ಹಳಿಗಳ ಮೇಲೆ ಆರೋಗ್ಯ: ಬಳ್ಳಾರಿಗೆ ಬಂದ ರೈಲು ಆಸ್ಪತ್ರೆ

ಬಳ್ಳಾರಿ, ಜುಲೈ. 21: ರೈಲ್ವೆ ಹಳಿಗಳ ಮೇಲಿನ ಆಸ್ಪತ್ರೆ ಲೈಫ್‍ಲೈನ್ ಎಕ್ಸ್‍ಪ್ರೆಸ್' ಬಳ್ಳಾರಿಗೆ ಆಗಮಿಸಿದ್ದು, ಆಗಸ್ಟ್ 7ರ ವರೆಗೆ ಸಾರ್ವಜನಿಕರಿಗೆ ಉಚಿತ ಸೇವೆಯನ್ನು ಸಲ್ಲಿಸಲಿದೆ. ಈ ರೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ, ಶಸ್ತ್ರಚಿಕಿತ್ಸೆ, ತಪಾಸಣೆ ಇನ್ನಿತರೆ ಆಧುನಿಕ ಸೌಲಭ್ಯಗಳೂ ಇವೆ.

ಅಚ್ಚರಿ ಆದರೂ, 1991ರಿಂದ ಸೇವೆ ಸಲ್ಲಿಸುತ್ತಿರುವ ಈ ಹಳಿಗಳ ಮೇಲಿನ ಲೈಫ್‍ಲೈನ್ ಎಕ್ಸ್‍ಪ್ರೆಸ್' ಇದೇ ಪ್ರಥಮ ಬಾರಿ ಬಳ್ಳಾರಿಗೆ ಆಗಮಿಸಿದ್ದು, ಸಚಿವ ಆರ್.ವಿ. ದೇಶಪಾಂಡೆ ಅವರು ಇದಕ್ಕೆ ಬಳ್ಳಾರಿಯಲ್ಲಿ ಭಾನುವಾರ ಚಾಲನೆ ನೀಡಿ, ಜನರ ಸೇವೆಗೆ ಅರ್ಪಿಸಿದ್ದಾರೆ.

ಜಿಲ್ಲಾಧಿಕಾರಿ ಡಾ. ರಾಂಪ್ರಸಾತ್ ವಿ. ಮನೋಹರ್ ಅವರು, ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಸಂಜೆ ಭೇಟಿ ನೀಡಿ, ಪರಿಶೀಲಿಸಿ, ಈ ಲೈಫ್‍ಲೈನ್ ಎಕ್ಸ್‍ಪ್ರೆಸ್ ರೈಲಿನಲ್ಲಿ, ವಿವಿಧ ರೀತಿಯ ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಎಲುಬು ಮತ್ತು ಕೀಲುಗೆ, ಪಾರ್ಶ್ವವಾಯು, ಸಕ್ಕರೆ ಕಾಯಿಲೆ, ಸೀಳುತುಟಿ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಸೇರಿ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ. ಅಲ್ಲದೇ, ಸಾಮಾನ್ಯ ಅನಾರೋಗ್ಯಕ್ಕೂ ಸೂಕ್ತ ಚಿಕಿತ್ಸೆಯನ್ನು ಪರಿಣಿತ ವೈದ್ಯರು ನೀಡಲಿದ್ದಾರೆ' ಎಂದು ಮಾಧ್ಯಮಗಳಿಗೆ ತಿಳಿಸಿದರು.

ಸರ್ವ ಸಜ್ಜಿತ ವೈದ್ಯಕೀಯ ರೈಲು

ಸರ್ವ ಸಜ್ಜಿತ ವೈದ್ಯಕೀಯ ರೈಲು

ಭಾರತದ ಇಂಫ್ಯಾಕ್ಟ್ ಫೌಂಡೇಶನ್ ಆಫ್ ಇಂಡಿಯಾದ ಲೈಫ್‍ಲೈನ್ ಎಕ್ಸ್‍ಪ್ರೆಸ್'ನಲ್ಲಿ ಒಟ್ಟು 7 ಬೋಗಿಗಳಿವೆ. ಈ ಎಲ್ಲಾ ಬೋಗಿಗಳಿಗೆ ಭಾರತೀಯ ವೈದ್ಯಕೀಯ ಮಂಡಲಿಯ ಶಿಫಾರಸ್ಸಿನ ಪ್ರಕಾರ ವೈದ್ಯಕೀಯ ಉಪಕರಣಗಳನ್ನು ಅಳವಡಿಸಲಾಗಿದೆ ಮತ್ತು ಶಸ್ತ್ರಚಿಕಿತ್ಸಾ ಕೋಣೆಗಳಲ್ಲಿ ನೈರ್ಮಲ್ಯ ಹಾಗೂ ಶ್ರೇಷ್ಠವಾದ ಗುಣಮಟ್ಟವನ್ನು ಕಾಪಾಡಲಾಗಿದೆ.

