ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿ: ತುಂಗಭದ್ರಾ ನದಿ ಪ್ರವಾಹದಲ್ಲಿ ಕೊಚ್ಚಿ ಹೋದ ತಂದೆ-ಮಗ

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಜುಲೈ. 20: ಗುರುವಾರ ಸಂಜೆಯಿಂದ ತುಂಗಾಭದ್ರಾ ಜಲಾಶಯದಿಂದ ತುಂಗಾಭದ್ರಾ ನದಿಗೆ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಹರಿಬಿಡುತ್ತಿರುವ ಕಾರಣ ಸಿರುಗುಪ್ಪದ ಬಳಿ ಅಕ್ರಮವಾಗಿ ಮರಳು ತುಂಬುತ್ತಿದ್ದ ತಂದೆ - ಮಗ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ.

ಉಳಿದ ಇಬ್ಬರು ನೀರಿನ ರಭಸ ನೋಡಿ ಓಡಿ ಬಂದು, ಜೀವ ಉಳಿಸಿಕೊಂಡ ಘಟನೆ ಶುಕ್ರವಾರ ನಸುಕಿನಲ್ಲಿ ನಡೆದಿದೆ. ಮೃತರನ್ನು ರಫೀಕ್(32 ) ಮತ್ತು ಮಗ ಇಸಾಕ್ (06) ಎಂದು ಗುರುತಿಸಲಾಗಿದೆ.

ತುಂಗಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಪ್ರಕರಣ: ಇನ್ನೂ ಸಿಗದ ಮೃತದೇಹ!ತುಂಗಾ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ ಪ್ರಕರಣ: ಇನ್ನೂ ಸಿಗದ ಮೃತದೇಹ!

ಇಬ್ಬರೂ ಸಿರುಗುಪ್ಪ ಪಟ್ಟಣಕ್ಕೆ ಸಮೀಪದ ಬಾಗೇವಾಡಿ ಗ್ರಾಮದ ನಿವಾಸಿಗಳು ಆಗಿದ್ದು, ಶುಕ್ರವಾರ ನಸುಕಿನಲ್ಲಿ ಹಳ್ಳದಲ್ಲಿ ಉಸುಕು (ಮರಳ)ನ್ನು ತುಂಬಿಕೊಳ್ಳುವಾಗ ಹರಿದ, ನೀರಿನ ರಭಸದಲ್ಲಿ ಸಿಲುಕಿ, ಕೊಚ್ಚಿಕೊಂಡು ಹೋಗಿದ್ದಾರೆ.

Father and Son have washed away in the Tungabhadra river flood

ಈ ಸಂದರ್ಭದಲ್ಲಿ ಇವರ ಸಂಬಂಧಿಗಳಾದ ಮೆಹಬೂಬ್ ಭಾಷ (18 ) ಮತ್ತು ಸದ್ಧಾಂ (32 ) ಜೀವಪಾಯದಿಂದ ಪಾರಾಗಿ, ದಡ ಸೇರಿ, ಗ್ರಾಮಸ್ಥರಿಗೆ ತಿಳಿಸಿದ್ದಾರೆ. ಪೊಲೀಸರು 10 ತೆಪ್ಪಗಳ ಮೂಲಕ ಮತ್ತು ಸ್ಥಳೀಯ ಈಜುಗಾರರ ಮೂಲಕ ಘಟನೆ ನಡೆದ ಸ್ಥಳದಿಂದ 10 ಕಿಮೀ ದೂರದವರೆಗೂ ಶವಗಳ ಹುಡುಕಾಟ ನಡೆಸಿದ್ದಾರೆ.

ಬೆಳಗ್ಗೆ 6 ಗಂಟೆಯಿಂದಲೇ ಸ್ಥಳದಲ್ಲಿ ಕಾರ್ಯಾಚರಣೆ ನಡೆದಿದ್ದು, ಪೊಲೀಸರು, ಮುಳುಗು ತಜ್ಞರು ಮತ್ತು ಕಂದಾಯ ಅಧಿಕಾರಿಗಳು, ಗ್ರಾಮಸ್ಥರು, ಮೃತರ ಕುಟುಂಬಸ್ಥರು ಬೀಡುಬಿಟ್ಟಿದ್ದಾರೆ.

ಪೊಲೀಸರು - ಕಂದಾಯ ಅಧಿಕಾರಿಗಳು ಎಷ್ಟೇ ಎಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದರೂ ಕೂಡ, ಘಟನೆ ನಡೆದಿರುವ ಹಿನ್ನಲೆಯಲ್ಲಿ ಅನೇಕರು ವಿಷಾದ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಸಿರುಗುಪ್ಪ ತಹಸೀಲ್ದಾರ್ ಎಂ. ಸುನಿತ ಅವರು ಭೇಟಿ ನೀಡಿ, ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ.

English summary
Two people have washed away in the Tungabhadra river flood this morning. Deceased have been identified as father Rafiq (32) son Isaac (06).
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X