ದಾಳಿಂಬೆ, ಪಪ್ಪಾಯಿ ಬೆಳೆದು ಸಂಕಷ್ಟಕ್ಕೆ ಸಿಲುಕಿದ ರೈತ

ವಿಜಯನಗರ, ಮೇ 27; ಪಪ್ಪಾಯಿ ಮತ್ತು ದಾಳಿಂಬೆಯನ್ನು 4 ಎಕರೆಯಲ್ಲಿ ಮಿಶ್ರ ಬೆಳೆಯಾಗಿ ಬೆಳೆದಿದ್ದ ರೈತನೊಬ್ಬ ಲಾಕ್‌ಡೌನ್‌ನಿಂದಾಗಿ ಕಂಗಾಲಾಗಿದ್ದಾನೆ. ಬೆಳೆದ ಬೆಳೆ ಕೈಗೆ ಬಂದಿದ್ದು, ಅದನ್ನು ಕೊಳ್ಳಲು ಯಾರೂ ಸಹ ಬರುತ್ತಿಲ್ಲ.

ವಿಜಯನಗರಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕಿತ್ತನೂರು ಗ್ರಾಮದ ರೈತ ಅಳವಂಡಿ ನಿಂಗಪ್ಪ ಸಂಕಷ್ಟಕ್ಕೆ ಸಿಲುಕಿದವರು. ಪಪ್ಪಾಯಿ ಮತ್ತು ದಾಳಿಂಬೆ ಬೆಳೆಯಲು ಖರ್ಚು ಮಾಡಿದ ಹಣವಾದರೂ ಸಿಗುವುದೋ? ಎಂಬ ಚಿಂತೆಯಲ್ಲಿದ್ದಾರೆ.

ದಾಳಿಂಬೆ ಮತ್ತು ಪಪ್ಪಾಯಿ ಸಸಿಗಳನ್ನು ಮೂರು ಅಡಿಗಳಿಗೊಂದು ನೆಡಬೇಕಾಗುತ್ತದೆ. ಪ್ರತಿ ಸಸಿಗಳಿಗೆ ಹನಿ ನೀರಾವರಿ ಮಾಡಬೇಕಾಗುತ್ತದೆ. ಬದು ನಿರ್ಮಾಣ, ಸಸಿ ನೆಡಲು ಬೇಕಾಗುವ ಕೂಲಿ ಮುಂತಾದವು ಸೇರಿ ಒಂದು ಎಕರೆಗೆ 1.10 ಲಕ್ಷ ರೂ. ತನಕ ಖರ್ಚು ಮಾಡಿದ್ದಾರೆ. ದಾಳಿಂಬೆ ಮತ್ತು ಪಪ್ಪಾಯಿ ಸೇರಿ ಸುಮಾರು 4 ಲಕ್ಷ ರೂ. ಖರ್ಚು ಮಾಡಿದ್ದಾರೆ.

 Lockdown Hagaribommanahalli Farmer In Trouble

ಪಪ್ಪಾಯಿ ಬೆಳವಣಿಗೆ; ಪಪ್ಪಾಯಿ ಸಸಿ ನಾಟಿ ಮಾಡಿದ ಮೇಲೆ 9 ರಿಂದ 10 ತಿಂಗಳಲ್ಲಿ ಬೆಳೆ ಕಟಾವಿಗೆ ಬರುತ್ತದೆ. ಕಟಾವಿಗೆ ಬಂದ ಬಳಿಕ ದಿನಾಲೂ 5 ರಿಂದ 6 ದಿನಗೂಲಿ ಕೆಲಸಗಾರರು ಬೇಕಾಗುತ್ತಾರೆ.

ಒಂದು ದಿನದ ಕೂಲಿ ಒಬ್ಬರಿಗೆ 400 ರೂ. ಕೊಡಬೇಕು. ಲಾಕ್‌ಡೌನ್ ಮೊದಲು ಪಪ್ಪಾಯಿ ಒಂದು ಕೆಜಿಗೆ 15 ರಿಂದ 17 ರೂ. ವರೆಗೂ ಮಾರಾಟ ಮಾಡಲಾಗುತ್ತಿತ್ತು. ಈಗ ಲಾಕ್‌ಡೌನ್ ಘೋಷಣೆ ಮಾಡಿದ ಮೇಲೆ ಕೆಜಿಗೆ 5 ರೂ.ಗೆ ಸಹ ಯಾರೂ ಕೇಳುತ್ತಿಲ್ಲ.

