• search
  • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಇಂದಿನಿಂದ ವಿಜಯನಗರ ಗತವೈಭವ ನೆನಪಿಸುವ ಹಂಪಿ ಉತ್ಸವ

|

ಬಳ್ಳಾರಿ, ಮಾರ್ಚ್ 2: ಹಲವಾರು ಟೀಕೆ, ಟಿಪ್ಪಣಿಗಳಿಗೆ ಕಾರಣವಾಗಿದ್ದ ವಿಜಯನಗರ ಸಾಮ್ರಾಜ್ಯದ ಗತವೈಭವ ನೆನಪಿಸುವ ಹಂಪಿ ಉತ್ಸವ ಇಂದಿನಿಂದ ಪ್ರಾರಂಭವಾಗಲಿದ್ದು ಎರಡು ದಿನಗಳ ಕಾಲ ನಡೆಯಲಿದೆ.

ಇಂದು ಸಂಜೆ 4 ಗಂಟೆಗೆ ಕಲಾ ತಂಡಗಳಿಂದ ಶೋಭಾಯಾತ್ರೆ ನಡೆಯಲಿದ್ದು, 6 ಗಂಟೆಗ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ವಿಶೇಷ ಅತಿಥಿಯಾಗಿ ನಟ ದರ್ಶನ್, ಶಾಸಕ ಮುನಿರತ್ನ ಆಗಮಿಸಲಿದ್ದಾರೆ.

ಹಂಪಿ ಉತ್ಸವಕ್ಕೆ ಕೊನೆಗೂ ಮುಹೂರ್ತ ಫಿಕ್ಸ್‌

ಸಚಿವರಾದ ಡಿಕೆ ಶಿವಕುಮಾರ್, ಸಾರಾ ಮಹೇಶ್, ಪಿಟಿ ಪರಮೇಶ್ವರ ನಾಯ್ಕ, ಇ. ತುಕಾರಾಮ್, ಸಂಸದ ವಿಎಸ್ ಉಗ್ರಪ್ಪ, ಶಾಸಕ ಆನಂದ್ ಸಿಂಗ್ ಇನ್ನಿತರೆ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮಾರ್ಚ್ 2ರಂದು ರಾತ್ರಿ 10 ಗಂಟೆಗೆ ಗಾಯಕ ರಾಜೇಶ್ ಕೃಷ್ಣನ್ ಹಾಗೂ ಮಾರ್ಚ್ 3ರಂದು ರಾತ್ರಿ 8.30ಕ್ಕೆ ಗಾಯಕ ವಿಜಯಪ್ರಕಾಶ್ ಅವರಿಂದ ರಸಮಂಜರಿ ಕಾರ್ಯಕ್ರಮ ಜರುಗಲಿದೆ.

ವೀಕ್ಷಿಸಲೇಬೇಕಾದ 98 ಸ್ಥಳಗಳ ಪಟ್ಟಿಯಲ್ಲಿ ಹಂಪಿ ಇಲ್ಲ, ಏನಿದೆಲ್ಲ?

ಈ ಹಿಂದೆ ಹಂಪಿ ಉತ್ಸವ ಮೂರು ದಿನಗಳ ಕಾಲ ನಡೆಯುತ್ತಿತ್ತು. 8-9 ವೇದಿಕೆಗಳಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಲೆ ಅನಾವರಣಗೊಳ್ಳುತ್ತಿತ್ತು. ಈ ಬಾರಿ ನವಂಬರ್ ನಿಂದ ನಾನಾ ಅಡೆತಡೆಗಳ ಮಧ್ಯೆ ನೆನಗುದಿಗೆ ಬಿದ್ದು, ಇದೀಗ ಕೇವಲ 2 ದಿನಕ್ಕೆ ಸೀಮಿತಗೊಳಿಸಲಾಗಿದೆ.

English summary
After Many controversy Hampi Utsav will resume Today(March 2). Chief minister HD Kumaraswamy will inaugurate the event.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X