ಶ್ರೀರಾಮುಲು ನನ್ನ ಪರ್ಸನಲ್ ಫ್ರೆಂಡ್ ಎಂದ ಡಿ.ಕೆ. ಶಿವಕುಮಾರ್
Recommended Video

ಬಳ್ಳಾರಿ, ಅಕ್ಟೋಬರ್ 15: 'ನವೆಂಬರ್ 6ರಂದು ಬಳ್ಳಾರಿಯ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಗೆದ್ದು ದೆಹಲಿಗೆ ಹೋಗುತ್ತಾರೆ, ಡಿ.ಕೆ. ಶಿವಕುಮಾರ್ ಜೈಲಿಗೆ ಹೋಗುತ್ತಾರೆ' ಎಂಬ ಶಾಸಕ ಶ್ರೀರಾಮುಲು ಅವರ ಹೇಳಿಕೆಗೆ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಯಾರನ್ನೇ ಆದರೂ ಜೈಲಿಗೆ ಕಳುಹಿಸುವ ಸಾಮರ್ಥ್ಯ ಇರುವುದು ನ್ಯಾಯಾಧೀಶರಿಗೆ ಮಾತ್ರ. ಆದರೆ, ರಾಮುಲು ಜೈಲಿಗೆ ಕಳುಹಿಸುವ ಮಾತನ್ನಾಡುತ್ತಿದ್ದಾರೆ ಎಂದು ಇದಕ್ಕೆ ಯಡಿಯೂರಪ್ಪ ಉತ್ತರ ನೀಡಬೇಕು ಎಂದು ಡಿ.ಕೆ. ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಉಪ ಚುನಾವಣೆಯ ಕದನ ಮತ್ತೆ ಕಾಲೆಳೆಯುವ ಸ್ವಾರಸ್ಯಕರ ಮಾತಿನ ಪ್ರಹಸನಗಳಿಗೆ ಸಾಕ್ಷಿಯಾಗುತ್ತಿದೆ.
ಎರಡು ವಿಧಾನಸಭೆ ಮತ್ತು ಮೂರು ಲೋಕಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆ ಈಗಾಗಲೇ ಕಾವು ಪಡೆದುಕೊಂಡಿದ್ದು, ರಾಜಕೀಯ ನಾಯಕರ ಹೇಳಿಕೆ-ಪ್ರತಿ ಹೇಳಿಕೆಗಳು ಜೋರಾಗುವ ಲಕ್ಷಣಗಳು ಕಾಣಿಸುತ್ತಿವೆ.
ಬಳ್ಳಾರಿ ಅಖಾಡಕ್ಕೆ ಇಳಿದಿರುವ ಡಿ.ಕೆ. ಶಿವಕುಮಾರ್, ಶ್ರೀರಾಮುಲು ಮತ್ತು ಬಿಜೆಪಿಯನ್ನು ಲಘುವಾಗಿ ಲೇವಡಿ ಮಾಡಿದ್ದಾರೆ. ಅವರು ಹೇಳಿದ್ದೇನು? ಮುಂದೆ ಓದಿ...

ಶ್ರೀರಾಮುಲು ಪರ್ಸನಲ್ ಫ್ರೆಂಡ್
ಶ್ರೀರಾಮುಲು ನನಗೆ ಪರ್ಸನಲ್ ಫ್ರೆಂಡ್. ಅವರಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ. ಒಬ್ಬರನ್ನೊಬ್ಬರು ಕಂಡರೆ ಪರಸ್ಪರ ಇಷ್ಟ. ಆರನೇ ತಾರೀಕು ಎಲ್ಲಿಗೋ ಕಳಿಸ್ತಾರಂತೆ. ಶ್ರೀರಾಮುಲು ಅಣ್ಣನಿಗೆ ಈಗಲೇ ಹೇಳಿಬಿಡಿ. ಅವರನ್ನು ಅಲ್ಲಿಯೇ ಭೇಟಿ ಮಾಡುತ್ತೇನೆ. ಆಮೇಲೆ ಎಲ್ಲಿಗೆ ಕಳುಹಿಸುತ್ತಾರೋ ಅಲ್ಲಿಗೆ ಕಳಿಸಲಿ.

