ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊನೆಗೂ ಹಂಪಿ ಉತ್ಸವ ಆಚರಣೆ ಮಾಡುವುದಾಗಿ ಘೋಷಿಸಿದ ಸರ್ಕಾರ

|
Google Oneindia Kannada News

ಬಳ್ಳಾರಿ, ಡಿಸೆಂಬರ್ 21 : ಹಲವಾರು ಟೀಕೆಗಳ ಬಳಿಕ ಹಂಪಿ ಉತ್ಸವ ಆಚರಣೆ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿದೆ. ಜನವರಿ 12, 13ರಂದು 2018ರ ಸಾಲಿನ ಹಂಪಿ ಉತ್ಸವ ನಡೆಯಲಿದೆ.

ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಕೊನೆಯ ದಿನ ವಿಧಾನ ಪರಿಷತ್‌ನಲ್ಲಿ ಹಂಪಿ ಉತ್ಸವ ಆಚರಣೆ ಮಾಡುವ ಬಗ್ಗೆ ತೀರ್ಮಾನ ಪ್ರಕಟಿಸಲಾಗಿದೆ. ಕಾಂಗ್ರೆಸ್ ಸದಸ್ಯ ಕೆ.ಸಿ.ಕೊಂಡಯ್ಯ ಅವರ ಪ್ರಶ್ನೆಗೆ ಸಚಿವೆ ಡಾ.ಜಯಮಾಲಾ ಅವರು ಉತ್ತರ ನೀಡಿದರು.

ಹಂಪಿ ಉತ್ಸವನೂ ಮಾಡ್ತೇವೆ, ಕೊಡಗು ಪುನರ್ ನಿರ್ಮಾಣವೂ ಆಗುತ್ತೆ: ಸಾರಾ ಮಹೇಶ್ಹಂಪಿ ಉತ್ಸವನೂ ಮಾಡ್ತೇವೆ, ಕೊಡಗು ಪುನರ್ ನಿರ್ಮಾಣವೂ ಆಗುತ್ತೆ: ಸಾರಾ ಮಹೇಶ್

'ಜನವರಿ 12 ಮತ್ತು 13ರಂದು ಹಂಪಿ ಉತ್ಸವ ಆಚರಣೆ ಮಾಡಲಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು 60 ಲಕ್ಷ ರೂ. ಬಿಡುಗಡೆ ಮಾಡಿದೆ. ಒಟ್ಟು 8 ಕೋಟಿ ರೂ. ವೆಚ್ಚದಲ್ಲಿ ಹಂಪಿ ಉತ್ಸವ ಮಾಡಲು ಸರ್ಕಾರ ತೀರ್ಮಾನಿಸಿದೆ' ಎಂದು ವಿವರಣೆ ನೀಡಿದರು.

ಹಂಪಿ ಉತ್ಸವ ಆಚರಣೆಗೆ ಕುಂಟು ನೆಪವೇಕೆ: ಗಾಲಿ ರೆಡ್ಡಿ ಪ್ರಶ್ನೆಹಂಪಿ ಉತ್ಸವ ಆಚರಣೆಗೆ ಕುಂಟು ನೆಪವೇಕೆ: ಗಾಲಿ ರೆಡ್ಡಿ ಪ್ರಶ್ನೆ

Hampi Utsav to be celebrated on January 12, 13

'ರಾಜ್ಯದಲ್ಲಿನ ಬರ ಪರಿಸ್ಥಿತಿ ಹಿನ್ನಲೆಯಲ್ಲಿ ಹಂಪಿ ಉತ್ಸವವನ್ನು ಈ ಬಾರಿ ಆಚರಣೆ ಮಾಡುವುದಿಲ್ಲ' ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು.

ಹಂಪಿ ಉತ್ಸವದಲ್ಲಿ 4ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿಹಂಪಿ ಉತ್ಸವದಲ್ಲಿ 4ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ

ಹಂಪಿ ಉತ್ಸವದ ಕುರಿತು ಪ್ರತಿಕ್ರಿಯೆ ನೀಡಿದ್ದ ಬಳ್ಳಾರಿ ಶಾಸಕ ಸೋಮಶೇಖರ ರೆಡ್ಡಿ, 'ಹಂಪಿ ಉತ್ಸವ ನಡೆಸಲು ಸರ್ಕಾರದ ಬಳಿ ಹಣ ಇಲ್ಲದಿದ್ದರೆ ನಾವು ಭಿಕ್ಷೆ ಬೇಡಿ ಹಣ ಹೊಂದಿಸಿಕೊಡುತ್ತೇವೆ' ಎಂದು ಹೇಳಿದ್ದರು.

English summary
Finally Karnataka Government decided to celebrated Hampi Utsav on January 12, 13, 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X