ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿಮ್ಸ್‌ನಲ್ಲಿ ವಿದ್ಯುತ್‌ ವ್ಯತ್ಯಯ, ಆಕ್ಸಿಜನ್‌ ಕೊರತೆ: ಇಬ್ಬರ ಸಾವು?

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್ 14 : ವಿಜಯಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ್) ಆಸ್ಪತೆಯಲ್ಲಿ ವಿದ್ಯುತ್ ವ್ಯತ್ಯಯದಿಂದ ರೋಗಿಗಳಿಗೆ ಆಕ್ಸಿಜನ್ ಪೂರೈಕೆಯಲ್ಲಿ ವ್ಯತ್ಯಾಸ ಆಗಿ ಇಬ್ಬರು ಒಳರೋಗಿಗಳು ಮೃತರಾಗಿದ್ದಾರೆ ಎಂಬ ವಿಡಿಯೋಗಳು ಬಳ್ಳಾರಿ ಜಿಲ್ಲೆಯಾದ್ಯಂತ ವೈರಲ್ ಆಗುತ್ತಿವೆ.

ಮೃತರನ್ನು ಮೌಲಾ ಹುಸೇನ್‌ ಮತ್ತು ಚಿಟ್ಟೆಮ್ಮ ಎಂದು ಗುರುತಿಸಲಾಗಿದೆ. ಮೌಲಾ ಅವರಿಗೆ ಮೂತ್ರಪಿಂಡ ಸೇರಿದಂತೆ ಗಂಭೀರ ಸಮಸ್ಯೆಗಳಿದ್ದವು. ಚಿಟ್ಟೆಮ್ಮ ಅವರಿಗೆ ಹಾವು ಕಡಿದಿತ್ತು. ಈ ಇಬ್ಬರು ಸಾವನ್ನಪ್ಪಿದ್ದಾರೆ. ಆದರೆ ಕರೆಂಟ್‌ ಕೈಕೊಟ್ಟಿದ್ದಕ್ಕೂ ಸಾವಿಗೂ ಸಂಬಂಧವಿಲ್ಲ ಎಂದು ವಿಮ್ಸ್‌ ಮೂಲಗಳು ತಿಳಿಸಿವೆ.

Breaking: ಬಳ್ಳಾರಿ ಬಳಿ ಕಾಲುವೆಗೆ ಬಿದ್ದ ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ, 3 ಸಾವುBreaking: ಬಳ್ಳಾರಿ ಬಳಿ ಕಾಲುವೆಗೆ ಬಿದ್ದ ಕೂಲಿ ಕಾರ್ಮಿಕರು ಸಾಗುತ್ತಿದ್ದ ಆಟೋ, 3 ಸಾವು

ಇದೊಂದು ಅತಿ ದೊಡ್ಡ ದುರಂತ ಎಂದೇ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಎಕ್ಸ್‌ಪ್ರೆ ಸ್‍ಲೈನ್ ಸೌಲಭ್ಯ ಇದ್ದಾಗಲೂ ಕೂಡ ಬಳ್ಳಾರಿ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ವ್ಯತ್ಯಯ ಆಗಿದ್ದು ಹೇಗೆ? ಸದರಿ ಘಟನೆಯು ನಿನ್ನೆ ನಡೆದಿದ್ದು, ಎರಡು- ಮೂರು ತಾಸುಗಳ ಕಾಲ ಕರೆಂಟ್ ಕಟ್ ಆಗಿತ್ತು ಎನ್ನಲಾಗಿದೆ.

Two patient Died due to Lack of Oxygen Supply in VIMS?

ವೈರಲ್ ಆಗಿರುವ ವಿಡಿಯೋದಲ್ಲಿ ರೋಗಿಗಳು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆಗಾಗಿ ವಿಮ್ಸ್ ನಿರ್ದೇಶಕ ಡಾ.ಗಂಗಾಧರ್‌ ಗೌಡರನ್ನು ಸಂಪರ್ಕ ಮಾಡಲು ಪ್ರಯತ್ನಿಸಲಾಯಿತಾದರೂ, ಅವರು ಸಂಪರ್ಕಕ್ಕೆ ಸಿಗಲಿಲ್ಲ. ಆದರೆ ವಿಮ್ಸ್ ಆಸ್ಪತ್ರೆಯಲ್ಲಿ ಇಬ್ಬರು ನಿನ್ನೆ ಮೃತರಾಗಿರುವುದಂತೂ ಖಚಿತ ಎನ್ನುತ್ತವೆ ಆಸ್ಪತ್ರೆಯ ಮೂಲಗಳು. ಆದರೆ ಈ ಮೂವರು ಯಾವ ಕಾರಣದಿಂದ ನಿಧನರಾದ ಎಂಬುದನ್ನೂ ಆಸ್ಪತ್ರೆಯೇ ಖಚಿತಪಡಿಸಬೇಕಿದೆ.

ಬುಧವಾರ ಬೆಳಗ್ಗೆ 8.20ರಿಂದ 10 ಗಂಟೆವರೆಗೆ ಕರೆಂಟ್‌ ಹೋಗಿತ್ತು. ಇದಕ್ಕೆ ಪರ್ಯಾಯವಾಗಿ ಜನರೇಟರ್‌ ವ್ಯವಸ್ಥೆ ಮಾಡಲಾಗಿತ್ತು. 9.30ರಲ್ಲಿ ಒಬ್ಬರು, 9.35ರಲ್ಲಿ ಮತ್ತೊಬ್ಬರು ರೋಗಿ ಮೃತಪಟ್ಟಿದ್ದಾರೆ ಎಂದು ವಿಮ್ಸ್‌ ಮೂಲಗಳು ಹೇಳಿವೆ.

ವಿಮ್ಸ್‌ ಕಟ್ಟಡ 60 ವರ್ಷ ಹಳೆಯ‌ದು. ವಿದ್ಯುತ್‌ ಪೂರೈಸುವ ವಾಹಕಗಳು (ತಂತಿ) ಅಷ್ಟೇ ಹಳೆಯದಾಗಿವೆ. ಅಗತ್ಯವಿರುವ ಎಲ್ಲ ವಿಭಾಗಗಳಿಗೂ ಜನರೇಟರ್‌ ಸೌಲಭ್ಯ ಒದಗಿಸಲಾಗಿದೆ. ಐಸಿಯುಗೂ ಹೊಸ ಜನರೇಟರ್‌ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

English summary
Two patients died due to lack of oxygen supply after power failure in the VIMS Hospital in Ballari,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X