ಸೋಲಿನತ್ತ ಶ್ರೀರಾಮುಲು: ಒಳ ಹೊಡೆತ ಕೊಟ್ಟರೇ ಆಪ್ತಮಿತ್ರ ಜನಾರ್ದನ ರೆಡ್ಡಿ?
ಬಳ್ಳಾರಿ, ಮೇ 13: ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಫಲಿತಾಂಶಕ್ಕಾಗಿ ರಾಜ್ಯ ಕಾಯುತ್ತಿದೆ. ಮತ ಎಣಿಕೆ ಆರಂಭವಾದ ಸಮಯದಿಂದ ಬಿಜೆಪಿ ನಾಯಕರಿಗೆ ಶಾಕ್ ಆಗಿದ್ದು, ಪ್ರಮುಖ ನಾಯಕರೇ ಹಿನ್ನೆಡೆ ಸಾಧಿಸುತ್ತಿರುವುದು ಪಕ್ಷಕ್ಕೆ ತಲೆ ನೋವಾಗಿದೆ.
ಬಳ್ಳಾರಿಗ್ರಾಮೀಣ ಕ್ಷೇತ್ರದಲ್ಲಿ ಒಂಬತ್ತನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ ಗೆಲುವಿನತ್ತ ಸಾಗುತ್ತಿದ್ದಾರೆ.

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಚಿವ ಶ್ರೀರಾಮುಲುಗೆ ಹಿನ್ನಡೆಯಾಗುತ್ತಿದ್ದು, ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ 5,862 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 5032 ಮತಗಳನ್ನು ಪಡೆದಿದ್ದರು. 830 ಮತಗಳ ಅಂತರದಲ್ಲಿ ನಾಗೇಂದ್ರ ಮುನ್ನಡೆ ಸಾಧಿಸಿದ್ದರು.
ಮೂರನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ 15079 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 12203 ಮತಗಳನ್ನು ಪಡೆದಿದ್ದರು. 2876 ಮತಗಳ ಅಂತರದಲ್ಲಿ ನಾಗೇಂದ್ರ ಮುನ್ನಡೆ ಸಾಧಿಸಿದ್ದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಐದನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ 27,000 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 18601 ಮತಗಳನ್ನು ಪಡೆದಿದ್ದು, 9199 ಮತಗಳ ಅಂತರದಲ್ಲಿ ನಾಗೇಂದ್ರ ಮುನ್ನಡೆ ಸಾಧಿಸಿದ್ದರು.
ಬಳ್ಳಾರಿ ಗ್ರಾಮೀಣ ಕ್ಷೇತ್ರದ ಒಂಬತ್ತನೇ ಸುತ್ತಿನ ಮತ ಎಣಿಕೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ನಾಗೇಂದ್ರ 54,889 ಮತಗಳನ್ನು ಪಡೆದಿದ್ದರೆ, ಬಿಜೆಪಿ ಅಭ್ಯರ್ಥಿ ಶ್ರೀರಾಮುಲು 32160 ಪಡೆದಿದ್ದು, ಬರೋಬ್ಬರಿ 22,729 ಮತಗಳ ಅಂತರದಲ್ಲಿ ನಾಗೇಂದ್ರ ಮುನ್ನಡೆ ಸಾಧಿಸಿದ್ದಾರೆ.
ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ನಾಗೇಂದ್ರ ಗೆಲುವಿನತ್ತ ಸಾಗುತ್ತಿದ್ದರೆ, ಶ್ರೀರಾಮುಲುಗೆ ತೀವ್ರ ಹಿನ್ನಡೆಯಾಗಿದೆ. ಕ್ಷೇತ್ರದಲ್ಲಿ ಗೆಲುವಿನ ನಿರೀಕ್ಷೆಯಲಿದ್ದ ಶ್ರೀರಾಮುಲುಗೆ ಆಪ್ತಮಿತ್ರ ಜನಾರ್ದನ ರೆಡ್ಡಿ ಅವರ ನಡೆಯಿಂದ ಹಿನ್ನಡೆಯಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ತಮ್ಮ ತವರು ಜಿಲ್ಲೆಯಾದ ಬಳ್ಳಾರಿಯಲ್ಲಿ ಹಿಡಿತ ಹೊಂದಿದ್ದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನಾಯಕ ಜನಾರ್ದನ ರೆಡ್ಡಿ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರಾ ಎನ್ನುವ ಅನುಮಾನ ಮೂಡಿದೆ ಎನ್ನಲಾಗಿದೆ.












Click it and Unblock the Notifications