ಬಳ್ಳಾರಿ: ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆ

ಬಳ್ಳಾರಿ, ಜೂನ್ 06 : ಜೂನ್ 04 (ರವಿವಾರ) ರ ಸಂಜೆ ಮನೆಯಿಂದ ಕಾಣೆಯಾಗಿದ್ದ ಮೂವರು ಬಾಲಕರು ಶವವಾಗಿ ಪತ್ತೆಯಾಗಿದ್ದಾರೆ.

ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ಮೂವರು ಬಾಲಕರು ಆಟವಾಡಲೆಂದು ಹೊರ ಹೋಗಿ ಜೂನ್ 04 (ರವಿವಾರ)ದಿಂದ ಕಾಣೆಯಾಗಿದ್ದರು. ಆದರೆ, ಇಂದು (ಮಂಗಳವಾರ) ಮೂವರು ಬಾಲಕರ ಮೃತದೇಹಗಳು ಗ್ರಾಮದ ಹೊರವಲಯದ ಕೆರೆಯೊಂದರಲ್ಲಿ ಪತ್ತೆಯಾಗಿವೆ.

Bellary: 3 boys dead body found in lake who missing from June 4th

ಮಾರುತಿ (10), ಮಹ್ಮದ್ ಸುಭಾನಿ(7) ಮತ್ತು ಗುರುರಾಜ್(9) ಮೃತಪಟ್ಟ ಬಾಲಕರು. ಈ ಮೂವರು ಬಾಲಕರು ಕಾಣೆಯಾದ ಬಗ್ಗೆ ಕೂಡ್ಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಹ ದಾಖಲಾಗಿತ್ತು. ಪೊಲೀಸರು ಬಾಲಕರ ಪತ್ತೆಗಾಗಿ ಶೋಧ ನಡೆಸುತ್ತಿದ್ದರು.

ಇಂದು ಮುಂಜಾನೆ ಮೂವರು ಬಾಲಕರ ಶವಗಳು ಗ್ರಾಮದ ಕೆರೆಯಲ್ಲಿ ಪತ್ತೆಯಾಗಿವೆ. ಹೀಗಾಗಿ ಬಾಲಕರು ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮೂವರು ಬಾಲಕರ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+