'ನನ್ನ ಹೇಳಿಕೆಗೆ ನಾನು ಬದ್ಧ: ನಾಯಿಗಳು ಬೊಗಳಿದರೆ ತಲೆಕೆಡಿಸಿಕೊಳ್ಳಲ್ಲ'
ಬಳ್ಳಾರಿ, ಜನವರಿ 20: ನನ್ನ ಸ್ವಭಾವ ಹೀಗೆಯೇ, ನಾನು ಇದ್ದಿದ್ದು ಇದ್ದಹಾಗೆ ಮಾತನಾಡುವವನು ನಾಯಿಗಳು ಕೂಗಿದರೆ ತಲೆಕೆಡಿಸಿಕೊಳ್ಳುವುದಿಲ್ಲ ನನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದರು.
ಬಳ್ಳಾರಿಯಲ್ಲಿ ಶನಿವಾರ ನಡೆದ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ನಂತರ ಮಾತನಾಡಿದ ಅವರು, ನಮ್ಮಲ್ಲಿ, ಛಲವಿದೆ ದೇಶವನ್ನು ಕಟ್ಟುವ ಉತ್ಸಾಹವಿದೆ. ನನ್ನ ಸ್ವಭಾವವನ್ನು ಬದಲಾಯಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ನಾನು ಇದ್ದಿದ್ದನ್ನು ಇದ್ದಹಾಗೆ ಮಾತನಾಡುವ ವ್ಯಕ್ತಿ ಇದರಲ್ಲಿ ಯಾವುದೇ ರಾಜಿ ಇಲ್ಲ, ಪ್ರತಿಯೊಬ್ಬರು ಭಾಷೆಯನ್ನು ಸಂವಹಕ್ಕಾಗಿ ಬಳಸಬೇಕೇ ಹೊರತು ಶೃಂಗಾರಕ್ಕಲ್ಲ ಎಂದರು.

ಇದೇ ವೇಳೆ ಅನಂತ್ ಕುಮಾರ್ ಅವರ ಸಂವಿಧಾನ ಬದಲಾಯಿಸಬೇಕು ಎಂಬ ಹೇಳಿಕೆ ವಿರೋಧಿಸಿ ಐಬಿ ಎದುರು ದಲಿತ ಸಂಘಟನೆಯ ನೂರಾಋಉ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ತಮ್ಮ ವಿರುದ್ಧದ ಪ್ರತಿಭಟನೆಗೆ ಕಿಡಿಕಾರಿದ ಅನಂತ್ ಕುಮಾರ್ ನಾಯಿಗಳು ರಸ್ತೆ ಮೇಲೆ ಕುಳಿತು ಕೂಗಿದರೆ ತಲೆಕಡೆಸಿಕೊಳ್ಳುವುದಿಲ್ಲ ನನ್ನ ಸ್ವಭಾವವನ್ನು ಬದಲಾಯಿಸುವ ಮಾತಿಲ್ಲ, ನನ್ನ ಹೇಳಿಕೆಗೆ ನಾನು ಬದ್ಧನಿದ್ದೇನೆ ಎಂದು ಹೇಳಿದರು.












Click it and Unblock the Notifications