ಬಳ್ಳಾರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ತವ್ಯಪ್ರಜ್ಞೆ ಜೊತೆಗೆ ಆಟೋ ಚಾಲಕನ ಪ್ರಾಣವನ್ನೂ ಉಳಿಸಿದ ಕ್ಯಾಮೆರಾಮನ್

By ಬಳ್ಳಾರಿ ಪ್ರತಿನಿಧಿ
|
Google Oneindia Kannada News

ಬಳ್ಳಾರಿ, ಸೆಪ್ಟೆಂಬರ್.04: ನ್ಯೂಸ್ ಚಾನೆಲ್ ವೊಂದರ ಕ್ಯಾಮರಾಮೆನ್ ತನ್ನ ಕರ್ತವ್ಯಪ್ರಜ್ಞೆಯನ್ನು ತೋರುವುದರ ಜೊತೆ ಜೊತೆಯಲ್ಲೇ ಓರ್ವನ ಪ್ರಾಣ ರಕ್ಷಿಸುವಲ್ಲಿ ನೆರವಾಗಿ ತನಗೆ ಅರಿವೇ ಇಲ್ಲದಂತೆ ಮಾನವೀಯ ಜವಾಬ್ದಾರಿಯನ್ನು ನಿರ್ವಹಿಸಿ ದೊಡ್ಡ ಸುದ್ದಿಯಾಗಿದ್ದಾನೆ.

ಆತನ ಹೆಸರು ದುರ್ಗೇಶ್ ಯಾದವ್ (34). ಬಳ್ಳಾರಿ ಜಿಲ್ಲೆಯ ಕನ್ನಡ ಸುದ್ದಿವಾಹಿನಿಯ ಕ್ಯಾಮರಾಮೆನ್. ಆಗಿದ್ದು ಏನಪ್ಪಾ ಅಂದ್ರೆ, ಸೋಮವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಆತನು ಕರ್ತವ್ಯಕ್ಕೆ ಹಾಜರಾಗಲು ಸ್ಥಳೀಯ ಸಂಸ್ಥೆಗಳ ಮತ ಎಣಿಕೆಯ ಕೇಂದ್ರವಾಗಿದ್ದ ತಹಸೀಲ್ದಾರರ ಕಚೇರಿಗೆ ಹೋಗುತ್ತಿದ್ದಾಗ, ಬಳ್ಳಾರಿಯ ದುರ್ಗಮ್ಮಗುಡಿ ಸಮೀಪದ ಅಂಡರ್ ಬ್ರಿಡ್ಜ್ ನಲ್ಲಿ ಆಟೋ ಚಾಲಕ ತನ್ನ ಆಟೋದ ಮುಂದಿನ ಗ್ಲಾಸ್ ನಲ್ಲಿ ಸಿಲುಕಿ ನೇತಾಡುತ್ತಿದ್ದ.

ಮಂಗಳೂರು: ಕಾರಿನಲ್ಲೇ ಹೆರಿಗೆ, ಮಾನವೀಯತೆ ಮೆರೆದ ಹೆಡ್‌ಕಾನ್ಸ್ಟೇಬಲ್‌ಮಂಗಳೂರು: ಕಾರಿನಲ್ಲೇ ಹೆರಿಗೆ, ಮಾನವೀಯತೆ ಮೆರೆದ ಹೆಡ್‌ಕಾನ್ಸ್ಟೇಬಲ್‌

ಇದನ್ನು ಕಂಡ ದುರ್ಗೇಶ್ ಯಾದವ್, ಮೊದಲು ಮಾಡಿದ್ದು, ತನ್ನ ಕ್ಯಾಮರಾ ತೆಗೆದು ಐದು ಸೆಕೆಂಡುಗಳ ಕಾಲ ಚಿತ್ರೀಕರಣ. ಆದರೆ, ಗಾಯಾಳು ಚಾಲಕನ ಉಸಿರಾಟವನ್ನು ತಕ್ಷಣವೇ ಸೂಕ್ಷ್ಮವಾಗಿ ಗಮನಿಸಿದ ದುರ್ಗೇಶ್, ಕ್ಯಾಮರಾ ರೋಲಿಂಗ್ ನಿಲ್ಲಿಸಿ, ಆಟೋ ಚಾಲಕನನ್ನು ಸಂಕಷ್ಟದಿಂದ ಪಾರು ಮಾಡಲು ಮುಂದಾದರು.

Cameraman of News Channel has saved ones life with his duties

ಆಗ, ದಾರಿಹೋಕರು ಆರಂಭದಲ್ಲಿ ಯಾರೊಬ್ಬರೂ ನೆರವಿಗೆ ಬಾರದೇ ಇದ್ದಾಗ, ತಕ್ಷಣವೇ, ಗಾಯಾಳುವನ್ನು ಆಟೋದ ಸಿಲುಕಿನಿಂದ ಹೊರಕ್ಕೆ ತೆಗೆದು, ರಸ್ತೆಯ ಮೇಲೆ ಮಲಗಿಸಿ, ಪ್ರಾಥಮಿಕ ಚಿಕಿತ್ಸೆಗೆ ಮುಂದಾಗಿ, ಪೊಲೀಸರಿಗೆ ಮಾಹಿತಿ ರವಾನೆ ಮಾಡಿ, ಗಾಯಾಳುವನ್ನು ವಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸುವಲ್ಲಿ ಯಶಸ್ವಿಯಾದರು.

