ಏಟಿಗೆ ಎದುರೇಟು, ಶ್ರೀರಾಮುಲು ಆಪ್ತನಿಂದ ಕರುಣಾಕರ್ ರೆಡ್ಡಿ ವಿರುದ್ಧ ಕೇಸ್

ಬಳ್ಳಾರಿ, ಫೆಬ್ರವರಿ. 19 : ಮಾಜಿ ಸಚಿವ ಕರುಣಾಕರ್ ರೆಡ್ಡಿ ಮತ್ತು ಬಳ್ಳಾರಿ ಸಂಸದ ಬಿ. ಶ್ರೀರಾಮುಲು ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ.

ಸುಷ್ಮಾ ಸ್ವರಾಜ್‌ ಕಾಲೊನಿ ನಿವೇಶನಗಳ ಮಾಲೀಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಸಂಸದ ಶ್ರೀರಾಮುಲು ಸೇರಿದಂತೆ ಮೂವರ ಮೇಲೆ ದೂರು ನೀಡಿರುವ ಕರುಣಾಕರ್ ರೆಡ್ಡಿ ಮೇಲೆ ಈಗ ರಾಮುಲು ತನ್ನ ಆಪ್ತನಿಂದ ಕೇಸ್ ಜಡಿಸಿದ್ದಾರೆ.

Bellary MP B Sriramulu assistant complaint lodge against ex minister Karunakar Reddy

ಮಾಜಿ ಸಚಿವ ಕರುಣಾಕರ್ ರೆಡ್ಡಿ ಮತ್ತು ವಿಶ್ವನಾಥ್ ರೆಡ್ಡಿ ಅವರ ಮೇಲೆ ಶ್ರೀರಾಮುಲು ಆಪ್ತ ನಾಗಪ್ಪ ಎಂಬುವವರು ಜಾತಿ ನಿಂದನೆ ಪ್ರಕರಣವನ್ನು ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

ಮನೆಗೆ ಹೋಗುತ್ತಿದ್ದಾಗ ಕರುಣಾಕರ್ ರೆಡ್ಡಿ ಮತ್ತು ವಿಶ್ವನಾಥ್ ರೆಡ್ಡಿ ತಮ್ಮನ್ನು ಜಾತಿಯಿಂದ ನಿಂದಿಸಿದ್ದಾರೆ ಎಂದು ನಾಗಪ್ಪ ದೂರು ನೀಡಿದ್ದಾರೆ.

ಆಸ್ತಿ ವಿಚಾರದಲ್ಲಿ ಗೊಂದಲದ ಕಾರಣ ಮಾಜಿ ಸಚಿವ ಕರುಣಾಕರ್ ರೆಡ್ಡಿ ಅವರು ಸಂಸದ ಶ್ರೀರಾಮುಲು ಸೇರಿ ಮೂವರ ಮೇಲೆ ಬಳ್ಳಾರಿಯ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ ಬೆನ್ನೆಲ್ಲೆ ಈ ದೂರು ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+