• search
 • Live TV
ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ನಿರಾಣಿ ಮನೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆ ಆಗಿದೆ, ಆದರೆ..'

By ಬಳ್ಳಾರಿ ಪ್ರತಿನಿಧಿ
|

ಬಳ್ಳಾರಿ, ಜೂನ್ 1: ಮುರಗೇಶ್ ನಿರಾಣಿ ಅವರ ಮನೆಯಲ್ಲಿ ಕೆಲವು ಶಾಸಕರು ಸೇರಿದ್ದು ನಿಜ, ನಿರಾಣಿ ಅವರ ಬೆಂಗಳೂರಿನ ಮನೆಯಲ್ಲಿ ಭೋಜನ ಕೂಟ ಮಾಡಿದ್ದಾರೆ. ಅಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿರಬಹುದು, ಆದರೆ ಚರ್ಚೆ ಮಾಡಿದರೆ ಭಿನ್ನಮತ ಇದೆ ಎಂಬ ಅರ್ಥ ಅಲ್ಲ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.

   ಜನಗಳಿಗೆ ಇಷ್ಟು ಅವಮಾನ ಮಾಡಿದ್ದೀರಲ್ಲಾ , ನಿಮ್ಮನ್ನು ಅವರು ಸುಮ್ಮನೆ ಬಿಡೋದಿಲ್ಲ ಮೋದಿಯವರೇ | Oneindia Kannada

   ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಸವದಿ ಅವರು, ಲಾಕ್ ಡೌನ್ ಸಂದರ್ಭದಲ್ಲಿ ನಾನೂ ಕೂಡ ನಮ್ಮ ಮನೆಯಲ್ಲಿ ಭೋಜನ ಕೂಟ ಮಾಡಿಸಿದ್ದೆ, ಪ್ರತಿ ದಿನ ನನ್ನ ಮನೆಯಲ್ಲಿ 20 ರಿಂದ 25 ಜನ ಶಾಸಕರು ಊಟ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಊಟ ಎಲ್ಲೂ ಸಿಗುತ್ತಿರಲಿಲ್ಲ, ಹೀಗಾಗಿ ಅವರು ಊಟಕ್ಕೆ ಸೇರಿದ್ದಾರೆ ಎಂದಿದ್ದಾರೆ. ಇನ್ನು ನಾನು ಮಂತ್ರಿ ಆಗಬೇಕು ಎನ್ನುವ ಅಪೇಕ್ಷೆ ಎಲ್ಲಿರಿಗೂ ಇರುತ್ತದೆ, ಹಾಗೆ ಕೊರೊನಾ ವೈರಸ್ ನಿಂದ ಲಾಕ್ ಡೌನ್ ಸಮಯದಲ್ಲಿ ಕೆಲ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗಿದೆ ಎಂದರು.

   ಬಳ್ಳಾರಿಯಲ್ಲಿ ರೆಡ್ಡಿ ಪಾಳಯ ಪ್ರಾಬಲ್ಯ: ಬುಡಾ ಅಧ್ಯಕ್ಷರ ಮರು ನೇಮಕ

   ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿದೆ

   ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಆಗಿದೆ

   ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ಮಾಡಿರಬಹುದು. ಆದರೆ ಬಿ.ಎಸ್ ಯಡಿಯೂರಪ್ಪನವರು ನಮ್ಮ ನಾಯಕರು. ಅವರೇ ನಮ್ಮ ಮುಖ್ಯಮಂತ್ರಿಗಳು ಎಂದು ಸ್ಪಷ್ಟಪಡಿಸಿದರು.

   ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಅವರ ವೈಯಕ್ತಿಕ ವಿಷಯ. ರಮೇಶ್ ಕತ್ತಿ ಕೂಡಾ ತಮ್ಮ ಬೇಡಿಕೆ ಇಟ್ಟಿದ್ದಾರೆ, ಅದರಲ್ಲಿ ಏನು ತಪಿಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಾರೆ, ಅವರೇ ಒಂದು ದಿನ ಎಲ್ಲರನ್ನೂ ಕರೆದು ಮಾತನಾಡುತ್ತಾರೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

   ಬೆಳಗಾವಿಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ

   ಬೆಳಗಾವಿಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ

   ಪಕ್ಷ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದೆ, ವಿರೋಧ ಪಕ್ಷದ ಹೇಳಿಕೆಯನ್ನು ‌ನಾವು ಗಂಭೀರವಾಗಿ ಪರಿಗಣಿಸಲ್ಲ. ಅಲ್ಲದೇ ಬೆಳಗಾವಿಯಿಂದ ರಾಜ್ಯ ಸರ್ಕಾರಕ್ಕೆ ಯಾವುದೇ ತೊಂದರೆ ಇಲ್ಲ, ಈ ಬಗ್ಗೆ ನಾನು ಭರವಸೆ ಕೊಡುತ್ತೇನೆ ಎಂದು ಹೇಳುವ ಮೂಲಕ ಪಕ್ಷದಲ್ಲಿ ಭಿನ್ನಮತ ಇರುವ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡರು.

   ವಿವಿಧ ವರ್ಗದವರಿಗೆ ಆರ್ಥಿಕ ಸಹಕಾರ

   ವಿವಿಧ ವರ್ಗದವರಿಗೆ ಆರ್ಥಿಕ ಸಹಕಾರ

   ಲಾಕ್ ಡೌನ್ ನಿಂದ ಸಮಸ್ಯೆ ಎದುರಿಸುತ್ತಿರುವ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರ 20 ಲಕ್ಷ ಕೋಟಿ ರೂ, ಪ್ಯಾಕೇಜ್ ಕುರಿತು ಡಿಸಿಎಂ ಲಕ್ಷ್ಮಣ ಸವದಿ ವಿವರಣೆ ನೀಡಿದರು.

   ರಾಜ್ಯ ಬಿಜೆಪಿ ಸರ್ಕಾರ ಅತಿವೃಷ್ಠಿ ಮತ್ತು ಕೊರೊನಾ ವೈರಸ್ ಸೋಂಕನ್ನು ಸಮರ್ಪಕವಾಗಿ ನಿಭಾಯಿಸಿದೆ ಎಂದು ಹೇಳಿದ ಸವದಿ, ಕೊರೊನಾ ವೈರಸ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದ ವಿವಿಧ ವರ್ಗದವರಿಗೆ ನೀಡಿದ ಆರ್ಥಿಕ ಸಹಕಾರದ ವಿವರಣೆ‌ ನೀಡಿದರು.

   ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ

   ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಸಲಾಗಿದೆ

   ಕೊರೊನಾ ವೈರಸ್ ಸೋಂಕು ರಾಜ್ಯದಲ್ಲಿ ನಿಯಂತ್ರಣದಲ್ಲಿತ್ತು, ಆದರೆ ವಲಸೆ ಕಾರ್ಮಿಕರು ಮುಂಬೈನಿಂದ ಬಂದ ಬಳಿಕ ಹೆಚ್ಚಾಯಿತು. ಕಾರ್ಮಿಕರನ್ನು ಕರೆ ತರುವುದು ನಮ್ಮ ಕರ್ತವ್ಯವಾಗಿತ್ತು. ಮುಂಬೈ, ಪುಣೆಯಿಂದ ಕರೆದುಕೊಂಡು ಬರಬೇಕಾಯಿತು. ಅನಿವಾರ್ಯವಾಗಿ ಕ್ವಾರಂಟೈನ್ ಅವಧಿಯನ್ನು 7 ದಿನಕ್ಕೆ ಇಳಿಕೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ತಿಳಿಸಿದರು. ಬಳ್ಳಾರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸಚಿವ ಆನಂದ ಸಿಂಗ್, ಸಂಸದರಾದ ಕರಡಿ ಸಂಗಣ್ಣ, ದೇವೇಂದ್ರಪ್ಪ ಉಪಸ್ಥಿತರಿದ್ದರು.

   English summary
   Some MLAs had dinner at Nirani's Bengaluru home. There may have been discussions on leadership change, but it does not mean that there is dissent, Deputy Chief Minister Lakshman Savadi said that.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X