ಗಣರಾಜ್ಯೋತ್ಸವ ಸ್ತಬ್ಧಚಿತ್ರ ಮೆರವಣಿಗೆ: ರಾಜಪಥ್‌ನಲ್ಲಿ ವಿಜಯನಗರ ವೈಭವ

ಕರ್ನಾಟಕ, ಜನವರಿ 26: ಈ ಬಾರಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ದಿನಾಚರಣೆಯ ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಕರ್ನಾಟಕದಿಂದ ವಿಜಯನಗರ ವೈಭವ ಸಾರುವ ಸ್ತಬ್ಧಚಿತ್ರ ಪ್ರದರ್ಶನಗೊಂಡಿತು.

ನವದೆಹಲಿಯ ರಾಜಪಥ್ ನಲ್ಲಿ ನಡೆದ ಮೆರವಣಿಗೆಯಲ್ಲಿ ಕರ್ನಾಟಕದ ನೂತನ ಜಿಲ್ಲೆಯಾದ ವಿಜಯನಗರದಿಂದ ವಿಜಯನಗರ ಸಾಮ್ರಾಜ್ಯದ ಇತಿಹಾಸವುಳ್ಳ ಚಿತ್ರ ಭಾಗವಹಿಸಿತ್ತು.

ಹಂಪಿಯ ಕೇಂದ್ರ ಬಿಂದು ಎನಿಸಿರುವ ಉಗ್ರ ನರಸಿಂಹ, ಭಗವಾನ್ ಹನುಮನ ಜನ್ಮ ಸ್ಥಳ ಎಂದು ಹೇಳಲಾದ ಅಂಜನಾದ್ರಿ ಬೆಟ್ಟ, ವಿಜಯನಗರ ಸಾಮ್ರಾಜ್ಯದ ಸರ್ವಶ್ರೇಷ್ಠ ಸಾಮ್ರಾಟ ಶ್ರೀ ಕೃಷ್ಣದೇವರಾಯರ 1509ರಲ್ಲಿ ನಡೆದ ಪಟ್ಟಾಭಿಷೇಕ ಸಮಾರಂಭ ಹಾಗೂ ಹಜಾರರಾಮ ದೇವಾಲಯದ ಭಿತ್ತಿಚಿತ್ರಗಳನ್ನು ಈ ಸ್ತಬ್ಧಚಿತ್ರವು ಬಿಂಬಿಸಿತು.

 Republic Day 2021: Tableau Of Vijayanagar Dynasty Glory Exhibited In Rajpath Parade

ಸ್ತಬ್ಧಚಿತ್ರ ಮೆರವಣಿಗೆಯಲ್ಲಿ ಪ್ರತಿನಿಧಿಸುವ ರಾಜ್ಯದ ಹೆಸರನ್ನು ಹಿಂದಿಯಲ್ಲಿ ಬಳಸಲಾಗಿತ್ತು. ಟ್ಯಾಬ್ಲೋ ಕರ್ನಾಟಕ ಎಂದು ಹಿಂದಿಯಲ್ಲಿ ಬರೆದಿದ್ದರೆ, ಟ್ಯಾಬ್ಲೋ ಪಕ್ಕದಲ್ಲಿ ಕರ್ನಾಟಕ ಎಂದು ಕನ್ನಡದಲ್ಲಿ ಬರೆಯಲಾಗಿತ್ತು.

 Republic Day 2021: Tableau Of Vijayanagar Dynasty Glory Exhibited In Rajpath Parade

72ನೇ ಗಣರಾಜ್ಯೋತ್ಸವ ಸಂಭ್ರಮ ವಿಶೇಷ ಪುಟ

ಒಟ್ಟಿನಲ್ಲಿ ಸರಳವಾಗಿ ಹಾಗೂ ಅಚ್ಚುಕಟ್ಟಾಗಿ ಗಣರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ನವದೆಹಲಿಯ ರಾಜಪಥ್ ನಲ್ಲಿ ವಿಜಯನಗರ ವೈಭವದ ಇತಿಹಾಸವನ್ನು ಹೇಳುವ ಸ್ತಬ್ಧಚಿತ್ರವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ಗಣ್ಯರು ಕಣ್ತುಂಬಿಕೊಂಡರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+