ತಂದೆ ಎದುರೇ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ: ಕಾರಣ ನಿಗೂಢ
ಬಾಗಲಕೋಟೆ, ಡಿಸೆಂಬರ್ 14: ತಂದೆಯ ಎದುರೇ ಚಲಿಸುವ ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆಯಲ್ಲಿ ಗುರುವಾರ ನಡೆದಿದೆ.
ನಗರದ ಶಿರೂರು ರೈಲ್ವೆ ಗೇಟ್ ಬಳಿ ಈ ಅಪಘಾತ ಸಂಭವಿಸಿದೆ, ತಾಲೂಕಿನ ಗುಳಬಾಳ ತಾಂಡಾದ ಹೆಸ್ಕಾಂ ಲೈನ್‌ಮೆನ್ ಆಗಿ ಕೆಲಸ ಮಾಡುತ್ತಿದ್ದ ಪರಶುರಾಮ(27) ಆತ್ಮಹತ್ಯೆ ಮಾಡಿಕೊಂಡವರು.
ಪರಶುರಾಮ ಬಾಗಲಕೋಟೆಯಿಂದ ತನ್ನ ತಂದೆಯ ಜತೆಗೆ ಬೈಕ್ ಮೇಲೆ ಹರಟಿದ್ದ ಶಿರೂರು ರೈಲ್ವೆ ಗೇಟ್ ಬಳಿ ರೈಲು ಆಗಮಿಸುವ ಹಿನ್ನೆಲೆಯಲ್ಲಿ ಗೇಟ್ ಅಳವಡಿಸಲಾಗಿತ್ತು. ರೈಲು ಬರುತ್ತಿದ್ದಂತೆ ಬೈಕ್ ಹಿಂಬದಿ ಕುಳಿತಿದ್ದ ಪರಶುರಾಮ ಇಳಿದು, ಓಡುತ್ತಾ ರೈಲ್ವೆ ಹಳಿಯ ಮೇಲೆ ಮಲಗಿಕೊಂಡಿದ್ದಾನೆ.

ತಂದೆ ಹಿಡಿಯಲು ಓಡಿದರೂ ಕೈಗೆ ಸಿಗಲಿಲ್ಲ. ರೈಲು ಯುವಕನ ಕುತ್ತಿಗೆ ಮೇಲೆ ಹಾಯ್ದು, ದೇಹ ಮತ್ತು ಕೊತ್ತಿಗೆ ತುಂಡಾಗಿದೆ ಆದರೆ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ, ಪೊಲೀಸರು ತನಿಖೆ ಆರಂಭಿಸಿದ್ದಾರೆ.












Click it and Unblock the Notifications