ಕರ್ತವ್ಯಪ್ರಜ್ಞೆ ಮೆರೆದ ಸಂಚಾರಿ ಪೊಲೀಸರಿಗೆ ಶಭಾಶ್‌ಗಿರಿಕರ್ತವ್ಯಪ್ರಜ್ಞೆ ಮೆರೆದ ಸಂಚಾರಿ ಪೊಲೀಸರಿಗೆ ಶಭಾಶ್‌ಗಿರಿ

ಈ ಕುರಿತು ಒನ್ ಇಂಡಿಯಾ ಜೊತೆ ಮಾತನಾಡಿದ ದುರ್ಗೇಶ್ ಯಾದವ್ ನಾನು ಮತ ಎಣಿಕೆ ಕೇಂದ್ರಕ್ಕೆ ಹೋಗುತ್ತಿದ್ದೆ, ಅದೇ ಸಂದರ್ಭದಲ್ಲಿ ಲಗೇಜ್ ಆಟೋ, ಈ ಆಟೋಕ್ಕೆ ಡಿಕ್ಕಿ ಹೊಡೆದು, ಪರಾರಿ ಆದ.

ಆಕೆ ಸುದ್ದಿಗೆ ಹೊಸಬರಲ್ಲ, ಆದರೂ ಅಂದು ಕಣ್ಣೀರಾದದ್ದು ಸುಮ್ನೆ ಅಲ್ಲ!ಆಕೆ ಸುದ್ದಿಗೆ ಹೊಸಬರಲ್ಲ, ಆದರೂ ಅಂದು ಕಣ್ಣೀರಾದದ್ದು ಸುಮ್ನೆ ಅಲ್ಲ!

ಆದರೆ, ನಾನು ಈ ಘಟನೆಯನ್ನು ಕಣ್ಣಾರೆ ಕಂಡು, ಅಪಘಾತದಲ್ಲಿ ಚಾಲಕನು ಮೃತಪಟ್ಟಿರಬೇಕು ಎಂದುಕೊಂಡು ಐದು ಸೆಕೆಂಡುಗಳ ಕಾಲ ಕ್ಯಾಮರಾರೋಲ್ ಮಾಡಿದೆ. ಸೂಕ್ಷ್ಮವಾಗಿ ಆತನ ಉಸಿರಾಟ ಗಮನಿಸಿ ತಕ್ಷಣ ಕ್ಯಾಮೆರಾ ರೋಲಿಂಗ್ ನಿಲ್ಲಿಸಿ, ಆತನ ರಕ್ಷಣೆಗೆ ಮುಂದಾದೆ' ಎಂದರು.

Cameraman of News Channel has saved ones life with his duties

ಅಷ್ಟೇ ಅಲ್ಲ ಗಾಯಾಳುವನ್ನು ಪೊಲೀಸರ ನೆರವಿನಿಂದ ವಿಮ್ಸ್ ಆಸ್ಪತ್ರೆಗೆ ಕಳುಹಿಸಿದ ನಂತರ, ವಿಮ್ಸ್ ಆಸ್ಪತ್ರೆಯ ಸೂಪರಿಂಡೆಂಟ್ ಅವರಿಗೆ ಫೋನ್ ಮಾಡಿ, ಗಾಯಾಳುವಿನ ಮಾಹಿತಿ ಪಡೆದಿದ್ದಾರೆ.

ವಿಮ್ಸ್ ಆಸ್ಪತ್ರೆಯ ವೈದ್ಯರು "ಗಾಯಾಳು ಆಟೋ ಚಾಲಕನಿಗೆ ಚಿಕಿತ್ಸೆ ನೀಡಲಾಗಿದೆ. ಆತನ ಆರೋಗ್ಯಕ್ಕೆ ಯಾವುದೇ ಪ್ರಾಣಾಪಾಯವಿಲ್ಲ. ರಕ್ತಸ್ರಾವ ಹೆಚ್ಚಾಗಿರುವ ಕಾರಣ ಚೇತರಿಸಿಕೊಳ್ಳಲು ಸ್ವಲ್ಪಕಾಲ ಹಿಡಿಯಲಿದೆ" ಎಂದು ಒನ್ ಇಂಡಿಯಾಕ್ಕೆ ತಿಳಿಸಿದ್ದಾರೆ.

ಆದರೆ ಪೊಲೀಸರು ಮಾತ್ರ ಗಾಯಾಳು ಆಟೋ ಚಾಲಕನ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಹೆಚ್ಚಿನ ಆಸಕ್ತಿ ತೋರಿಸಿಲ್ಲ. ಅಪಘಾತ ಪ್ರಕರಣ ಕುರಿತು, ವೈದ್ಯರು, ಎಂಎಲ್ ಸಿ (ಮೆಡಿಕೋ ಲೀಗಲ್ ಕೇಸ್) ದಾಖಲಿಸಿದ್ದಾರೆ.

English summary
Cameraman of News Channel has saved one's life with his duties. Incident occurred in the Bellary district. Cameraman name Durgesh Yadav. He works in a Kannada news channel in Bellary.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X