ದಾಳಿಂಬೆ‌ ಬೆಳೆ; ದಾಳಿಂಬೆ ಬೆಳೆಯು ಸಸಿ ಹಾಕಿ ಇಳುವರಿಗೆ ಬರಬೇಕಾದರೆ ಕನಿಷ್ಠ 25 ರಿಂದ 30 ತಿಂಗಳು ಬೇಕು. ಒಂದು ಎಕರೆಗೆ ಕನಿಷ್ಠ ಹನಿ ನೀರಾವರಿ ಒಳಗೊಂಡಂತೆ ಇನ್ನಿತರ ಖರ್ಚುಗಳು ಸೇರಿ 1 ರಿಂದ 2 ಲಕ್ಷ ಖರ್ಚಾಗುತ್ತದೆ.

ರಸಗೊಬ್ಬರದ ಬೆಲೆ ಈಗ ಹೆಚ್ಚಾಗಿದೆ. ದಾಳಿಂಬೆಗೆ ಮೊದಲು ಒಂದು ಕಿಲೋ ಗೆ 100 ರಿಂದ 120 ರೂ.ಗಳವರೆಗೆ ಮಾರಾಟ ಮಾಡಲಾಗುತ್ತಿತ್ತು. ಈಗ ಲಾಕ್‌ಡೌನ್ ಪರಿಣಾಮ 50 ರೂ. ಆಗಿದೆ, ಆದರೂ ಕೊಳ್ಳುವವರು ಇಲ್ಲ.

ಹೊರ ರಾಜ್ಯದಲ್ಲಿ ಬೇಡಿಕೆ; ದಾಳಿಂಬೆಗೆ ಹೊರ ರಾಜ್ಯಗಳಲ್ಲಿ ಬೇಡಿಕೆ ಇತ್ತು. ಹಗರಿಬೊಮ್ಮನಹಳ್ಳಿ ತಾಲೂಕಿನದ್ಯಾಂತ ಹೆಚ್ಚಿನ ಸಂಖ್ಯೆಯಲ್ಲಿ ರೈತರು ದಾಳಿಂಬೆ ಬೆಳೆಯುತ್ತಾರೆ.

ಹೊರ ರಾಜ್ಯಗಳಾದ ಹೈದರಾಬಾದ್, ಕೇರಳ, ತಮಿಳುನಾಡು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬೇಡಿಕೆ ಇತ್ತು. ರೈತರ ಬಳಿಗೆ ಬಂದು ತೆಗೆದುಕೊಂಡು ಹೋಗುತ್ತಿದ್ದರು. ಈಗ ಲಾಕ್‌ಡೌನ್ ಪರಿಣಾಮ ಯಾರು ಸಹ ಬರುತ್ತಿಲ್ಲ.

"ನಮಗೆ ವ್ಯವಸಾಯ ಬಿಟ್ಟರೆ ಬೇರೆ ಕೆಲಸ ಗೊತ್ತಿಲ್ಲ. ನಾವು ಇದರಲ್ಲೇ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಲಾಕ್‌ಡೌನ್‌ನಿಂದಾಗಿ ನಾವು ಬೆಳೆದ ಬೆಳೆಗಿಂತ ಕೂಲಿ ಕಾರ್ಮಿಕರ‌ ಖರ್ಚು ಜಾಸ್ತಿಯಾಗುತ್ತಿದೆ. ಗಿಡದಲ್ಲಿ ಹಣ್ಣುಗಳನ್ನು ಕೀಳದೇ ಹಾಗೆ ಬಿಟ್ಟರೆ ಗಿಡ ಹಣ್ಣು ಹಾಳಾಗುತ್ತದೆ. ಆದರೆ ಕಿತ್ತರೆ ಕೊಳ್ಳುವವರು ಇಲ್ಲ. ನಮಗೆ ಸೂಕ್ತವಾದ ಬೆಂಬಲ ಬೆಲೆ ಕೋಡಬೇಕು" ಎಂದು ಅಳವಂಡಿ ನಿಂಗಪ್ಪ ಸಂಕಷ್ಟ ಹೇಳಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+