ಅಕ್ರಮ ಗಣಿಗಾರಿಕೆ: ಗಾಲಿ ರೆಡ್ಡಿ ಆಪ್ತ ಶ್ರೀನಿವಾಸ ರೆಡ್ಡಿ ಬಂಧನ

ಬಳ್ಳಾರಿ, ಅಕ್ಟೋಬರ್ 03: ಓಬಳಾಪುರಂ ಮೈನಿಂಗ್ ಕಂಪನಿಯ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಒಎಂಸಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ರೆಡ್ಡಿ ಅವರನ್ನು ವಿಶೇಷ ತನಿಖಾ ದಳ (ಎಸ್ ಐಟಿ) ಬಂಧಿಸಿದೆ.

ಮಾಜಿ ಸಚಿವ ಜರ್ನಾರ್ದನ ರೆಡ್ಡಿ ಅವರ ಆಪ್ತ, ಸಂಬಂಧಿ ಬಿ.ವಿ. ಶ್ರೀನಿವಾಸ ರೆಡ್ಡಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಬಳ್ಳಾರಿ ಜಿಲ್ಲೆಯ ಸಂಡೂರಿನ ಸಂರಕ್ಷಿತ ಅರಣ್ಯ ಪ್ರದೇಶ ಸಿದ್ದಾಪುರದಲ್ಲಿ ಶೇಖ್​ಸಾಬ್ ಎಂಬುವವರಿಗೆ ಸೇರಿದ ಗಣಿಯನ್ನು ಶ್ರೀನಿವಾಸ ರೆಡ್ಡಿ ಅವರು ಅಕ್ರಮವಾಗಿ ಗಣಿಗಾರಿಕೆ ಮಾಡಿದ್ದರು.

ಶೇಖ್​ಸಾಬ್ ಎಂಬುವರಿಗೆ ಸೇರಿದ ಭೂಮಿಯನ್ನು ಒಎಂಸಿ ಸಂಸ್ಥೆ ಹೆಸರಿಗೆ ಜಿಪಿಎ ಮಾಡಿಸಿಕೊಂಡಿದ್ದರು. ಶೇಖ್​ಸಾಬ್​ ಸಂಬಂಧಿ ಅಲಿಖಾನ್(ಗಾಲಿ ರೆಡ್ಡಿ ಆಪ್ತ)​ ನೊಂದಿಗೆ ಶ್ರೀನಿವಾಸ್​ ರೆಡ್ಡಿ ಅಕ್ರಮವಾಗಿ ಗಣಿಗಾರಿಕೆ ನಡೆಸುತ್ತಿದ್ದರು ಎಂಬ ಆರೋಪವಿದೆ. ಓಎಂಸಿ, ಎಎಂಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದಿನ ಚಂಚಲಗುಡ ಜೈಲು, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಗಾಲಿ ಜನಾರ್ದನ ರೆಡ್ಡಿ ಶಿಕ್ಷೆ ಅನುಭವಿಸಿದ್ದಾರೆ. ಈ ಪ್ರಕರಣದ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ...

ಗಾಲಿ ರೆಡ್ಡಿಯನ್ನು ಬಿಡದೆ ಕಾಡುತ್ತಿರುವ ಒಎಂಸಿ

ಗಾಲಿ ರೆಡ್ಡಿಯನ್ನು ಬಿಡದೆ ಕಾಡುತ್ತಿರುವ ಒಎಂಸಿ

ಓಬಳಾಪುರಂ ಗಣಿ ಸಂಸ್ಥೆ(ಓಎಂಸಿ) ಅಕ್ರಮಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಬಾಡಿ ವಾರೆಂಟ್ ಮೇಲೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಲಾಗಿತ್ತು. ಈ ಹಿಂದೆ ಓಎಂಸಿ ಪ್ರಕರಣದಲ್ಲಿ ಗಾಲಿ ರೆಡ್ಡಿ ಪಡೆದಿದ್ದ ಜಾಮೀನನ್ನು ನಾಂಪಲ್ಲಿ ಸಿಬಿಐ ಕೋರ್ಟ್ ಆದೇಶ ನೀಡಿತ್ತು. ಒಟ್ಟಾರೆ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಹೊರ ಬಂದರೂ ಚಂಚಲಗುಡ ಜೈಲು ಬಾಗಿಲು ರೆಡ್ಡಿಗಾಗಿ ಸದಾ ತೆರೆದಿರುತ್ತದೆ. ಜಾಮೀನು ಪಡೆದರೂ ಜೈಲಿನಲ್ಲೇ ಉಳಿಯಬೇಕಾದ ಪರಿಸ್ಥಿತಿ ರೆಡ್ಡಿ ಅವರದ್ದಾಗಿತ್ತು. ನಂತರ ಜಾಮೀನು ಸಿಕ್ಕರೂ ಅನೇಕ ಷರತ್ತುಗಳಿಂದ ರೆಡ್ಡಿ ಆವರಿಗೆ ನಿರ್ಬಂಧ ಹೆಚ್ಚಾಗಿತ್ತು.

ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ?

ಸರ್ಕಾರಕ್ಕೆ ಎಷ್ಟು ನಷ್ಟವಾಗಿದೆ?

ಕರ್ನಾಟಕ ಹಾಗೂ ಆಂಧ್ರಪ್ರದೇಶ ಗಣಿಯಿಂದ ಸುಮಾರು 1 ಲಕ್ಷದ 48 ಸಾವಿರ ಮೆಟ್ರಿಕ್ ಟನ್​ಅದಿರನ್ನು ಕಾನೂನು ಬಾಹಿರವಾಗಿ ಸಾಗಿಸಲಾಗಿತ್ತು. ಇದರಿಂದ ಸರ್ಕಾರಕ್ಕೆ ಸುಮಾರು 37 ಸಾವಿರ ಕೋಟಿ ರೂ. ನಷ್ಟವುಂಟಾಗಿದೆ ಎಂದು ಆರೋಪಿಸಲಾಗಿದೆ.

ಇದೇ ರೀತಿ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ (ಎಎಂಸಿ) ಮೂಲಕ ರಾಜ್ಯದಿಂದ 80 ಲಕ್ಷ ಟನ್ ಕಬ್ಬಿಣದ ಅದಿರನ್ನು ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಕುಟುಂಬ ಅಕ್ರಮವಾಗಿ ಸಾಗಿಸಿದೆ. ಇದರಿಂದ ಸುಮಾರು 2,800 ಕೋಟಿ ರೂಪಾಯಿಗೂ ಹೆಚ್ಚು ನಿವ್ವಳ ಲಾಭ ಪಡೆದುಕೊಂಡಿದೆ ಎಂದು ಸಿಬಿಐ ದಾಖಲೆಗಳು ಹೇಳಿವೆ.

ಲಾಭ ಹಂಚಿಕೆ ಹೇಗೆ ನಡೆಯಿತು

ಲಾಭ ಹಂಚಿಕೆ ಹೇಗೆ ನಡೆಯಿತು

ಸ್ಥಗಿತ ಗಣಿಗಳ ಹೆಸರಿನಲ್ಲಿ ನಡೆಯುವ ವಹಿವಾಟಿನಲ್ಲಿ ಶೇಕಡ 75ರಷ್ಟು ಲಾಭಾಂಶ ಜನಾರ್ದನ ರೆಡ್ಡಿ ಅವರಿಗೆ ಸಂದಾಯವಾಗುತ್ತಿತ್ತು. ಸ್ಥಗಿತ ಗಣಿಗಳ ಹೆಸರಿನಲ್ಲಿ ಅಕ್ರಮ ವ್ಯವಹಾರಕ್ಕೆ ಸಹಕಾರ ನೀಡಿದ ಗಣಿ ಮಾಲೀಕರಿಗೆ ಶೇ 25ರಷ್ಟು ಪಾಲು ದೊರೆಯುತ್ತಿತ್ತು. ನೋಂದಾಯಿತ ಮಾರಾಟಗಾರರ ಮೂಲಕ ನಡೆಯುವ ವ್ಯವಹಾರದಲ್ಲಿ ಶೇ 90ರಷ್ಟು ಲಾಭ ರೆಡ್ಡಿ ಅವರ ಪಾಲಾದರೆ, ಶೇ 10ರಷ್ಟು 'ಬೇನಾಮಿ' ಮಾರಾಟಗಾರರ ಹೆಸರಿನ ರೆಡ್ಡಿ ಸಹಚರರಿಗೆ ತಲುಪುತ್ತಿತ್ತು. ಹೀಗಾಗಿ ಲಾಭ ನಷ್ಟ ಎಲ್ಲವೂ ರೆಡ್ಡಿ ಬಿಟ್ಟು ಬೇರೆಯವರಿಗೆ ಸಿಗುತ್ತಿರಲಿಲ್ಲ.

ಮಾಸ್ಟರ್ ಮೈಂಡ್ ಅಲಿ ಖಾನ್

ಮಾಸ್ಟರ್ ಮೈಂಡ್ ಅಲಿ ಖಾನ್

ಸ್ಥಗಿತ ಗಣಿಗಳ ಮಾಲೀಕರು ಮತ್ತು ನೋಂದಾಯಿತ ಮಾರಾಟಗಾರರ ಬ್ಯಾಂಕ್ ಖಾತೆಗಳಿಂದ ಈ ಲಾಭಾಂಶದ ಮೊತ್ತ ಹಲವು ಖಾತೆಗಳನ್ನು ದಾಟಿಕೊಂಡು, ಜನಾರ್ದನ ರೆಡ್ಡಿ ಮತ್ತು ಒಎಂಸಿ ಒಡತಿ ಗಾಲಿ ರೆಡ್ಡಿ ಅವರ ಪತ್ನಿ ಜಿ.ಲಕ್ಷ್ಮಿ ಅರುಣಾ ಅವರ ಖಾತೆ ಸೇರುತ್ತಿತ್ತು. ನಂತರ ರೆಡ್ಡಿ ದಂಪತಿ ಸ್ವಂತ ಚೆಕ್ಕುಗಳ ಮೂಲಕವೇ ಹಣವನ್ನು ಡ್ರಾ ಮಾಡುತ್ತಿದ್ದರು. ಹೀಗೆ 2,800 ಕೋಟಿ ರೂಪಾಯಿಗೂ ಹೆಚ್ಚು ಮೊತ್ತ ಅವರ ಖಜಾನೆಗೆ ಬಂದಿದೆ. ಬಳ್ಳಾರಿ ಮತ್ತು ಹೊಸಪೇಟೆಯ ಎಕ್ಸಿಸ್ ಬ್ಯಾಂಕ್, ವಿಕಾಸ್ ಸೌಹಾರ್ದ ಸಹಕಾರಿ ಬ್ಯಾಂಕ್ ಮತ್ತು ಲಕ್ಷ್ಮಿ ವಿಲಾಸ ಬ್ಯಾಂಕ್ ಶಾಖೆಗಳ ಮೂಲಕ ಈ ವ್ಯವಹಾರ ನಡೆದಿದೆ. ಈ ಎಲ್ಲ ವ್ಯವಹಾರವನ್ನೂ ರೆಡ್ಡಿ ಆಪ್ತ ಮೆಹಫೂಜ್ ಅಲಿಖಾನ್ ನಿರ್ವಹಿಸಿ, ನಿಯಂತ್ರಿಸುತ್ತಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+