Mylara Lingeshwara Karnika 2024: ಈ ವರ್ಷ ಗೊರವಯ್ಯ ನುಡಿದ "ಕಾರ್ಣಿಕ" ವಾಣಿ ಏನು?-ಮಾಹಿತಿ ಇಲ್ಲಿದೆ
ವಿಜಯನಗರ, ಫೆಬ್ರವರಿ, 26: ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿ ಐತಿಹಾಸಿಕ ಮೈಲಾರಲಿಂಗೇಶ್ವರ ಕಾರ್ಣೀಕೋತ್ಸವ ನಡೆದಿದ್ದು, ಈ ಬಾರಿ ಏನು ಭವಿಷ್ಯವಾಣಿ ನುಡಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಮೈಲಾರದ ಡಂಗನಮರಡಿಯಲ್ಲಿ 18 ಅಡಿ ಬಿಲ್ಲನ್ನೇರಿ ಗೊರವಯ್ಯ ರಾಮಪ್ಪ ಈ ವರ್ಷದ ದೈವವಾಣಿಯನ್ನು ನುಡಿದಿದ್ದಾರೆ. "ಮಳೆ ಬೆಳೆ ಎಲ್ಲಾ ಸಂಪಾದಿತಲೇ ಪರಾಕ್" ಎಂದು ಭವಿಷ್ಯವಾಣಿ ನುಡಿದಿದ್ದಾರೆ. ಇನ್ನು ಈ ವೇಳೆ ಮೈಲಾರಲಿಂಗೇಶ್ವರನ ಕಾರ್ಣೀಕ ಕೇಳಿ ಲಕ್ಷಾಂತರ ಭಕ್ತರು ಪುನೀತರಾದರು.

ಬಾರಿ ಅಂದರೆ 2023ರಲ್ಲಿ ಮಳೆಯಿಲ್ಲದೆ ಜನರು ಭೀಕರ ಬರಗಾಲವನ್ನು ಎದುರಿಸುತ್ತಿದ್ದಾರೆ. ಇನ್ನು ಈ ಬಾರಿ ಮೈಲಾರಲಿಂಗೇಶ್ವರನ ಭವಿಷ್ಯವಾಣಿ ಕೇಳಿದ ಜನರ ಮುಖದಲ್ಲಿ ಮಂದಹಾಸ ಮೂಡಿದಂತಾಗಿದೆ.
ಕಳೆದ ವರ್ಷ ಕಾರ್ಣಿಕ "ಅಂಬಲಿ ಹಳಿಸಿತು, ಕಂಬಳಿ ಬೀಸಿತಲೇ ಪರಾಕ್" ಎಂಬ ಕಾರ್ಣಿಕ ನಿಜವಾವಾಗಿದಂತಾಗಿದೆ. ಆದರೆ ಈ ಬಾರಿ "ಸಂಪಾದಿತಲೇ ಪರಾಕ್" ಎಂಬ ಭವಿಷ್ಯವಾಣಿಯನ್ನು ಕೇಳಿದ ಇಡೀ ರಾಜ್ಯದ ಜನರು ಸಂತಸಗೊಂಡಿದ್ದಾರೆ. ಕಾರ್ಣಿಕದ ಗೊರವಪ್ಪ ರಾಮಪ್ಪ ಅವರು 11 ದಿನಗಳ ಕಾಲ ಉಪವಾಸ ಮಾಡಿದ್ದು, ಇಂದು ಕಾರ್ಣಿಕ ನುಡಿಯುವ ದಿನ ವಿಶೇಷ ಪೂಜೆ ನೆರವೇರಿಸಿ ಕಾರ್ಣಿಕ ನುಡಿದಿದ್ದಾರೆ.












Click it and Unblock the Notifications