• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಂಪ್ಲಿಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿ ಅನುಮಾನಾಸ್ಪದ ಸಾವು

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಫೆಬ್ರವರಿ 18: ಇಂದು ಬೆಳಗಿನ ಜಾವ ಕಾರು ಅಪಘಾತದಿಂದ ಪಾದಚಾರಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಕಣವಿಮಾರಮ್ಮ ದೇವಸ್ಥಾನ ಬಳಿಯ ಮುಖ್ಯ ರಸ್ತೆಯಲ್ಲಿ ಬೆಳಗಿನ ಜಾವದಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ, ಅಪರಿಚಿತ ಕಾರೊಂದು ಪಾದಚಾರಿ ಮೇಲೆ ಹರಿಸಿದ ಹಿನ್ನೆಲೆ ಸ್ಥಳದಲ್ಲೇ ರಾಮಸಾಗರ ಗ್ರಾಮದ ಜಿ.ಚಂದ್ರಗೌಡ(65) ಮೃತಪಟ್ಟಿದ್ದಾನೆ.

ಹೊಸಪೇಟೆ ಅಪಘಾತ ಪ್ರಕರಣ: ರಾಹುಲ್ ಬಂಧನ

ಜಿ.ಚಂದ್ರಗೌಡ ಅಪಘಾತದ ಹಿಂದೆ ನಾನಾ ಅನುಮಾನಗಳು ವ್ಯಕ್ತವಾಗುತ್ತಿದೆ. ಉದ್ದೇಶ ಪೂರ್ವಕವಾಗಿಯೇ ಕೊಲೆ ಮಾಡಿದ್ದಾರೆ ಎನ್ನುವ ಸಂಶಯಗಳು ಗೋಚರವಾಗುತ್ತಿವೆ.

2003 ರಲ್ಲಿ ಹೊಸಪೇಟೆಯ ಅಂದಿನ ತಾಲ್ಲೂಕು ಪಂಚಾಯತಿ ಅಧ್ಯಕ್ಷ ಎಂ.ಸೂರ್ಯನಾರಾಯಣ ಅವರನ್ನು ಧ್ವಜಾರೋಹಣ ಸಂದರ್ಭದಲ್ಲಿ ಗುಂಡು ಹಾರಿಸಿ ಹತ್ಯೆಗೈದಿದ್ದ ಜಿ.ಚಂದ್ರಗೌಡ ಅವರ ಮೇಲೆ ಪ್ರಕರಣ ದಾಖಲಾಗಿತ್ತು.

ಬಳ್ಳಾರಿ ಅಪಘಾತ ಪ್ರಕರಣ; ಸತ್ತ ರವಿ ನಾಯ್ಕನ ಮನೆಯವರಿಗೆ ಉತ್ತರ ನೀಡುವವರಾರು?

2018 ರಲ್ಲಿ ಪ್ರಕರಣ ಸುಖಾಂತ್ಯ ಕಂಡಿತ್ತು. ಆದರೆ ಈಗ ರಾಮಸಾಗರ ಗ್ರಾಮದ ಹೊಸಪೇಟೆ ರಸ್ತೆಯಲ್ಲಿ ಅನುಮಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ನಾನಾ ಅನುಮಾನುಗಳಿಗೆ ಎಡೆ ಮಾಡಿಕೊಟ್ಟಿದೆ.

English summary
The Suspicious Car Accident Death of Person Who Went Morning Walk in Ramasagara Village, Kampli Taluk.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X