ ಐತಿಹಾಸಿಕ ತಾಣವಾಗಿದೆ. ಹಂಪಿಯ ಹೆಮ್ಮೆಗಳಲ್ಲೊಂದು ಇಲ್ಲಿನ ವಿರೂಪಾಕ್ಷ ದೇವಾಲಯ. ಇದು ಮೂಲತಃ ಶಿವನಿಗೆ ಅರ್ಪಿತವಾಗಿದೆ. ಬೆಂಗಳೂರಿನಿಂದ ಸುಮಾರು 350 ಕಿಲೋಮೀಟರ್ ದೂರದಲ್ಲಿರುವ ಹಂಪಿ ದಕ್ಷಿಣ ಭಾರತದ ಅತಿ ವಿಶಿಷ್ಟ ಹಾಗು ಜನಪ್ರಿಯ ದೇವಾಲಯಗಳ ನಗರ. ಇದು ಯುನೆಸ್ಕೋದ ವಿಶ್ವ ಪರಂಪರೆಯ ತಾಣಗಳಲ್ಲಿ ಒಂದೆಂಬ ಖ್ಯಾತಿ ಗಳಿಸಿದೆ.

ವಿರೂಪಾಕ್ಷ ದೇವಾಲಯವು ಮೂಲತಃ ಒಂದು ಶಿವ ಪರಂಪರೆಯ ದೇಗುಲವಾಗಿದ್ದು, ಹಂಪಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಈ ದೇಗುಲದಲ್ಲಿ ಇಂದಿಗೂ ಪೂಜೆ ಪುರಸ್ಕಾರಗಳು ನಡೆಯುತ್ತಿವೆ. ವಿಶೇಷ ಹಾಗೂ ರಜಾ ದಿನಗಳಲ್ಲಿ ನೂರಾರು ಜನ ಈ ದೇವಸ್ಥಾನ ವೀಕ್ಷಣೆಗೆ ಆಗಮಿಸುತ್ತಾರೆ. ಜೊತೆಗೆ ಪೂಜೆ ಕೂಡ ಸಲ್ಲಿಸುತ್ತಾರೆ.

Video: Cylinder blast near Virupaksha temple in Hampi

ಹಂಪಿಯನ್ನು ಹಾಳು ಹಂಪಿಯೆಂದೇ ಕೆಲವೊಮ್ಮೆ ಬಣ್ಣಿಸಲಾಗುತ್ತದೆ. ಏಕೆಂದರೆ ಇಲ್ಲಿನ ನೂರಾರು ಕಲ್ಲಿನ ಕಟ್ಟಡಗಳು ಕೆತ್ತನೆಗಳು ಹಾಳಾಗಿವೆ. ಇಂತಹ ಹಾಳಾದ ಅವಶೇಷಗಳ ನಡುವೆಯೂ ಈ ದೇಗುಲ ಭವ್ಯವಾಗಿ ಪ್ರವಾಸಿಗರನ್ನು, ಭಕ್ತಾಧಿಗಳನ್ನು ಕೈ ಬಿಸಿ ಕರೆಯುತ್ತಿದೆ. ಡಿಸೆಂಬರ್ ತಿಂಗಳಿನಲ್ಲಿ ಈ ದೇಗುಲಕ್ಕೆ ದೊಡ್ಡ ಮಟ್ಟದಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಈ ದೇಗುಲದ ವಾರ್ಷಿಕ ಉತ್ಸವ, ಜಾತ್ರೆ ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ.

English summary
A video of a cylinder explosion near the Virupaksha temple in Hampi, an important tourist spot in Karnataka, has gone viral on social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X