ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ಗೆ Z+ ಸೆಕ್ಯುರಿಟಿ ಕೊಡಿ : ಶಾಸಕ ನಾಗೇಂದ್ರ ಒತ್ತಾಯ

|
Google Oneindia Kannada News

ಬಳ್ಳಾರಿ, ಆಗಸ್ಟ್‌ 19: ಬಿಜೆಪಿ ನಾಯಕರು ಕುರುಬ ಸಮಾಜದ ಓಲೈಕೆಗೆ ಕೈ ಹಾಕಿದ್ದಾರೆ. ಕುರುಬರು ಯಾರು ಕುರಿಗಳಲ್ಲ, ನಮ್ಮ ಕುರುಬರಲ್ಲಿ ಜಾಣ್ಮೆಯ ಮತದಾರರಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿಗೆ ಮೊಟ್ಟೆ ಹೊಡೆದಿರುವ ಘಟನೆ ವಿರೋಧಿಸಿ ಕಾಂಗ್ರೆಸ್ ಪಕ್ಷ ನಗರದ ಗಡಗಿ ಚೆನ್ನಪ್ಪ ಸರ್ಕಲ್ ನಲ್ಲಿ ಶುಕ್ರವಾರ ಸಂಜೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಧ್ಯಮದವರಿಗೆ ಮಾತನಾಡಿ, ಬಿಜೆಪಿಯ ನಾಯಕರು ಕುರುಬ ಸಮಾಜದ ಮತದಾರರನ್ನು ಓಲೈಕೆ ಮುಂದಾಗಿದ್ದಾರೆ ಎಂದು ಪರೋಕ್ಷವಾಗಿ ಸಚಿವ ಶ್ರೀರಾಮುಲು ವಿರುದ್ದ ವಾಗ್ದಾಳಿ ಮಾಡಿದರು.

ಕ್ಷಮಾ ಭಿಕ್ಷೆ ಕೇಳಿದ ಸಾವರ್ಕರ್ ದೇಶಪ್ರೇಮಿಯಾಗಲು ಹೇಗೆ ಸಾಧ್ಯ?: ಯುಟಿ ಖಾದರ್ಕ್ಷಮಾ ಭಿಕ್ಷೆ ಕೇಳಿದ ಸಾವರ್ಕರ್ ದೇಶಪ್ರೇಮಿಯಾಗಲು ಹೇಗೆ ಸಾಧ್ಯ?: ಯುಟಿ ಖಾದರ್

ಯಾರು ಸಿದ್ದರಾಮಯ್ಯ ಅವರನ್ನು ವಿರೋಧ ಮಾಡಿದ್ದಾರೋ, ಸೋಲಿಸುವುದಕ್ಕೆ ಕೈ ಹಾಕಿದ್ದಾರೋ ಅಂತಹವರಿಗೆ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಬಿಜೆಪಿಯ ಅನೇಕ ಸಚಿವರು, ಯಡಿಯೂರಪ್ಪ ಅಂತಹ ನಾಯಕರು ಸಿದ್ದರಾಮಯ್ಯರನ್ನು ಹೊಗಳುತ್ತಿದ್ದಾರೆ, ಆದರೆ ಆರ್ ಎಸ್ ಎಸ್ ಮತ್ತು ಬಿಜೆಪಿ ಕೆಲ ಕಾರ್ಯಕರ್ತರು ಗೂಂಡಾ ಪ್ರವೃತ್ತಿ ತೋರಿದ್ದಾರೆ‌ ಮಡಿಕೇರಿಯ ಘಟನೆಯನ್ನು ಖಂಡಿಸಿದರು,

MLA B Nagendra Urged to Government Z+ Security for Siddaramaiah, DK Shivakumar

ಸಿದ್ದರಾಮಯ್ಯ, ಡಿಕೆ ಶಿವಕುಮಾರ್‌ ಸೇರಿದಂತೆ ಪ್ರಮುಖ ನಾಯಕರಿಗೆ ಜೆಡ್ ಪ್ಲಸ್ ಸೆಕ್ಯೂರಿಟಿ ಕೊಡಬೇಕು, ಗುಂಡಾ ಪ್ರವೃತ್ತಿ ತೋರಿದವರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ಕರ್ನಾಟಕ ಬಂದ್ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಹೊಸಪೇಟೆಯಲ್ಲೂ ಪ್ರತಿಭಟನೆ :
ಸಿದ್ದರಾಮಯ್ಯನವರ ಕಾರಿನ ಮೇಲೆ ಮಡಿಕೇರಿಯಲ್ಲಿ ಮೊಟ್ಟೆ ಎಸೆದು ಬಿಜೆಪಿ ಕಾರ್ಯಕರ್ತರು ಗೂಂಡಾ ವರ್ತನೆ ತೋರಿದ್ದಾರೆಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯ ಜಿಲ್ಲಾಧಿಕಾರಿ ಕಚೇರಿಯವರೆಗೆ ಸಾಗಿತು. ಈ ವೇಳೆ ಬಿಜೆಪಿಯ ಬಾವುಟ ಹಾಗೂ ಬಿಜೆಪಿ ನಾಯಕರು ಇರುವ ಚಿತ್ರಕ್ಕೆ ಮೊಟ್ಟೆ ಹೊಡೆದು, ಸೆಗಣಿ ಬಳಿದು ಬಿಜೆಪಿ ವಿರುದ್ಧ ಘೋಷಣೆ ಕೂಗಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಹಗರಿಬೊಮ್ಮನ ಹಳ್ಳಿ ಶಾಸಕ ಭೀಮಾನಾಯ್ಕ, ಮಾಜಿ ಶಾಸಕ ಸಿರಾಜ್ ಶೇಖ್ ಸೇರಿದಂತೆ ಹಲವು ಜನ ಪ್ರತಿಭಟನೆಯಲ್ಲಿ ಭಾಗಿಯಾದರು.

English summary
After the eggs attack on Siddaramaiah's car in Madikeri, congress st protested against BJP across the state. Ballari MLA Nagendra demanded to government for Z+ security for siddaramaiah and DK Shivakumar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X