ಬಳ್ಳಾರಿ ಜನರೇ ಮಾಡಬೇಕು
ಬಳ್ಳಾರಿಯ ಜಿಲ್ಲೆಯ ರಾಜಕಾರಣವನ್ನು ಬಳ್ಳಾರಿ ಜನರೇ ಮಾಡಬೇಕು. ನಿಜ. ಅದನ್ನು ಇಲ್ಲ ಎಂದು ಹೇಳುವುದಿಲ್ಲ. ಆದರೆ, ಶ್ರೀರಾಮುಲು ಅವರಿಗೆ ಬಳ್ಳಾರಿಯ ಬಗ್ಗೆ ನಂಬಿಕೆಯೇ ಇಲ್ಲವಲ್ಲ. ಒಂದು ವೇಳೆ ಅವರಿಗೆ ನಂಬಿಕೆ ಇದ್ದಿದ್ದರೆ ಚಿತ್ರದುರ್ಗ ಜಿಲ್ಲೆಗೆ ಅವರು ಏಕೆ ಹೋಗಬೇಕಾಯಿತು. ನಾವು ಬಳ್ಳಾರಿಯಲ್ಲಿ ರಾಜಕಾರಣ ಮಾಡುತ್ತಿಲ್ಲ. ಶ್ರೀರಾಮುಲು ಗೆಲ್ಲಬೇಕು. ಅವರು ದೊಡ್ಡ ನಾಯಕರು. ನಾವು ಸಾಮಾನ್ಯ ಪ್ರಜೆಗಳು.

ಯಡಿಯೂರಪ್ಪ ಅವರೇ ಉತ್ತರ ಕೊಡಲಿ
ಯಾರನ್ನೇ ಆಗಲಿ, ಜೈಲಿಗೆ ಕಳುಹಿಸುವ ಅಧಿಕಾರ ಇರುವುದು ನ್ಯಾಯಾಧೀಶರಿಗೆ ಮಾತ್ರ. ಆದರೆ, ನನ್ನನ್ನು ಜೈಲಿಗೆ ಕಳುಹಿಸಿರುವುದರ ಬಗ್ಗೆ ಶ್ರೀರಾಮುಲು ಮಾತನಾಡುತ್ತಿದ್ದಾರೆ. ಶ್ರೀರಾಮುಲು ಹೇಳಿಕೆಗೆ ಯಡಿಯೂರಪ್ಪ ಅವರೇ ಉತ್ತರ ಕೊಡುವುದು ಸರಿ.

ಕಾಂಗ್ರೆಸ್-ಜೆಡಿಎಸ್ ಎರಡು ಕಣ್ಣು
ಶಿವಮೊಗ್ಗ ಜಿಲ್ಲೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್‌ನ ಸಮರ್ಥ ಅಭ್ಯರ್ಥಿ ಇದ್ದಾರೆ. ಆದರೆ, ಬಿಜೆಪಿ ಸೋಲಿಸುವ ಸಲುವಾಗಿ ಮೈತ್ರಿ ಮಾಡಿಕೊಳ್ಳಲಾಗಿದೆ. ಒಂದನ್ನು ಗೆಲ್ಲಲು ಇನ್ನೊಂದನ್ನು ಕಳೆದುಕೊಳ್ಳಬೇಕಾಗುತ್ತದೆ. ಜೆಡಿಎಸ್ ಗೆದ್ದರೆ ನಾವೇ ಗೆದ್ದಂತೆ.
ಕಾಂಗ್ರೆಸ್ ಮತ್ತು ಜೆಡಿಎಸ್ ಎರಡು ಕಣ್ಣುಗಳು ಇದ್ದಂತೆ. ಆದರೆ, ಎರಡರ ದೃಷ್ಟಿಯೂ ಒಂದೇ.












Click it and Unblock the Notifications