Mylara lingeshwara karnika 2023: ಗೊರವಯ್ಯ ನುಡಿದ ಕಾರ್ಣಿಕ "ವಾಣಿ" ಏನು?
ಮೈಲಾರ ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ. ಹಾಗಾದರೆ ಗೊರವಯ್ಯ ನುಡಿದ ಕಾರ್ಣಿಕ ಏನು ಎನ್ನುವುದನ್ನು ಇಲ್ಲಿ ನೋಡಿ.
ವಿಜಯನಗರ, ಫೆಬ್ರವರಿ, 06: ವಿಜಯನಗರ ಜಿಲ್ಲೆ ಹರಪನಹಳ್ಳಿ ಪಟ್ಟಣದ ಹೊರವಲಯದಲ್ಲಿರುವ ಮೈಲಾರ ಗೊರವಯ್ಯ "ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ" ಪರಾಕ್ ಎನ್ನುವ ಕಾರ್ಣಿಕ ನುಡಿದರು. ಹೀಗೆ ಪ್ರತಿ ವರ್ಷದಂತೆ ಈ ವರ್ಷವೂ ಮೈಲಾರ ಗೊರವಯ್ಯ ಕಾರ್ಣಿಕವನ್ನು ನುಡಿದರು.
ಈ ಕಾರ್ಣಿಕಕ್ಕಾಗಿ ಜನರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ಹಾಗೆಯೇ ಜನರು ಮೈಲಾರಲಿಂಗೇಶ್ವರ ಕಾರ್ಣಿಕವನ್ನು ಹೆಚ್ಚಾಗಿ ನಂಬುತ್ತಾರೆ. ಅಲ್ಲದೇ ಅದು ಇಡೀ ವರ್ಷದ ಭವಿಷ್ಯವೆಂದು ಹೇಳಲಾಗುತ್ತದೆ. ಈ ಕಾರ್ಣಿಕದಲ್ಲಿ ಮಳೆ, ಬೆಳೆ ಹಾಗೂ ಮುಂದಿನ ದಿನಗಳಲ್ಲಿ ರಾಜಕೀಯ ಸ್ಥಿತಿ ಗತಿ ಏನಾಗಲಿದೆ ಎಂಬುದರ ಬಗ್ಗೆ ಹೇಳಲಾಗುತ್ತದೆ. ಹಾಗಾಗಿ ಜನರು ಕಾರ್ಣಿಕ ಕೇಳಲು ತುದಿಗಾಲಲ್ಲಿ ಕಾಯುತ್ತಿರುತ್ತಾರೆ.
ಕಾರ್ಣಿಕ ನುಡಿದ ಗೊರವಯ್ಯ
ಹಾಗೆಯೇ ಇಂದು ಸಾಗರೋಪಾದಿಯಲ್ಲಿ ಭಕ್ತರು ಸೇರಿ ಕಾರ್ಣಿಕವನ್ನು ಕೇಳಿಸಿಕೊಂಡಿದ್ದಾರೆ. ಗೊರವಯ್ಯ ಬಿಲ್ಲನ್ನು ಏರಿ, "ಭಾಗ್ಯದ ನಿಧಿ ತುಂಬಿ ತುಳುಕಿತ್ತಲೇ ಪರಾಕ್" ಎಂದು ಕಾರ್ಣಿಕ ನುಡಿದರು. ಇದನ್ನು ಕೇಳಿದ ಕೂಡಲೇ ಜನರು ಇದು ಶುಭದ ನುಡಿ ಎಂದು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಕಾರ್ಣಿಕ ನುಡಿಯ ಬಗ್ಗೆ ವಿವರಿಸಿದ ಅರ್ಚಕ
ಹಾಗೆಯೇ ಅಲ್ಲಿನ ಅರ್ಚಕರು ಈ ವರ್ಷ ಮಳೆ, ಬೆಳೆ ಸಮೃದ್ದವಾಗಿ ಆಗಲಿದೆ ಎಂದು ಕಾರ್ಣಿಕವನ್ನು ವಿವರಿಸಿದ್ದಾರೆ. ಗೊರವಯ್ಯ ಬಿಲ್ಲನ್ನೇರಿ ಕಾರ್ಣಿಕ ನುಡಿದು ಬಿಲ್ಲನ್ನು ಕೈ ಬಿಡುತ್ತಾರೆ. ಆಗ ಕೆಳಗಿರುವ ಜನ ಅವರನ್ನು ಹಿಡಿಯುತ್ತಾರೆ. ಇದನ್ನು ನೋಡುಲು ಮೈ ರೋಮಾಂಚನವಾಗುತ್ತದೆ ಎಂದು ಅಲ್ಲಿನ ಜನರು ಹೇಳುತ್ತಿದ್ದಾರೆ. ಬಿಲ್ಲನ್ನೇರಿ ಕಾರ್ಣಿಕ ನುಡಿಯುವ ಸಂಪ್ರದಾಯ ಮೊಲಿನಿಂದಲೂ ಇತ್ತು. ಅಲ್ಲದೇ ಆ ಭಾಗದ ಜನ ಅದನ್ನು ಗಾಢವಾಗಿ ನಂಬುತ್ತಾರೆ. ಭವಿಷ್ಯದಲ್ಲಿ ರಾಜಕೀಯ, ಮಳೆ, ಬೆಳೆ ಏನಾಗಲಿದೆ ಎನ್ನುವುದರ ಕುರಿತು ನಿಜವಾಗುವ ವಾಕ್ಯಗಳನ್ನು ಗೊರವಯ್ಯ ನುಡಿಯುತ್ತಾರೆ ಎಂದು ಭಕ್ತರು ಹೇಳುತ್ತಿದ್ದಾರೆ.
ಈ ಬಾರಿಯ ಕಾರ್ಣಿಕದ ನುಡಿ "ಭಾಗ್ಯದ ನಿಧಿ ತುಂಬಿ ತಳುಕುತ್ತದೆ" ಅಂದರೇ ಮಳೆ, ಬೆಳೆ ಚನ್ನಾಗಿ ಆಗುತ್ತದೆ. ಹಾಗೆಯೇ ರಾಜಕೀಯ ಸ್ಥಿತಿಗತಿಗಳು ಸುಧಾರಿಸುತ್ತವೆ. ರೋಗ ರುಜೀನಗಳು ಹೆಚ್ಚಾಗಿ ಕಾಣಿಸಿಕೊಳ್ಳುವುದಿಲ್ಲ ಎನ್ನುವ ಗೊರವಯ್ಯನ ನುಡಿಯ ಸಾರಾಂಶವಾಗಿದೆ ಎಂದು ಅರ್ಚಕರು ವಿವರಣೆ ನೀಡಿದ್ದಾರೆ.












Click it and Unblock the Notifications