ಶ್ರೀರಾಮುಲು ಆಪ್ತ ಬಂಡಿ ರಮೇಶ್ ಕೊಲೆ ಆರೋಪಿ ಯಲ್ಲಪ್ಪ ಮರ್ಡರ್
ಬಳ್ಳಾರಿ, ಫೆಬ್ರವರಿ 26: ಬಳ್ಳಾರಿಯ ದೇವಿನಗರದಲ್ಲಿ ರೌಡಿಶೀಟರ್ ಯಲ್ಲಪ್ಪ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಿನ್ನೆ ಮಂಗಳವಾರ ನಡೆದಿದೆ.
ಬಳ್ಳಾರಿಯ ದೇವಿನಗರ ನಿವಾಸಿ ಯಲ್ಲಪ್ಪ ಎಂಬಾತನೇ ಕೊಲೆಗೀಡಾದ ವ್ಯಕ್ತಿ. ಎರಡು ವರ್ಷದ ಹಿಂದಷ್ಟೇ ಹಾಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರ ಆಪ್ತನಾಗಿದ್ದ ರೌಡಿ ಶೀಟರ್ ಬಂಡಿ ರಮೇಶ ಎಂಬಾತನನ್ನು ನಗರ ಹೊರವಲಯದ ಡಾಬಾವೊಂದರಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು.

ಈ ಯಲ್ಲಪ್ಪ ಬಂಡಿ ರಮೇಶ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ. ಅದೇ ಹಳೇ ದ್ವೇಷದಿಂದ ಯಲ್ಲಪ್ಪನ ಕೊಲೆ ನಡೆದಿರಬಹುದೆಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಬಳ್ಳಾರಿ ಜಂಟಿ ಎಸ್ಪಿ ಲಾವಣ್ಯ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಬಳ್ಳಾರಿಯ ಕೌಲ್ ಬಾಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications