ಹಂಪಿಯ ಸೌಂದರ್ಯ ವೀಕ್ಷಿಸಿದ ನೀತಿ ಆಯೋಗದ ಸಿಇಒ

ಬಳ್ಳಾರಿ, ನವೆಂಬರ್ 09 : ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹಂಪಿಯ ಸೌಂದರ್ಯವನ್ನು ವೀಕ್ಷಣೆ ಮಾಡಿದರು. ವಿಶ್ವಪಾರಂಪರಿಕ ತಾಣದ ಕುರಿತು ಅವರು ಮೆಚ್ಚುಗೆ ಸೂಚಿಸಿದರು.

ಶನಿವಾರ ಮತ್ತು ಭಾನುವಾರ ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ ಹಂಪಿ ಪ್ರವಾಸ ಕೈಗೊಂಡಿದ್ದರು. ಕುಟುಂಬ ಸಮೇತ ಶನಿವಾರ ಹಂಪಿಗೆ ಆಗಮಿಸಿದ್ದ ಅವರು ಪ್ರಮುಖ ಸ್ಮಾರಕಗಳ ವೀಕ್ಷಣೆ ನಡೆಸಿದರು. ಪ್ರವಾಸಿ ತಾಣದ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ಭಾನುವಾರವೂ ಸಹ ಹಂಪಿಯ ವಿವಿಧ ಸ್ಮಾರಕಗಳ ವೀಕ್ಷಣೆಯನ್ನು ಅವರು ನಡೆಸಿದರು. ಹಂಪಿಯ ಪ್ರಸಿದ್ಧ ಕಲ್ಲಿನ ರಥದ ಮುಂದೆ ಅವರು ಫೋಟೋ ತೆಗೆಸಿಕೊಂಡರು. ಗೈಡ್‌ಗಳು ಸ್ಮಾರಕಗಳ ಬಗ್ಗೆ ಮಾಹಿತಿಯನ್ನು ನೀಡಿದರು.

NITI Aayog CEO Amitabh Kant Tour In Hampi

ಈ ಸಂದರ್ಭದಲ್ಲಿ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಹಂಪಿ ವಲಯದ ಅಧಿಕಾರಿಗಳಾದ ಕಾಳಿಮುತ್ತು, ಸೋಮ್ಲಾನಾಯಕ್, ಸುನಿಲ್ ಕುಮಾರ ಎಂ.ಸಿ ಎಚ್ ಆರ್ ದೇಸಾಯಿ , ಕೆ.ರವಿಕುಮಾರ್ ಮತ್ತಿತರರು ಜೊತೆಗಿದ್ದರು.

ಇನ್ನು ಕೆಲವು ದಿನ ರಜೆ; ಹಂಪಿ ವೀಕ್ಷಣೆ ಬಳಿಕ ಮಾತನಾಡಿದ ಅಮಿತಾಭ್ ಕಾಂತ್, "ಹಂಪಿಯ ಸೌಂದರ್ಯವನ್ನು ನೋಡಲು ಇನ್ನೂ ಕೆಲವು ದಿನಗಳ ಕಾಲ ರಜೆ ಬೇಕು. ಇಲ್ಲಿಯ ನಿರ್ವಹಣೆಯೂ ಚೆನ್ನಾಗಿದೆ" ಎಂದು ಹೇಳಿದರು.

ಬಳ್ಳಾರಿ ಜಿಲ್ಲೆಯ ಹಂಪಿಯನ್ನು ವಿಶ್ವ ಪಾರಂಪರಿಕ ತಾಣಗಳ ಪಟ್ಟಿ ಸೇರ್ಪಡೆಗೊಳಿಸಲಾಗಿದೆ. ದಿನನಿತ್ಯ ಸಾವಿರಾರು ಜನರು ಹಂಪಿಗೆ ಭೇಟಿ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+