ಸಂಡೂರಿನಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿದ ಕಾಂಗ್ರೆಸ್ ಅಭ್ಯರ್ಥಿ ಈ ತುಕರಾಂ
ಬಳ್ಳಾರಿ : ಮೇ.15 : ಸಂಡೂರು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ ತುಕಾರಾಂ ಸತತ ಮೂರನೇ ಬಾರಿ ಗೆಲ್ಲುವುದರ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ.
14,054 ಮತಗಳ ಅಂತರದಿಂದ ಅವರು ಜಯಭೇರಿ ಗಳಿಸಿದ್ದಾರೆ.
ಒಟ್ಟು 77,951 ಮತಗಳನ್ನು ಪಡೆದಿರುವ ಅವರು ಬಿಜೆಪಿ ಅಭ್ಯರ್ಥಿ ಮದ್ಯ ಮಾರಾಟದ ಉದ್ಯಮಿ ಡಿ.ರಾಘವೇಂದ್ರ ಅವರನ್ನು ಮಣಿಸಿದ್ದಾರೆ. ಡಿ.ರಾಘವೇಂದ್ರ 63,897 ಮತ ಪಡೆದಿದ್ದು, ಜೆಡಿಎಸ್ ನ ವಸಂತ ಕುಮಾರ್ 4,329 ಮತಗಳನ್ನು ಪಡೆದಿದ್ದಾರೆ.
ಲಾಡ್ ಮತ್ತು ಘೋರ್ಪಡೆ ಮನೆತನದ ರಾಜಕೀಯ ಒಳಪಟ್ಟುಗಳನ್ನು ಅತೀ ಹತ್ತಿರದಿಂದ ಕಂಡಿರುವ ಇ. ತುಕಾರಾಂ ಈ ಎರಡು ಕುಟುಂಬಗಳ ಬೆಂಬಲದಿಂದಲೇ ಎರಡು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದಾರೆ. ಇದೀಗ ಮೂರನೇ ಬಾರಿ ಗೆಲುವು ಸಾಧಿಸಿರುವುದು ಅವರ ಕಾರ್ಯಕರ್ತರಲ್ಲಿ ಸಂತಸ ಮೂಡಿದೆ.

ಕಾಂಗ್ರೆಸ್ ನ ಇ. ತುಕಾರಾಂ ಅವರಿಗೆ ಬಿಜೆಪಿ - ಜೆಡಿಎಸ್ ಅಭ್ಯರ್ಥಿಗಳು ಪ್ರಬಲವಾದ ಪೈಪೋಟಿ ನೀಡಲಾರರು ಎನ್ನುವುದು ಮತದಾರರ ಲೆಕ್ಕಾಚಾರವಾಗಿತ್ತು. ಇದೀಗ ಅದು ನಿಜವಾಗಿದೆ.












Click it and Unblock the Notifications