ಟ್ರಾಫಿಕ್ ಜಾಮ್; ಅದಿರು ಲಾರಿ ಚಾಲಕರಿಗೆ ನಡುರಸ್ತೆಯಲ್ಲೇ ತರಾಟೆ ತೆಗೆದುಕೊಂಡ ಶಾಸಕ
ಬಳ್ಳಾರಿ, ಜುಲೈ 28: ಗಣಿ ನಾಡು ಬಳ್ಳಾರಿಯಲ್ಲಿ ಅದಿರು ಲಾರಿಗಳ ಓಡಾಟ ಮಿತಿ ಮೀರಿದೆ. ಪ್ರತಿ ದಿನ ಬಳ್ಳಾರಿ ಸಂಡೂರು ಹೆದ್ದಾರಿಯಲ್ಲಿ ಅದಿರು ಲಾರಿಗಳು ಸಾರ್ವಜನಿಕ ವಾಹನಕ್ಕೆ ದಾರಿ ಬಿಡದೇ ತೊಂದರೆ ಕೊಡುತ್ತಿವೆ.
ಹೀಗಾಗಿ ಇಂದು ಮಾಜಿ ಸಚಿವ ಸಂಡೂರು ಕ್ಷೇತ್ರದ ಶಾಸಕ ತುಕಾರಾಂ ಅವರ ವಾಹನಕ್ಕೂ ಅದಿರು ಲಾರಿಗಳು ದಾರಿ ಬಿಡದ ಹಿನ್ನೆಲೆಯಲ್ಲಿ ಲಾರಿ ಚಾಲಕರನ್ನು ನಡು ರಸ್ತೆಯಲ್ಲೇ ತರಾಟೆಗೆ ತೆಗೆದುಕೊಂಡಿದ್ದಾರೆ.

ಅದಿರು ಸಾಗಾಟದ ಲಾರಿಗಳಿಂದ ಟ್ರಾಫಿಕ್ ಜಾಮ್ ಆಗುತ್ತಿರುವ ಬಗ್ಗೆ ಕೆಂಡಾಮಂಡಲರಾದ ಶಾಸಕ, ಚಾಲಕರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸಂಡೂರು-ಬಳ್ಳಾರಿ ರಾಜ್ಯ ಹೆದ್ದಾರಿಯಲ್ಲಿ ಅದಿರು ಲಾರಿಗಳ ಸಂಚಾರ ಮಿತಿ ಮೀರಿದ್ದು, ಲಾರಿ ಚಾಲಕರು ಇತರ ವಾಹನಗಳಿಗೆ ದಾರಿ ಬಿಡದ ಹಿನ್ನೆಲೆ ಪ್ರತಿನಿತ್ಯ ಟ್ರಾಫಿಕ್ ಜಾಮ್ ಉಂಟಾಗುತ್ತಿತ್ತು. ಈ ಕುರಿತು ಸಾರ್ವಜನಿಕರು ಶಾಸಕರ ಗಮನಕ್ಕೆ ತಂದಿದ್ದರು. ಇಂದು ಸ್ವತಃ ಶಾಸಕ ತುಕರಾಂ ಅವರಿಗೆ ದಾರಿ ಬಿಡದ ಹಿನ್ನೆಲೆಯಲ್ಲಿ ಲಾರಿ ಚಾಲಕರಿಗೆ ಕ್ಲಾಸ್ ತೆಗೆದುಕೊಂಡರು.












Click it and Unblock the Notifications