ಸುಕೋ ಬ್ಯಾಂಕ್ ಎಂಡಿ ಅಗ್ನಿಹೋತ್ರಿ ಕೋವಿಡ್‌ಗೆ ಬಲಿ
ಬಳ್ಳಾರಿ, ಮೇ, 25: ಸುಕೋ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಪರಿಮಳಾಚಾರ್ಯ ಎಸ್. ಅಗ್ನಿಹೊತ್ರಿ (47) ಅವರು ಸೋಮವಾರ ಸಂಜೆ ಕೋವಿಡ್ ಸೋಂಕಿನಿಂದಾಗಿ ಮೃತರಾಗಿದ್ದಾರೆ.
ಸುಕೋ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪರಿಮಳಾಚಾರ್ಯ ಎಸ್. ಅಗ್ನಿಹೊತ್ರಿ ತಮ್ಮ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು, ಸ್ನೇಹಿತರು ಮತ್ತು ಸಹೋದರರನ್ನು ಅಗಲಿದ್ದಾರೆ.

ಸುಕೋ ಬ್ಯಾಂಕ್ ಅಧ್ಯಕ್ಷ ಮೋಹಿತ್ ಮಸ್ಕಿ, ಸಂಸ್ಥಾಪಕ ಅಧ್ಯಕ್ಷ ಮನೋಹರ್ ಮಸ್ಕಿ, ಆಡಳಿತ ಮಂಡಲಿ ಸದಸ್ಯರು ಮೃತ ಅಗ್ನಿಹೊತ್ರಿ ಆತ್ಮಕ್ಕೆ ಶಾಂತಿ ಕೋರಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
Recommended Video
Ramesh jaarkiholi ಲೈಂಗಿಕ ಪ್ರಕರಣಕ್ಕೆ ಹೊಸ ಟ್ವಿಸ್ಟ್! | Ramesh Jarkiholi | Oneindia Kannada












Click it and Unblock the Notifications