ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಚ್ಚುನಾಯಿ ಕಡಿತ: ವಿಷಯ ತಿಳಿಯದೆ ಮಕ್ಕಳನ್ನು ಕಳೆದುಕೊಂಡ ಹೆತ್ತವರು

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಡಿ. 03: ಕಳೆದ ತಿಂಗಳು ಜಿಲ್ಲೆಯ ಕುರಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸುರಕ್ಷಿತಾ (3) ಹಾಗೂ ಶಾಂತಕುಮಾರ್ (7) ಮೃತ ಮಕ್ಕಳು.

ಮನೆ ಮುಂದೆ ಆಟ ಆಡುವಾಗ ಮಕ್ಕಳ ಮೇಲೆ ಹುಚ್ಚುನಾಯಿ ದಾಳಿ ಮಾಡಿದೆ. ಆದರೆ ವಿಷಯ ತಿಳಿಯದೆ ಮಕ್ಕಳನ್ನು ಚಿಕಿತ್ಸೆಗಾಗಿ ಕರೆದುಕೊಂಡ ಹೊದ ಪೊಲೀಷಕರು ಮಕ್ಕಳನ್ನು ಕಳೆದುಕೊಂಡಿದ್ದಾರೆ.

ಶಿವಮೊಗ್ಗ: ಬೀದಿ ನಾಯಿಗಳ ದಾಳಿಯಿಂದ 4 ವರ್ಷದ ಬಾಲಕ ಸಾವುಶಿವಮೊಗ್ಗ: ಬೀದಿ ನಾಯಿಗಳ ದಾಳಿಯಿಂದ 4 ವರ್ಷದ ಬಾಲಕ ಸಾವು

ಬಾದನಹಟ್ಟಿ ಗ್ರಾಮದ ಗಾಯತ್ರಿ ಮತ್ತು ಬಸವರಾಜು ಎಂಬುವವರ ಮೂರು ವರ್ಷದ ಸುರಕ್ಷಿತಾ (3)ಗೆ ನವೆಂಬರ್ ಒಂದರಂದು ನಾಯಿ ಕಚ್ಚಿದೆ. ಆದರೆ ಹುಚ್ಚುನಾಯಿ ಕಡಿದ ವಿಷಯ ತಿಳಿಯದ ಪಾಲಕರು ವೈದ್ಯರಲ್ಲಿ ಮಗು ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಿದ್ದಾರೆ. ಹೀಗಾಗಿ, ಮಕ್ಕಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಟಿಟಿ ಇಂಜೆಕ್ಷನ್ ಹಾಕಿ ಕಳಿಸಿದ್ದಾರೆ ಎಂದು ತಾಲೂಕು ವೈದ್ಯಾಧಿಕಾರಿ ಮೋಹನ್ ಕುಮಾರಿ ತಿಳಿಸಿದ್ದಾರೆ.

Two Children Died After Being Mauled by A Mad Dog in Badanahatti

ಇದಾದ ಬಳಿಕ ಮಕ್ಕಳಲ್ಲಿ ರೇಬೀಸ್ ರೋಗದ ಲಕ್ಷಣಗಳು ಕಂಡು ಬಂದಿವೆ. ನಂತರ ಸುರಕ್ಷಿತಾರನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅದಾದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 21 ರಂದು ಮಗು ಮೃತಪಟ್ಟಿದೆ.

ಇತ್ತ ಇದೇ ಬಾದನಹಟ್ಟಿಯ ಸರಸ್ವತಿ ಮತ್ತು ಈರಣ್ಣಾ ಎಂಬುವರ 7 ವರ್ಷದ ಮಗು ಶಾಂತಕುಮಾರ್‌ಗೆ ಅಕ್ಟೋಬರ್‌ನಲ್ಲಿ ನಾಯಿ ಕಡಿದಿದೆ. ಆದರೆ, ಈ ವೇಳೆ ಹೊಲಕ್ಕೆ ಹೋಗಿದ್ದ ಮನೆಯವರಿಗೆ ವಿಷಯ ತಿಳಿದಿಲ್ಲ. ಅವರು ಕೂಡ ಮಗು ಬಿದ್ದು ಗಾಯ ಮಾಡಿಕೊಂಡಿದೆ ಎಂದು ಚಿಕಿತ್ಸೆ ಕೊಡಿಸಿದ್ದಾರೆ. ನವೆಂಬರ್ 21 ರಂದು ಮಗು ಮೃತಪಟ್ಟಿದ್ದಾದೆ ಎಂದು ತಾಲೂಕು ವೈದ್ಯಾಧಿಕಾರಿ ಮೋಹನ್ ಕುಮಾರಿ ತಿಳಿಸಿದ್ದಾರೆ.

Two Children Died After Being Mauled by A Mad Dog in Badanahatti

ಮಕ್ಕಳ ಈ ಸಾವುಗಳು ಹಿನ್ನೆಲೆಯಲ್ಲಿ ಗ್ರಾಮಸ್ಥರು ಆತಂಕಕ್ಕೀಡಾಗಿದ್ದಾರೆ. ಇಬ್ಬರು ಮಕ್ಕಳನ್ನು ಬಲಿ ಪಡೆದ ರೇಬೀಸ್ ಬಂದಿದ್ದ ನಾಯಿಯನ್ನು ಗ್ರಾಮಸ್ಥರು ಕೊಂದು ಹಾಕಿದ್ದಾರೆ. ಆದರೆ, ನಾಯಿ ಕಡಿದಾಗ ಅದೆ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡು, ಸರಿಯಾದ ಸಮಯದಲ್ಲಿ ಚಿಕಿತ್ಸೆ ನೀಡಿದ್ದರೇ ಮಕ್ಕಳು ಬದುಕುವ ಸಂಭವವಿತ್ತು ಎನ್ನಲಾಗಿದೆ.

English summary
Two children died after being mauled by a mad dog in Badanahatti village in ballari district. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X