ನೋಟಿಗಾಗಿ ನಿಂತು ಬಸವಳಿದವರಿಗೆ ಬಳ್ಳಾರಿಯಲ್ಲಿ ಪುಕ್ಕಟೆ ನೀರು
ಬಳ್ಳಾರಿ, ನವೆಂಬರ್ 14: ಬಳ್ಳಾರಿ ಬಿಸಿಲು ಹೇಗಿರುತ್ತೆ ಅಂತೀರಾ ಅಂತ ಯಾರಾದರೂ ಹೇಳಿದರೆ, ನೀವು ಯಾಕೆ ಒಂದೇ ಶಬ್ದವನ್ನು ಎರಡೆರಡು ಸಲ ಹೇಳ್ತೀರಿ ಅಂತ ಕೇಳಬಹುದು. ಈ ವಾಕ್ಯದಲ್ಲಿ ಯಾವುದು ಎರಡೆರಡು ಸಲ ಕೇಳಿದ ಶಬ್ದ ಅಂತ ನಿಮಗನ್ನಿಸಿದರೆ ಬಳ್ಳಾರಿ ಹಾಗೂ ಬಿಸಿಲು ಎರಡೂ ಪ್ರತ್ಯೇಕ ಪದಗಳು ಖಂಡಿತಾ ಅಲ್ಲ.
ಇಲ್ಲೀಗ ತಮ್ಮ ಹಳೆ 500, 1000 ರುಪಾಯಿ ನೋಟು ಬದಲಾವಣೆಗೆ ಬ್ಯಾಂಕ್ ಗಳು ಹಾಗೂ ಎಟಿಎಂಗಳ ಮುಂದೆ ಸರತಿಯಲ್ಲಿ ನಿಲ್ಲುವವರ ಪಾಲಿಗೆ ಟಚ್ ಫಾರ್ ಲೈಫ್ ಫೌಂಡೇಷನ್ ನಿಂದ ಉಚಿತವಾಗಿ ನೀರು ವಿತರಿಸಲಾಗುತ್ತಿದೆ. ಬಿಸಿಲಲ್ಲಿ ಬಸವಳಿದವರಿಗಂತೂ ಇದರಿಂದ ಒಂದಿಷ್ಟು ಚೈತನ್ಯ ದೊರೆಯುತ್ತಿದೆ.[ನೋಟು ಸಮಸ್ಯೆ: ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ]

ಸರತಿಯಲ್ಲಿ ಗಂಟೆಗಟ್ಟಲೆ ನಿಂತು ಹೈರಾಣಾದವರೂ ಅದೆಷ್ಟು ಮಂದಿ ಸಿಗುತ್ತಾರೋ ಅದರಲ್ಲೂ ವಯಸ್ಸಾದವರು, ಅನಾರೋಗ್ಯ ಸಮಸ್ಯೆ ಇರುವವರ ಪಾಡು ಹೇಳತೀರದು. ಇದನ್ನೆಲ್ಲ ನೋಡಿದ ಕಾರಣಕ್ಕೋ ಏನೋ ಟಚ್ ಫಾರ್ ಲೈಫ್ ಫೌಂಡೇಷನ್ ನಿಂದ ಪುಕ್ಕಟೆ ಬಾಟಲಿ ನೀರನ್ನು ವಿತರಣೆ ಮಾಡಲಾಗುತ್ತಿದೆ.[ದೇಶಾದ್ಯಂತ ಮೈಕ್ರೋ ಎಟಿಎಂಗೆ ಆರ್ ಬಿಐ ಒತ್ತು]
ಬ್ಯಾಂಕ್ ಗಳಲ್ಲಿ ನೋಟು ಬದಲಾಯಿಸಿಕೊಳ್ಳುವವರಿಗೆ ನಾಲ್ಕರಿಂದ ನಾಲ್ಕೂವರೆ ಸಾವಿರಕ್ಕೆ, ಎಟಿಎಂಗಳಲ್ಲಿ ಎರಡರಿಂದ ಎರಡೂವರೆ ಸಾವಿರಕ್ಕೆ ವಿಥ್ ಡ್ರಾ ಮಾಡಿಕೊಳ್ಳುವ ಮಿತಿ ಏರಿಸಲಾಗಿದೆ. ಇನ್ನು ವಾರಕ್ಕೆ ಚೆಕ್ ಮೂಲಕ ಪಡೆಯಬಹುದಾದ ಮೊತ್ತವನ್ನು ಇಪ್ಪತ್ನಾಲ್ಕು ಸಾವಿರ ರುಪಾಯಿಗೆ ಏರಿಸಲಾಗಿದೆ.












Click it and Unblock the Notifications