ಕೊಟ್ಟೂರು ಠಾಣೆ ಸೀಲ್ ಡೌನ್; 42 ಸಿಬ್ಬಂದಿಗೆ ಕ್ವಾರಂಟೈನ್

ಬಳ್ಳಾರಿ, ಮೇ 31 : ಬಳ್ಳಾರಿ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲು ಆದೇಶ ನೀಡಲಾಗಿದೆ. ಠಾಣೆಯ 42 ಸಿಬ್ಬಂದಿಗಳಿಗೆ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಲು ಸೂಚನೆ ಕೊಡಲಾಗಿದೆ.

"ಹೆಡ್ ಕಾನ್ಸ್‌ಟೇಬಲ್‌ಗೆ ಕೊರೊನಾ ಸೋಂಕು‌ ಧೃಡಪಟ್ಟಿದೆ. ಆದ್ದರಿದ ಇಡೀ ಪೊಲೀಸ್ ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ" ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ. ಕೆ. ಬಾಬಾ ಹೇಳಿದ್ದಾರೆ.

ಠಾಣೆಯ ಪಿಎಸ್ಐ ಸೇರಿದಂತೆ 42 ಸಿಬ್ಬಂದಿಗಳಿಗೆ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಲು ಸೂಚನೆ ನೀಡಲಾಗಿದೆ. ಕೊಟ್ಟೂರು ಪೊಲೀಸ್ ವಸತಿ ಗೃಹಗಳ ಪ್ರದೇಶವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗಿದೆ.

Head Constable Tested Positive For COVID 19 Kotturu Police Station Seal Down

ಠಾಣೆ ಸಂಪೂರ್ಣವಾಗಿ ಸೀಲ್ ಡೌನ್ ಆಗಿರುವುದರಿಂದ ಕೊಟ್ಟೂರು ಠಾಣೆಯ ವ್ಯಾಪ್ತಿಯ ಜನರು ದೂರು ಸೇರಿದಂತೆ ಠಾಣೆಗೆ ಸಂಬಂಧಿಸಿದಂತೆ ವಿಚಾರಗಳಿಗೆ ಕಾನಾಹೊಸಳ್ಳಿ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಜನರಲ್ಲಿ ಮನವಿ ಮಾಡಲಾಗಿದೆ.

ಕೊಟ್ಟೂರು ಪೊಲೀಸ್ ಠಾಣೆಗೆ ಸಂಬಂಧಿಸಿದ ಕೆಲಸ ಮತ್ತು ದೂರುಗಳಿಗೆ ಕಾನಾಹೊಸಳ್ಳಿ ಪೊಲೀಸ್ ಠಾಣೆ ಪಿಎಸ್ಐ ನಾಗರಾಜ್ 9480803060, ಸಿಪಿಐ ರವೀಂದ್ರ ಕುರುಬಗಟ್ಟಿ 9480803045 ಅವರನ್ನು ಸಂಪರ್ಕಿಸಬಹುದು.

3 ಹೊಸ ಪ್ರಕರಣ : "ಜಿಲ್ಲೆಯಲ್ಲಿ ಭಾನುವಾರ 3 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಇವರಲ್ಲಿ ಒಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದು ಅವರು ರಜೆ ಮೇಲೆ ದಾವಣಗೆರೆಗೆ ತೆರಳಿದ್ದರು. ಅಲ್ಲಿಂದ ವಾಪಸ್ ಆಗಿದ್ದರು" ಎಂದು ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಹೇಳಿದ್ದಾರೆ.

ಇಂದು ಸೋಂಕು ಪತ್ತೆಯಾದ ಎಲ್ಲರೂ ಪುರುಷರಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಪತ್ತೆಯಾದ ಎಲ್ಲಾ ಪ್ರಕರಣದ ಮೂಲಗಳನ್ನು ಜಿಲ್ಲಾಡಳಿತ ಪತ್ತೆ ಮಾಡುತ್ತಿದೆ. ಜಿಲ್ಲೆಯಲ್ಲಿನ ಸಕ್ರಿಯ ಪ್ರಕರಣಗಳ ಸಂಖ್ಯೆ 23.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+