ರಸ್ತೆ ಅಪಘಾತದಲ್ಲಿಒಂದೇ ಕುಟುಂಬದ ನಾಲ್ವರ ಸಾವು
ಬಳ್ಳಾರಿ, ಏಪ್ರಿಲ್ 13: ಸಿರುಗುಪ್ಪ ರಸ್ತೆಯ ಭಾಗ್ಯನಗರ ಕ್ಯಾಂಪ್ ಬಳಿ ನಡೆದ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದ್ದಾರೆ.
ಭಾಲ್ಕಿಯ ವೈದ್ಯ ದಂಪತಿಗಳಾದ ಸಂತೋಷ್(35), ಅರ್ಚನಾ (28), ಇವರ ಪುತ್ರಿ ಲಕ್ಷ್ಮಿ( 01) ತಂದೆ ಸಿದ್ಧರಾಮಪ್ಪ( 65 ) ಮೃತರು.

ಗುರುವಾರ ಸಂಜೆ ಭಾಲ್ಕಿಯಿಂದ ಬೆಂಗಳೂರಿಗೆ ಕೌಟುಂಬಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪೋಷಕರೊಂದಿಗೆ ವೈದ್ಯ ದಂಪತಿಗಳು ಕಾರಿನಲ್ಲಿ ಬರುತ್ತಿದ್ದಾಗ ಬಳ್ಳಾರಿ ಸಮೀಪದ ಭಾಗ್ಯನಗರ ಕ್ಯಾಂಪ್ ಬಳಿ, ರಸ್ತೆ ಸೇತುವೆಗೆ ಕಾರು ಡಿಕ್ಕಿ ಹೊಡೆದು ಈ ಅವಘಡ ಸಂಭವಿಸಿದೆ.
ದಂಪತಿಗಳ ಪುತ್ರ ತನುಷ್ (03), ತಾಯಿ ಲೀಲಾವತಿ (55 ) ಪ್ರಾಣಾಪಾಯದಿಂದ ಪಾರಾಗಿ ವಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications