• search
 • Live TV
ಬಾಗಲಕೋಟೆ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಗಲಕೋಟೆ: 6 ಸಾವಿರ ರಾಷ್ಟ್ರಧ್ವಜ ತಯಾರಿಸಿ ದೇಶಭಕ್ತಿ ಮೆರೆಯುತ್ತಿರುವ ಮಹಿಳೆಯರು

By ಬಾಗಲಕೋಟೆ ಪ್ರತಿನಿಧಿ
|
Google Oneindia Kannada News

ಬಾಗಲಕೋಟೆ, ಆಗಸ್ಟ್‌, 13: ದೇಶಾದ್ಯಂತ 75ನೇ ಅಮೃತ ಮಹೋತ್ಸವ ಸಂಭ್ರಮ ನಡೆಯುತ್ತಿದೆ. ಅದರ ಭಾಗವಾಗಿ ಕಚೇರಿ, ಸಂಘ, ಸಂಸ್ಥೆ, ಮನೆ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಹಾಗೆಯೇ ಬಾಗಲಕೋಟೆ ಜಿಲ್ಲೆಯಲ್ಲೂ 75ನೇ ಅಮೃತ ಮಹೋತ್ಸವಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ.

ಈ ಹಿನ್ನಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ರಾಷ್ಟ್ರಧ್ವಜಗಳನ್ನ ತಯಾರಿಸುತ್ತಿರುವ ಕಾರ್ಯ ಭರದಿಂದ ಸಾಗಿದೆ. ಗ್ರಾಮೀಣ ಮಹಿಳಾ ಸಂಘದ ವತಿಯಿಂದ ರಾಷ್ಟ್ರಧ್ವಜ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಮೂಲಕ ಮಹಿಳೆಯರಲ್ಲಿಯೂ ದೇಶಾಭಿಮಾನದ ಬಗ್ಗೆ ಹರಿವು ಮೂಡಿಸಲಾಗಿದೆ.

ಒಂದೆಡೆ ಮಹಿಳೆಯರ ರಾಷ್ಟ್ರಧ್ವಜಗಳನ್ನು ಹೊಲಿಯುತ್ತಿದ್ದರೆ, ಮತ್ತೊಂದೆಡೆ ತಯಾರಾಗಿರುವ ರಾಷ್ಟ್ರಧ್ವಜಗಳನ್ನ ಜೋಡಿಸುತ್ತಿದ್ದಾರೆ. ಬಾಗಲಕೋಟೆ ಜಿಲ್ಲೆಯ ಗ್ರಾಮೀಣ ಭಾಗದ ಮಹಿಳೆಯರು ರಾಷ್ಟ್ರಧ್ವಜಗಳನ್ನು ಕೈಯಲ್ಲಿ ಹಿಡಿದು ಹೆಮ್ಮೆಯಿಂದ ದೇಶಾಭಿಮಾನ ಮೆರೆಯುತ್ತಿದ್ದಾರೆ. ಅಂದಹಾಗೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ತಾಲೂಕಿನ ಕಟಗೇರಿ ಗ್ರಾಮದಲ್ಲಿ ಇಂತಹವೊಂದು ಅದ್ಭುತ ದೃಶ್ಯ ಕಂಡುಬಂದಿದೆ. ಇಲ್ಲಿ ಶ್ರೀ ಚಾಮುಂಡೇಶ್ವರಿ ಕಟಗೇರಿ ಗ್ರಾಮ ಪಂಚಾಯತ್ ಮಟ್ಟದ ಸಂಜೀವಿನಿ ಯೋಜನಾ ಮಹಿಳಾ ಒಕ್ಕೂಟವಿದೆ. ಈ ಒಕ್ಕೂಟ ಗ್ರಾಮೀಣ ಭಾಗದಲ್ಲಿ ಮಹಿಳೆಯರ ಪಾಲಿಗೆ ವರದಾನವಾಗಿದೆ. ಕಟಗೇರಿ ಮತ್ತು ಕೊಂಕಣಕೊಪ್ಪ ವ್ಯಾಪ್ತಿಯ 92 ಮಹಿಳಾ ಸಂಘಗಳು ಇದರ ವ್ಯಾಪ್ತಿಯಲ್ಲಿವೆ.

 ರಾಷ್ಟ್ರಧ್ವಜಗಳನ್ನು ತಯಾರಿಸಿದ ಮಹಿಳೆಯರು

ರಾಷ್ಟ್ರಧ್ವಜಗಳನ್ನು ತಯಾರಿಸಿದ ಮಹಿಳೆಯರು

ಈ ಮಹಿಳಾ ಒಕ್ಕೂಟ ವಿವಿಧ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ. ಈ ಒಕ್ಕೂಟಕ್ಕೆ ಇದೀಗ ರಾಷ್ಟ್ರಧ್ವಜದ ಬಟ್ಟೆಯನ್ನ ತಯಾರಿಸುವ ಹೊಣೆ ನೀಡಲಾಗಿದೆ. ಗುಳೇದಗುಡ್ಡ ತಾಲೂಕಿನಾದ್ಯಂತ ಅಗತ್ಯವಾಗಿರುವ 6 ಸಾವಿರ ರಾಷ್ಟ್ರಧ್ವಜ ನಿರ್ಮಿಸಲು 30ಕ್ಕೂ ಅಧಿಕ ಮಹಿಳೆಯರು ಮುಂದಾಗಿದ್ದಾರೆ. ಸದ್ಯ 14 ದಿನಗಳಲ್ಲಿ ಬರೋಬ್ಬರಿ 5 ಸಾವಿರಕ್ಕೂ ಅಧಿಕ ರಾಷ್ಟ್ರಧ್ವಜಗಳನ್ನ ತಯಾರಿಸಿದ್ದು, ಇದು ನಮ್ಮ ಹೆಮ್ಮೆಯ ಕಾರ್ಯ ಎಂದು ಇವರು ಹೇಳುತ್ತಿದ್ದಾರೆ. ಒಕ್ಕೂಟದ ಬಗ್ಗೆ ಮುಖಂಡರಾದ ಶೀಲಾ ಮೇಟಿ ಎಂಬುವವರು ಹೀಗೆ ಸವಿವರವಾದ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

 ರಾಷ್ಟ್ರಧ್ವಜ ತಯಾರಿಸುವಲ್ಲಿ ಮಹಿಳೆಯರ ಶ್ರಮ

ರಾಷ್ಟ್ರಧ್ವಜ ತಯಾರಿಸುವಲ್ಲಿ ಮಹಿಳೆಯರ ಶ್ರಮ

ಇನ್ನು ರಾಷ್ಟ್ರಧ್ವಜ ತಯಾರು ಮಾಡುವುದು ಅಂದರೆ ಅಷ್ಟು ಸುಲಭದ ಮಾತಲ್ಲ. ಹೀಗಾಗಿ ಸರ್ಕಾರದ ನಿಯಮಾನುಸಾರವಾಗಿಯೇ ರಾಷ್ಟ್ರಧ್ವಜಗಳನ್ನ ತಯಾರಿಸಲು ಕಟಗೇರಿಯ ಚಾಮುಂಡೇಶ್ವರಿ ಮಹಿಳಾ ಒಕ್ಕೂಟ ಮುಂದಾಗಿತ್ತು. 6 ಸಾವಿರ ರಾಷ್ಟ್ರಧ್ವಜಗಳನ್ನು ತಯಾರಿಸುವ ಹೊಣೆ ಹೊತ್ತ ಒಕ್ಕೂಟದ ಮಹಿಳೆಯರು ಮನೆಯ ಕೆಲಸಗಳನ್ನೂ ಸಹ ಬದಿಗೊತ್ತಿದ್ದರು. ಹೀಗೆ ಇವರು ರಾಷ್ಟ್ರಧ್ವಜ ತಯಾರಿಸುವ ಕಾರ್ಯಕ್ಕೆ ಮುಂದಾಗಿದ್ದರು.

 ಹೊಲಿಗೆ ಬಾರದೇ ಇದ್ದವರು ಮಾಡಿದ್ದೇನು?

ಹೊಲಿಗೆ ಬಾರದೇ ಇದ್ದವರು ಮಾಡಿದ್ದೇನು?

ಹೊಲಿಗೆ ಬಂದವರು ರಾಷ್ಟ್ರಧ್ವಜ ಹೊಲಿಯಲು ಮುಂದಾದರೆ, ಹೊಲಿಗೆ ಬಾರದೇ ಇದ್ದವರು ಬಟ್ಟೆ ಕತ್ತರಿಸುವ ಕೆಲಸವನ್ನು ಮಾಡುತ್ತಿದ್ದರು. ಅಲ್ಲದೇ ಇವರು ಕಸಿ ಕಟ್ಟುವುದುದು, ರಾಷ್ಟ್ರಧ್ವಜಗಳನ್ನು ಅಚ್ಚುಕಟ್ಟಾಗಿ ಜೋಡಿಸುವುದು ಸೇರಿದಂತೆ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಈ ಮೂಲಕ ಪ್ರತಿಯೊಬ್ಬ ಮಹಿಳಾ ಒಕ್ಕೂಟದ ಸದಸ್ಯರು ರಾಷ್ಟ್ರಧ್ವಜ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

 ಕಟಗೇರಿ ಗ್ರಾಮದ ಮಹಿಳೆಯರ ದೇಶಭಕ್ತಿ

ಕಟಗೇರಿ ಗ್ರಾಮದ ಮಹಿಳೆಯರ ದೇಶಭಕ್ತಿ

ಒಟ್ಟಿನಲ್ಲಿ ಒಂದೆಡೆ ಇಡೀ ರಾಷ್ಟ್ರವ್ಯಾಪಿ 75ನೇ ಅಮೃತ ಮಹೋತ್ಸವಕ್ಕೆ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಬಾಗಲಕೋಟೆ ಜಿಲ್ಲೆಯಲ್ಲಿ ಮಹಿಳಾ ಒಕ್ಕೂಟಗಳು ರಾಷ್ಟ್ರಧ್ವಜಗಳನ್ನು ತಯಾರಿಸುವ ಮೂಲಕ ದೇಶ ಸೇವಾ ಕಾರ್ಯದಲ್ಲಿ ತೊಡಗಿದ್ದು, ಹೆಮ್ಮೆಯ ಸಂಗತಿಯಾಗಿದೆ. ದೇಶಾದ್ಯಂತ ಈಗಾಗಲೇ ಸ್ವಾತಂತ್ರ್ಯೋತ್ಸಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಹಾಗೆಯೇ ಬಾಗಲಕೋಟೆ ಜಿಲ್ಲೆಯ ಕಟಗೇರಿ ಗ್ರಾಮದಲ್ಲಿ ಮಹಿಳೆಯರು ತಮ್ಮ ಕೆಲಸಗಳನ್ನು ಬದಿಗೊತ್ತಿ ರಾಷ್ಟ್ರಧ್ವಜಗಳನ್ನು ತಯಾರಿಸುವ ಮೂಲಕ ದೇಶಭಕ್ತಿ ಮೆರೆದಿದ್ದಾರೆ.

Recommended Video

   ಚಾಮರಾಜನಗರದಲ್ಲಿ 750ಮೀಟರ್ ಉದ್ದದ ರಾಷ್ಟ್ರ ಧ್ವಜ ಪ್ರದರ್ಶನ | *Karnataka | OneIndia Kannada
   English summary
   75th Indipendence day: Katageri village of Bagalkote district, womens making 6 thousands national flags, show patriotism.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X