ಬಳ್ಳಾರಿಯಲ್ಲಿ ಮತ ಚಲಾಯಿಸಿದ ಬಿಜೆಪಿ ಅಭ್ಯರ್ಥಿ, ಶ್ರೀರಾಮುಲು ತಾಯಿ
ಬಳ್ಳಾರಿ, ಮೇ 12: ನನ್ನ ಮಗನಿಗೆ ಒಳ್ಳೆಯದಾಗಲಿ, ಆತನಿಗೆ ದೇವರ ಅನುಗ್ರಹ ಇದೆ. ಭಗವಂತನ ಕೃಪೆ ಇದ್ದರೆ ಸಿಎಂ ಆಗ್ತಾನೆ. ಬಿಜೆಪಿ ಈ ಬಾರಿ ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದು ಸಂಸದ ಬಿ.ಶ್ರೀರಾಮುಲು ಮಾತೋಶ್ರೀ ಹೊನ್ನೂರಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಬಳ್ಳಾರಿಯ ದೇವಿನಗರದಲ್ಲಿ ಮಗನಿಗೆ ಹಾರೈಸಿದ ಅವರು 52 ನೇ ಮತಗಟ್ಟೆಯಲ್ಲಿ ಮತ ಹಾಕಿ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

In Pics: ಮತದಾನ ಪರ್ವದಲ್ಲಿ ಮತದಾರ ಮಹಾಪ್ರಭು
ಇದೇ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಉಜ್ಜಯಿನಿ ಗ್ರಾಮದಲ್ಲಿ ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಕ್ಷೇತ್ರದ ಸಮೀಪದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಶ್ರೀ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ರಾಜದೇಶೀಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಮತದಾನ ಮಾಡಿದರು.

ಹಾಗೆಯೇ ಬಳ್ಳಾರಿ ಗ್ರಾಮಿಣ ಬಿಜೆಪಿ ಅಭ್ಯರ್ಥಿ ಫಕ್ಕೀರಪ್ಪ ಹಾಗೂ ಬಳ್ಳಾರಿಯ ದೇವಿನಗರದ ಮತಗಟ್ಟೆ 52 ರಲ್ಲಿ ಮಾಜಿ ಸಂಸದೆ ಶಾಂತಾ ಮತದಾನ ಮಾಡಿದರು.












Click it and Unblock the Notifications