ಬಳ್ಳಾರಿ ಜನತೆಗೆ ಕೃತಜ್ಞತೆ ಸಲ್ಲಿಸಿದ ಸಚಿವ ಡಿ.ಕೆ.ಶಿವಕುಮಾರ್

Recommended Video

      Bellary By-elections results 2018 : ಬಳ್ಳಾರಿ ಜನತೆಗೆ ಕೃತಜ್ಞತೆ ಸಲ್ಲಿಸಿದ ಡಿ ಕೆ ಶಿವಕುಮಾರ್

      ಬಳ್ಳಾರಿ, ನವೆಂಬರ್.06: ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಅವರಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟಿರುವ ಬಳ್ಳಾರಿ ಜನರಿಗೆ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ. ಶಿವಕುಮಾರ್ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.

      ದೀಪಾವಳಿ ವಿಶೇಷ ಪುರವಣಿ

      ಈ ಗೆಲುವು ಬರೀ ಚುನಾವಣೆ ಗೆಲುವಲ್ಲ. ಬಳ್ಳಾರಿ ಜನರ ಸ್ವಾಭಿಮಾನದ ಗೆಲುವು. ಆತ್ಮಗೌರವದ ಗೆಲುವು. ಸರ್ವಾಧಿಕಾರಿ ಧೋರಣೆ ವಿರುದ್ಧದ ಗೆಲುವು. ಹದಿನಾಲ್ಕು ವರ್ಷಗಳ ನಂತರ ಮತ್ತೆ ಕಾಂಗ್ರೆಸ್ ಪತಾಕೆ ಹಾರಿಸಿರುವ ಬಳ್ಳಾರಿ ಜನರ ವಿಶ್ವಾಸವನ್ನು ಇಮ್ಮಡಿಗೊಳಿಸುವ ರೀತಿಯಲ್ಲಿ ತಮ್ಮ ಪಕ್ಷದವರು ಅಹರ್ನಿಶಿ ಶ್ರಮಿಸುತ್ತೇವೆ.

      ಈ ಗೆಲುವಿನ ಮೂಲಕ ನೀವು ನಮ್ಮ ಮೇಲೆ ಋಣ ಹೊರಿಸಿದ್ದೀರಿ. ಜವಾಬ್ದಾರಿ ಹೆಚ್ಚಿಸಿದ್ದೀರಿ. ನಿಮ್ಮ ಸೇವೆ ಮೂಲಕ ಅದನ್ನು ತೀರಿಸುವ ಸಂಕಲ್ಪ ನಮ್ಮದು ಎಂದು ಡಿಕೆಶಿ ತಿಳಿಸಿದ್ದಾರೆ.

      DK Shivakumar thanked the Bellary people

      ಉಗ್ರಪ್ಪನವರು ಬಳ್ಳಾರಿ ಧ್ವನಿಯನ್ನು ಸಂಸತ್ತಿನಲ್ಲಿ ಮೊಳಗಿಸಲಿದ್ದಾರೆ. ಇನ್ನೇನಿದ್ದರೂ ಬಳ್ಳಾರಿ ಕಟ್ಟುವ ಕೆಲಸ. ಅದನ್ನು ನಾವು, ನೀವೂ ಇಬ್ಬರೂ ಸೇರಿ ಮಾಡೋಣ. ತಮಗೆಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು ಎಂದು ಶುಭ ಹಾರೈಸಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+