ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ : ಶ್ರೀರಾಮುಲು

ಬಳ್ಳಾರಿ, ಏ.15 : ರಾಜಕಾರಣದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡು ಶಾಸಕನಾಗಿ, ಸಂಸದನಾಗಿ ನಿಮ್ಮ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಸದ್ಯ ಸಂಸತ್ ಚುನಾವಣೆಯಲ್ಲಿ ನನಗೆ ಬೆಂಬಲ ನೀಡುವ ಮೂಲಕ ನಿಮ್ಮ ಸೇವೆ ಮಾಡುವ ಅವಕಾಶ ಮಾಡಿಕೊಡಿ ಎಂದು ಬಳ್ಳಾರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಜನರಿಗೆ ಮಾನವಿ ಮಾಡಿದ್ದಾರೆ.

ಸೋಮವಾರ ಕೌಲ್‍ ಬಜಾರ್ 9ನೇ ವಾರ್ಡಿನಲ್ಲಿ ಬಿಜೆಪಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಬಿ.ಶ್ರೀರಾಮುಲು, ಈಗಾಗಲೇ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಸಂಚರಿಸಿ ಮತಯಾಚನೆ ಮಾಡಿದ್ದೇನೆ. ಜನರು ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳುತ್ತಿದ್ದಾರೆ ಎಂದರು.

B Sriramulu

ಕಳೆದ 15 ದಿನಗಳಿಂದ ಕ್ಷೇತ್ರದಲ್ಲಿ ಪ್ರಚಾರ ನಡೆಸುತ್ತಿದ್ದೇನೆ. ಈ ಹಿಂದೆ ನನ್ನನ್ನು ಶಾಸಕನಾಗಿ ಆಯ್ಕೆ ಮಾಡಿದ್ದೀರಿ. ಸಂಸದನಾಗಲು ನೀವು ಬೆಂಬಲ ನೀಡಿದರೆ, ನನ್ನ ಕೊನೆಯ ಉಸಿರಿರುವ ತನಕ ನಿಮ್ಮ ಸೇವೆ ಮಾಡುತ್ತೇನೆ ಎಂದು ಶ್ರೀರಾಮುಲು ಜನರಿಗೆ ಭರವಸೆ ನೀಡಿದರು. [ಶ್ರೀರಾಮುಲು ಪ್ರಚಾರದ ಚಿತ್ರಗಳನ್ನು ನೋಡಿ]

ಬಳ್ಳಾರಿ ಜಿಲ್ಲೆಯಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯಬೇಕಾಗಿವೆ. ಹಿಂದುಳಿದ ನನ್ನ ಜಿಲ್ಲೆಯ ಅಭಿವೃದ್ಧಿಗಾಗಿ, ನನ್ನ ಜನರ ಬೆಳವಣಿಗೆಗೆ ಮತ್ತು ಎಲ್ಲಾ ಸಮುದಾಯದ ಸಮುದಾಯದ ರಕ್ಷಣೆಗಾಗಿ ದುಡಿಯುತ್ತೇನೆ ಎಂದು ಶ್ರೀರಾಮುಲು ಹೇಳಿದರು. ಇದೇ ವೇಳೆ 9ನೇ ವಾರ್ಡಿನ ಪಾಲಿಕೆ ಸದಸ್ಯ ರಾಜ್‍ ಕುಮಾರ್, ಕೂಡ್ಲಿಗಿಯ ಹೆಸರಾಂತ ವೈದ್ಯ ಡಾ.ರಮೇಶ್ ಪೂಜಾರಿ ಮುಂತಾದವರು ಬಿಜೆಪಿ ಸೇರ್ಪಡೆಗೊಂಡರು. [ಶ್ರೀರಾಮುಲು ಗೆಲ್ಲಿಸಿ ಮುಸ್ಲಿಂ ಮುಖಂಡರ ಮನವಿ]

ಅಂದಹಾಗೆ ಬಳ್ಳಾರಿಯಲ್ಲಿ ಸುಮಾರು 44,932 ಹೊಸ ಮತದಾರರು ಈ ಬಾರಿ ಸೇರ್ಪಡೆಗೊಂಡಿದ್ದಾರೆ. 5,74,030 ಮತದಾರರು ಜಿಲ್ಲೆಯಲ್ಲಿದ್ದಾರೆ. ಅದರಲ್ಲೂ ಹೆಚ್ಚಿನ ಮತದಾರರು ಶ್ರೀರಾಮುಲು ಶಾಸಕರಾಗಿದ್ದ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದವರು. 2008ರ ವಿಧಾನಸಭೆ ಚುನಾವಣೆಯಿಂದ ದೇಶದ ಗಮನ ಸೆಳೆಯುವ ಪ್ರತಿಷ್ಠಿತ ಕ್ಷೇತ್ರ ಬಳ್ಳಾರಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+