ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಳ್ಳಾರಿಯಲ್ಲಿ ಶ್ವಾನ ಪ್ರದರ್ಶನ; ಬರಲಿದೆ 20 ಕೋಟಿಯ ಶ್ವಾನ!

|
Google Oneindia Kannada News

ಬಳ್ಳಾರಿ, ಜನವರಿ 19; ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಚೊಚ್ಚಲ ಬಾರಿಗೆ ಬಳ್ಳಾರಿ ಉತ್ಸವ ನಡೆಸಲಾಗುತ್ತಿದೆ. ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಇದರಲ್ಲಿ ಶ್ವಾನ ಪ್ರದರ್ಶನವೂ ಸೇರಿದೆ.

ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22ರಂದು ಬೆಳಗ್ಗೆ 8ರಿಂದ ವಿವಿಧ ತಳಿಯ ಶ್ವಾನ ಪ್ರದರ್ಶನವನ್ನು ನಗರದ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಪ್ರದರ್ಶನಲ್ಲಿ 20 ಕೋಟಿ ಬೆಲೆಯ ಶ್ವಾನ ಪ್ರಮುಖ ಆಕರ್ಷಣೆಯಾಗಿದೆ.

ಮೊದಲ ಬಾರಿ ಬಳ್ಳಾರಿ ಉತ್ಸವ; ಲಾಂಛನ ಬಿಡುಗಡೆಮೊದಲ ಬಾರಿ ಬಳ್ಳಾರಿ ಉತ್ಸವ; ಲಾಂಛನ ಬಿಡುಗಡೆ

ಈ ಶ್ವಾನ ಪ್ರದರ್ಶನಕ್ಕೆ ಬೆಂಗಳೂರಿನ ಸತೀಶ್ ಎಸ್. ಕಕೇಶಿಯಾ ಶೆಫರ್ಡ್ ತಳಿಯ ನಾಯಿಯನ್ನು ಕರೆತರಲಿದ್ದಾರೆ. ವಿವಿಧ ಶ್ವಾನ ಪ್ರದರ್ಶನದಲ್ಲಿ ಪಾಲ್ಗೊಂಡು ಈಗಾಗಲೇ ಜನಪ್ರಿಯತೆಗಳಿಸಿರುವ ಈ ನಾಯಿಯ ಬೆಲೆ ಬರೋಬ್ಬರಿ 20 ಕೋಟಿ ರೂ.ಗಳು.

Ballari Utsav 2023 : ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ, ವಿಶೇಷತೆಗಳು Ballari Utsav 2023 : ಇದೇ ಮೊದಲ ಬಾರಿಗೆ ಬಳ್ಳಾರಿ ಉತ್ಸವ, ವಿಶೇಷತೆಗಳು

Dog Show In Ballari Caucasian Shepherd Main Attraction

ಸಾಮಾಜಿಕ ಜಾಲತಾಣದಲ್ಲಿ ವೈರಲ್; ಕಕೇಶಿಯಾ ಶೆಫರ್ಡ್ ತಳಿಯ ನಾಯಿಯು ರಾಜ್ಯದಲ್ಲಿ ಅತ್ಯಂತ ದುಬಾರಿ ಬೆಲೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯ ಸೇರಿ ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

Hampi Utsav 2023 : ಜನವರಿ 27 ರಂದು ಬಸವರಾಜ ಬೊಮ್ಮಾಯಿ ಅವರಿಂದ ಹಂಪಿ ಉತ್ಸವಕ್ಕೆ ಚಾಲನೆ: ಶಶಿಕಲಾ ಜೊಲ್ಲೆHampi Utsav 2023 : ಜನವರಿ 27 ರಂದು ಬಸವರಾಜ ಬೊಮ್ಮಾಯಿ ಅವರಿಂದ ಹಂಪಿ ಉತ್ಸವಕ್ಕೆ ಚಾಲನೆ: ಶಶಿಕಲಾ ಜೊಲ್ಲೆ

ಸಿಂಹದಂತೆ ಕಾಣುವ ಅಪರೂಪದ ಈ ಶ್ವಾನದ ತೂಕ 100 ಕೆಜಿ ಇದೆ. ಎತ್ತರ 6 ಅಡಿ ಇದ್ದು, ಉಳಿದ ಸಾಮಾನ್ಯ ನಾಯಿಗಳಿಗಿಂತ ತುಂಬಾ ದೊಡ್ಡದಾಗಿದೆ. ಬಳ್ಳಾರಿಯಲ್ಲಿನ ಶ್ವಾನ ಪ್ರದರ್ಶನದ ಉತ್ಸವದ ಮೆರಗನ್ನು ಹೆಚ್ಚಿಸಲು ಇದು ಆಗಮಿಸಲಿದೆ.

ನೋಂದಣಿ ಉಚಿತ; ಶ್ವಾನ ಪ್ರದರ್ಶನದಲ್ಲಿ ಬಳ್ಳಾರಿ ನಗರದನಿವಾಸಿಗಳು ತಮ್ಮ ತಮ್ಮ ಶ್ವಾನಗಳನ್ನು ಪ್ರದರ್ಶಿಸಲು ಈಗಾಗಲೇ ನೊಂದಣಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಸ್ಪರ್ಧೆಯಲ್ಲಿ ಶ್ವಾನಗಳಿಗೆ ನೆರಳು ಮತ್ತು ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ.