ಶಸ್ತ್ರಚಿಕಿತ್ಸೆ, ತಪಾಸಣೆ ಎಲ್ಲಕ್ಕೂ ಅವಕಾಶ

ಶಸ್ತ್ರಚಿಕಿತ್ಸೆ, ತಪಾಸಣೆ ಎಲ್ಲಕ್ಕೂ ಅವಕಾಶ

ಒಟ್ಟು 7 ಬೋಗಿಗಳಿರುವ ಇಲ್ಲಿ ಎರಡು ಶಸ್ತ್ರಚಿಕಿತ್ಸಾ ಕೋಣೆ, ತಪಾಸಣಾ ಕೋಣೆ, ಲ್ಯಾಬ್, ಎಕ್ಸರೇ, ಇನ್ನಿತರೆ ಪ್ರತ್ಯೇಕವಾಗಿವೆ. 25ಕ್ಕೂ ಹೆಚ್ಚಿನ ಪರಿಣಿತ ತಜ್ಞ ವೈದ್ಯರು, ಸಹಾಯಕರು ಈವರೆಗೆ ದೇಶದ 22 ರಾಜ್ಯಗಳಿಗೆ ಭೇಟಿ ನೀಡಿ, 193 ಪ್ರದೇಶಗಳಲ್ಲಿಯ 10 ಲಕ್ಷಕ್ಕೂ ಹೆಚ್ಚಿನ ಜನರಿಗೆ ಆರೋಗ್ಯ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದ್ದಾರೆ. 1.30 ಲಕ್ಷ ಜನರಿಗೆ ಶಸ್ತ್ರಚಿಕಿತ್ಸೆ ನೀಡಿದ್ದಾರೆ ಎಂದು ಜಿಲ್ಲಾ ಸರ್ಜನ್ ಡಾ. ಬಸಿರೆಡ್ಡಿ ಅವರು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಿರಿ

ಗುರುತಿನ ಚೀಟಿ ತೋರಿಸಿ ಚಿಕಿತ್ಸೆ ಪಡೆಯಿರಿ

ಲೈಫ್‍ಲೈನ್ ಎಕ್ಸ್‍ಪ್ರೆಸ್'ನಲ್ಲಿ ಚಿಕಿತ್ಸೆ ಪಡೆಯಲು ಆಸಕ್ತರು, ತಮ್ಮಲ್ಲಿರುವ ಯಾವುದಾದರೂ ಗುರುತಿನ ಚೀಟಿಯನ್ನು ತಪ್ಪದೇ ತರಬೇಕು. ಇಲ್ಲಿ ಚಿಕಿತ್ಸೆ ಪಡೆದ ನಂತರ, ವಿಮ್ಸ್, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಮುಂದುವರೆಸಬಹುದಾಗಿದೆ. ಹೆಚ್ಚಿನ ಚಿಕಿತ್ಸೆ ಅಥವಾ ಇನ್ನಿತರೆ ಅಗಗ್ಯವಿದಲ್ಲಿ, ರೈಲ್ ಆಸ್ಪತ್ರೆಯ ವೈದ್ಯರು, ತಜ್ಞರ ಬಳಿ ಶಿಫಾರಸ್ಸು ಮಾಡಲಿದ್ದಾರೆ ಎಂದು ಅವರು ಹೇಳಿದರು.

ಬಳ್ಳಾರಿ ನಂತರ ವಾರಣಾಸಿಗೆ ಪಯಣ

ಬಳ್ಳಾರಿ ನಂತರ ವಾರಣಾಸಿಗೆ ಪಯಣ

ರೈಲು ಇಲ್ಲಿಂದ ವಾರಣಾಸಿ (ಕಾಶಿ)ಗೆ ತೆರಳಲಿದೆ. ವಿದ್ಯಾರ್ಥಿಗಳ ಆಕರ್ಷಣೆ ಲೈಫ್‍ಲೈನ್ ಎಕ್ಸ್‍ಪ್ರೆಸ್' ವೀಕ್ಷಿಸಲು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಕುತೂಹಲವಿದೆ. ಇಂಥಹ ವ್ಯವಸ್ಥೆಯನ್ನು ವೀಕ್ಷಿಸಲಿಕ್ಕಾಗಿ ಅನೇಕರು ಭಾನುವಾರವನ್ನು ಸದುಪಯೋಗ ಮಾಡಿಕೊಳ್ಳಲು ಕಾತುರರಾಗಿದ್ದಾರೆ. ಜಿಲ್ಲಾಡಳಿತವು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವೀಕ್ಷಣಾ ಸಮಯ ನಿರ್ಧರಿಸುವ ಸಾಧ್ಯತೆಗಳಿವೆ.

ಇಷ್ಟೆಲ್ಲಾ ಅನಾರೋಗ್ಯಕ್ಕೆ ಚಿಕಿತ್ಸೆ

ಇಷ್ಟೆಲ್ಲಾ ಅನಾರೋಗ್ಯಕ್ಕೆ ಚಿಕಿತ್ಸೆ

ಈ ರೈಲು ಆಸ್ಪತ್ರೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್, ಕಣ್ಣು, ಕಿವಿ, ಹಲ್ಲು, ಎಲುಬು ಮತ್ತು ಕೀಲುಗೆ, ಪಾರ್ಶ್ವವಾಯು, ಸಕ್ಕರೆ ಕಾಯಿಲೆ, ಸೀಳುತುಟಿ ಸಂಬಂಧಿಸಿದ ಶಸ್ತ್ರಚಿಕಿತ್ಸೆ ಸೇರಿ ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ. ಅಲ್ಲದೇ, ಸಾಮಾನ್ಯ ಅನಾರೋಗ್ಯಕ್ಕೂ ಸೂಕ್ತ ಚಿಕಿತ್ಸೆಯನ್ನು ಪರಿಣಿತ ವೈದ್ಯರು ನೀಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+