ಶಾಸಕ ಪಿಟಿ ಪರಮೇಶ್ವರ ನಾಯ್ಕಗೆ ಕೊರೊನಾ ಸೋಂಕು ದೃಢ
ಹೊಸಪೇಟೆ, ಜುಲೈ 16: ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಹೂವಿನಹಡಗಲಿ ಶಾಸಕ ಪಿ.ಪಿ. ಪರಮೇಶ್ವರ ನಾಯ್ಕ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
Recommended Video
Obama , Musk , Apple , Uber and may Twitter account Hacked | Oneindia Kannada
ಜೂನ್ ತಿಂಗಳಲ್ಲಿ ಪರಮೇಶ್ವರ ನಾಯ್ಕ ಅವರ ಪುತ್ರನ ಮದುವೆಯಲ್ಲಿ ಎಸ್‌ಓಪಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಅವರ ವಿರುದ್ಧ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು.
50ಕ್ಕಿಂತ ಹೆಚ್ಚು ಜನರು ಮದುವೆಯಲ್ಲಿ ಪಾಲ್ಗೊಳ್ಳಬಾರದು ಎಂಬ ನಿಯಮವಿದ್ದರೂ ನಿಯಮವನ್ನು ಗಾಳಿಗೆ ತೂರಲಾಗಿತ್ತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ನನ್ನ ಪುತ್ರನ ಮದುವೆ ಮುಂದೂಡಲಾಗಿತ್ತ.

, ಕಲ್ಯಾಣ ಮಂಟಪಗಳು ಸಿಗಲಿಲ್ಲ, ಹೀಗಾಗಿ ಸ್ವಗ್ರಾಮದಲ್ಲಿ ಮದುವೆ ಮಾಡಿದ್ದೆ, ಜನ ಜಾಸ್ತಿ ಸೇರಿದ್ದ ಕಾರಣ ತೊಂದರೆ ಆಗಿರುವುದು ನಿಜ ಇದಕ್ಕಾಗಿ ಪೊಲೀಸ್ ನೋಟಿಸ್ ನೀಡಿದ್ದಾರೆ, ನನ್ನ ಮೇಲಿನ ಪ್ರೀತಿಗೋಸ್ಕರ ಜನರು ಬಂದಿದ್ದರು. ಆದರೆ ಯಾರಿಗೂ ಕೊರೊನಾ ಬರುವುದಿಲ್ಲ ಎಂದು ಆ ಸಂದರ್ಭದಲ್ಲಿ ಹೇಳಿದ್ದರು.
ಆದರೆ ಇದೀಗ ಅವರಿಗೆ ಕೊರೊನಾ ಸೋಂಕು ತಗುಲಿರುವುದನ್ನು ಅವರು ಸ್ಪಷ್ಟಪಡಿಸಿದ್ದಾರೆ.












Click it and Unblock the Notifications