Dog Show In Ballari Caucasian Shepherd Main Attraction

ಸ್ಪರ್ಧೆಯಲ್ಲಿ ಪ್ರಶಸ್ತಿ ವಿಜೇತ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸಲು ಜಾತಿ ಶ್ವಾನಗಳಿಗೆ ಮಾತ್ರ ಅವಕಾಶವಿರುತ್ತದೆ. ಶ್ವಾನ ಪ್ರದರ್ಶನಕ್ಕೆ ನೋಂದಣಿ ಉಚಿತ. ಜನವರಿ 20ರಂದು ಸಂಜೆ 5ರ ತನಕ ನೋಂದಣಿ ಮಾಡಿಸಬಹುದು.

ಮಾಲೀಕರಿಗೆ ಸೂಚನೆಗಳು

* ಶ್ವಾನ ಪ್ರದರ್ಶನಕ್ಕೆ ಬರುವ ಶ್ವಾನಗಳಿಗೆ ಸರಿಯಾದ ಬೆಲ್ಟ್ ಮತ್ತು ಚೈನ್‍ ಅನ್ನು ತೊಡಿಸಿಕೊಂಡು ಬರಬೇಕು.

* ಶ್ವಾನದ ಉತ್ತಮ ಗುಣಗಳನ್ನು ನಿರ್ಣಾಯಕರ ಗಮನಕ್ಕೆ ಬರುವಂತೆ ಪ್ರದರ್ಶಿಸಬೇಕು.

* ಶ್ವಾನದ ಸಂಪೂರ್ಣ ಮಾಹಿತಿ ಮಾಲೀಕರು ತಿಳಿದಿರಬೇಕು.

* ಶ್ವಾನ ಪ್ರದರ್ಶನದ ದಿನಾಂಕದಂದು ಸ್ನಾನ ಮಾಡಿಸಬಾರದು.

* ಶ್ವಾನ ಪ್ರದರ್ಶನದಂದು ನಿರ್ಣಾಯಕರು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಬೇಕು.

* ಶ್ವಾನದ ದೇಹದ ಅಂಗ ರಚನೆಯ ಜೊತೆಗೆ ಕೂದಲಿನ ಕಾಂತಿ, ಹಲ್ಲುಗಳನ್ನು, ಮೂಗು, ಕಿವಿಗಳನ್ನು ಪರೀಕ್ಷಿಸುವುದರಿಂದ ಅವುಗಳನ್ನು ಶುಚಿಯಾಗಿಟ್ಟಿರಬೇಕು.

* ಶ್ವಾನ ಪ್ರದರ್ಶನದಂದು ತುರ್ತು ಚಿಕಿತ್ಸೆಯ ಸೌಲಭ್ಯಗಳು ಲಭ್ಯವಿರುತ್ತದೆ.

ಬಹುಮಾನದ ವಿವರಗಳು: ಪ್ರತಿ ತಳಿಗೆ ಮೊದಲನೇ ಸ್ಥಾನ ರೂ. 3 ಸಾವಿರ, ಎರಡನೇ ಸ್ಥಾನ ರೂ. 2 ಸಾವಿರದಂತೆ ಬಹುಮಾನ ನೀಡಲಾಗುವುದು. ಎಲ್ಲಾ ತಳಿಯ ಪುಟ್ಟ ನಾಯಿ ಮರಿಗಳಿಗೆ (3 ರಿಂದ 12ನೇ ತಿಂಗಳವರೆಗಿನ) ಮೊದಲನೇ ಸ್ಥಾನ ರೂ. 3 ಸಾವಿರ, ಎರಡನೇ ಸ್ಥಾನ ರೂ. 2 ಸಾವಿರ ಮತ್ತು ಮೂರನೇ ಸ್ಥಾನ ರೂ.1 ಸಾವಿರದಂತೆ ಬಹುಮಾನ ನೀಡಲಾಗುವುದು.

ಪ್ರತಿ ವಯಸ್ಕ ಗುಂಪಿನ ಶ್ವಾನ ತಳಿಯಲ್ಲಿ ಮೊದಲ ಸ್ಥಾನ ಪಡೆದ ಶ್ವಾನವನ್ನು ಕೊನೆಯ ಸುತ್ತಾದ ಪ್ರದರ್ಶನದ ಉತ್ತಮ ತಳಿ ಸ್ಪರ್ಧೆಗೆ ಆಯ್ಕೆಮಾಡಿ ರೂ. 10 ಸಾವಿರ ಬಹುಮಾನವನ್ನು ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಶ್ವಾನಗಳಿಗೆ ಭಾಗವಹಿಸಿದ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಜನವರಿ 21 ಮತ್ತು 22ರಂದು ಬಳ್ಳಾರಿ ಉತ್ಸವ ನಡೆಯಲಿದೆ. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳು ಪ್ರತ್ಯೇಕವಾದ ಬಳಿಕ ಮೊದಲ ಬಾರಿಗೆ ಬಳ್ಳಾರಿ ಉತ್ಸವ ಆಯೋಜನೆ ಮಾಡಲಾಗಿದೆ.

ವಿಜಯನಗರ ಜಿಲ್ಲೆಯ ಹಂಪಿಯಲ್ಲಿ ಜನವರಿ 27ರಿಂದ ಮೂರು ದಿನಗಳ ಕಾಲ ಹಂಪಿ ಉತ್ಸವ 2023ರ ನಡೆಯಲಿದೆ. ಜನವರಿ 20ರಂದು ಹಂಪಿ ಉತ್ಸವದ ಲಾಂಛನ ಬಿಡುಗಡೆ ಮಾಡಲಾಗುತ್ತದೆ.

English summary
Dog show in Ballari on January 22. Satish S a dog breeder and the president of Indian Dog Breeder's Association will bring 20 crore Caucasian Shepherd dog for show.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X