ಸಂಡೂರು ರಾಜ ಮನೆತನದ ಮಹಾರಾಣಿ ವಸುಂಧರಾ ಘೋರ್ಪಡೆ ಇನ್ನಿಲ್ಲ

ಬಳ್ಳಾರಿ, ಮೇ 31 : ಬಳ್ಳಾರಿ ಜಿಲ್ಲೆಯ ಸಂಡೂರು ರಾಜ ಮನೆತನದ ಕೊನೆಯ ಮಹಾರಾಣಿ, ಮಾಜಿ ಸಚಿವ ಎಂ ವೈ ಘೋರ್ಪಡೆ ಅವರ ಪತ್ನಿ ವಸುಂಧರಾ ಘೋರ್ಪಡೆ ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 81 ವರ್ಷದ ವಸುಂಧರಾ ಘೋರ್ಪಡೆ ಅವರು ಇಂದು (ಬುಧವಾರ) ಬೆಂಗಳೂರಿನ ಸಂಜಯ್ ನಗರದ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. [ಬಹುಮುಖ ಪ್ರತಿಭೆಯ ಎಂವೈ ಘೋರ್ಪಡೆ ವಿಧಿವಶ]

Karnataka former minister MY Ghorpade's wife Vasundhara Ghorpade passes away in Bengaluru

ಬರೋಡ ರಾಜ ಮನೆತನದ ವಸುಂಧರಾ ಘೋರ್ಪಡೆ 1953ರಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರಿನ ರಾಣಿಯಾಗಿ, ಮಾಜಿ ಸಚಿವ ದಿವಂಗತ ಎಂ.ವೈ. ಘೋರ್ಪಡೆ ಅವರನ್ನು ವಿವಾಹವಾಗಿದ್ದರು. [ವಿಶಿಷ್ಟ ವಿಭಿನ್ನ ರಾಜಕಾರಣಿ ಎಂವೈ ಘೋರ್ಪಡೆ ವ್ಯಕ್ತಿಚಿತ್ರ]

ವಸುಂಧರಾ ಘೋರ್ಪಡೆಯವರ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಬೆಂಗಳೂರಿನ ಹೆಬ್ಬಾಳದ ಶವಾಗಾರದಲ್ಲಿ ನಡೆಯಲಿದೆ ಎಂದು ಅವರ ಸಂಬಂಧಿ ವೆಂಕಟರಾವ್ ಘೋರ್ಪಡೆ ತಿಳಿಸಿದರು.

ಇವರ ಅಂತ್ಯಕ್ರಿಯೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಸೇರಿದಂತೆ ವಿವಿಧ ರಾಜ್ಯದ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಇನ್ನು ಹೆಚ್ಚಿನ ಮಾಹಿತಿಗೆ 9448497578 ನಂಬರ್ ಗೆ ಸಂಪರ್ಕಿಸಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+